ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ, ಬಿರುಸಿನ ಚುನಾವಣಾ ಚಟುವಟಿಕೆಗಳು, ರಾಜಕೀಯ ಒತ್ತಡದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಮತ್ತೆ ಜಾರಿ ನಿರ್ದೇಶನಾಲಯ ನೊಟೀಸ್ ಕಳುಹಿಸಿದೆ. ಬೆಂಗಳೂರು: ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ, ಬಿರುಸಿನ ಚುನಾವಣಾ ಚಟುವಟಿಕೆಗಳು, ರಾಜಕೀಯ ಒತ್ತಡದ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಮತ್ತೆ ಜಾರಿ ನಿರ್ದೇಶನಾಲಯ ನೊಟೀಸ್ ಕಳುಹಿಸಿದೆ.
ಫೆಬ್ರವರಿ 22ರೊಳಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನಲ್ಲಿ ಡಿ ಕೆ ಶಿವಕುಮಾರ್ ಗೆ ಸೂಚಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ತಮ್ಮ ಮಗಳ ಶಿಕ್ಷಣ ಸಂಸ್ಥೆಗೆ ನೊಟೀಸ್ ಬಂದಿದೆ. ಮಗಳ ಶಾಲೆಯ ಫೀಸು ಎಷ್ಟಿದೆ, ಪರೀಕ್ಷೆ ಫಲಿತಾಂಶ ವಿವರ ಕೇಳಿ ನೊಟೀಸ್ ಕಳುಹಿಸಿದ್ದಾರೆ. ನಾನು ಏನು ಉತ್ತರ ಕೊಡಲಿ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ನೊಟೀಸ್ ವಿರೋಧ ಪಕ್ಷಗಳ ಕುತಂತ್ರವಾಗಿದೆ, ಕೆಲ ಸಮಯಗಳ ಹಿಂದಷ್ಟೇ ಇಡಿ ನೊಟೀಸ್ ಬಂದು ಉತ್ತರ ಕೊಟ್ಟು ಬಂದಿದ್ದೆ. ಈಗ ಮತ್ತೆ ಹೋಗ್ಬೇಕು, ರಾಜಕೀಯ ಒತ್ತಡ ಮಧ್ಯೆ ನಾನು ಏನು ಮಾಡಲಿ ಹೇಳಿ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯ ಚುನಾವಣೆ ಹೊಸ್ತಿಲಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ ಮತ್ತೆ ಜಾರಿ ನಿರ್ದೇಶನಾಲಯ ನೊಟೀಸ್ ಕಳುಹಿಸಿದೆ.ಫೆಬ್ರವರಿ 22ರೊಳಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನಲ್ಲಿ ಡಿ ಕೆ ಶಿವಕುಮಾರ್ ಗೆ ಸೂಚಿಸಲಾಗಿದೆ. @XpressBengaluru pic.twitter.com/kPXnEbYAMT— kannadaprabha (@KannadaPrabha) February 8, 2023