Home Uncategorized ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ ಯಶಸ್ವಿಗೆ ಕಾರಣ ತಿಳಿಸಿದ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ

ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ ಯಶಸ್ವಿಗೆ ಕಾರಣ ತಿಳಿಸಿದ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ

19
0

ಆಸ್ಟ್ರೇಲಿಯಾ ವಿರುದ್ಧ 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ತನ್ನ ಆರಂಭಿಕ ಪಂದ್ಯದಲ್ಲಿ ಅಜೇಯ 97 ರನ್‌ ಗಳಿಸಿದ ಕೆ.ಎಲ್‌ ರಾಹುಲ್‌ ಅವರನ್ನು ಭಾರತ ತಂಡದ ಮಾಜಿ ನಾಯಕ ಹಾಗೂ ಮಾಜಿ ಹೆಡ್‌ ಕೋಚ್‌ ಅನಿಲ್‌ ಕುಂಬ್ಳೆ ಗುಣಗಾಣ ಮಾಡಿದ್ದಾರೆ. ಅಷ್ಟೇ ಅಲ್ಲದೆ ಕೆ.ಎಲ್‌ ರಾಹುಲ್ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾಗಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ

ಇಎಸ್‌ಪಿಎನ್‌ ಕ್ರಿಕ್‌ಇನ್ಪೋ ಜೊತೆ ಮಾತನಾಡಿದ ಅನಿಲ್‌ ಕುಂಬ್ಳೆ ಕೆ.ಎಲ್‌ ರಾಹುಲ್‌ ಸ್ವಲ್ಪ ದಿನಗಳ ಕಾಲ ವಿರಾಮ ಪಡೆದಿರುವುದು ಅವರಿಗೆ ತುಂಬಾ ಸಹಾಯ ಮಾಡಿದೆ. ಆಟದ ಅರಿವು ಹಾಗೂ ಕಠಿಣ ಸಂದರ್ಭಗಳಲ್ಲಿ ಸ್ಥಿರವಾಗಿ ಆಡುವ ದೃಢತೆ ಕೆ.ಎಲ್‌ ರಾಹುಲ್‌ ಅವರಲ್ಲಿನ ಪ್ರಭಾವಶಾಲಿ ಅಂಶ ಎಂದು ಸ್ಪಿನ್‌ ದಿಗ್ಗಜ ತಿಳಿಸಿದ್ದಾರೆ.

ಕ್ರಿಕೆಟ್‌ನಿಂದ ವಿರಾಮ ಪಡೆದಿರುವುದು ಕೆಎಲ್ ರಾಹುಲ್ ಅವರಿಗೆ ಸಹಾಯ ಮಾಡಿದೆ. ಆಟದ ಅರಿವಿನ ಬಗ್ಗೆ ಹಾಗೂ ಒತ್ತಡದಂತಹ ಕಠಿಣ ಸನ್ನಿವೇಶಗಳಲ್ಲಿ ಹೇಗೆ ಆಡಬೇಕು ಹಾಗೂ ದೃಢತೆಯನ್ನು ಸ್ಥಿರವಾಗಿ ಹೇಗೆ ಕಾಪಾಡಿಕೊಳ್ಳಬೇಕೆಂಬ ವಿಷಯದಲ್ಲಿ ರಾಹುಲ್‌ ಪರಿಪಕ್ವತೆಯನ್ನು ಸಾಧಿಸಿದ್ದಾರೆ. ಇವರ ಕೌಶಲ, ಇವರ ಪ್ರತಿಭೆ ಹಾಗೂ ಫಾಸ್ಟ್‌ ಬೌಲಿಂಗ್‌ ಮತ್ತು ಸ್ಪಿನ್ನರ್‌ಗಳಿಗೆ ಹೇಗೆ ಆಡುತ್ತಾರೆಂಬ ಬಗ್ಗೆ ನಮ್ಮೆಲ್ಲರಿಗೂ ಚೆನ್ನಾಗಿ ಗೊತ್ತಿದೆ. ಆದರೆ, ತಂಡದ ಅಗತ್ಯಕ್ಕೆ ತಕ್ಕಂತೆ ಹೇಗೆ ಆಡಬೇಕೆಂಬ ಸಂಗತಿಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಇದು ನಿಜಕ್ಕೂ ಅಸಾಧರಣವಾದದ್ದು,” ಎಂದು ಅನಿಲ್‌ ಕುಂಬ್ಳೆ ಶ್ಲಾಘಿಸಿದ್ದಾರೆ.

ಕಳೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಸಂದರ್ಭದಲ್ಲಿ ಕೆಎಲ್‌ ರಾಹುಲ್‌ ಅವರು ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿದ್ದರು ಹಾಗೂ ಬಲ ತೊಡೆಯ ಭಾಗದಲ್ಲಿ ಅವರು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಹಲವು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಗಾಯದಿಂದ ಗುಣಮುಖರಾದ ಬಳಿಕ ಅವರು ಏಷ್ಯಾ ಕಪ್‌ ಟೂರ್ನಿಯಲ್ಲಿ ಕಮ್‌ಬ್ಯಾಕ್‌ ಮಾಡಿದ್ದರು ಹಾಗೂ ಪಾಕಿಸ್ತಾನ ವಿರುದ್ಧ ಸೂಪರ್‌-4ರ ಪಂದ್ಯದಲ್ಲಿ ಶತಕ ಸಿಡಿಸಿದ್ದರು.

The post ಕೆ.ಎಲ್‌ ರಾಹುಲ್‌ ಬ್ಯಾಟಿಂಗ್‌ ಯಶಸ್ವಿಗೆ ಕಾರಣ ತಿಳಿಸಿದ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ appeared first on Ain Live News.

LEAVE A REPLY

Please enter your comment!
Please enter your name here