Home Uncategorized ಕೆ-ಸೆಟ್ ಆಪ್ಷನ್ ಎಂಟ್ರಿ: ಮೊದಲ ದಿನವೇ 30,000 ಮಂದಿ ನೋಂದಣಿ!

ಕೆ-ಸೆಟ್ ಆಪ್ಷನ್ ಎಂಟ್ರಿ: ಮೊದಲ ದಿನವೇ 30,000 ಮಂದಿ ನೋಂದಣಿ!

11
0

ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಹಾಗೂ ನೀಟ್ ಅಭ್ಯರ್ಥಿಗಳು ಆದ್ಯತೆ ಅನುಸಾರ ಕಾಲೇಜು, ಕೋರ್ಸುಗಳ ಆಯ್ಕೆ ದಾಖಲಿಸುವ ಪ್ರಕ್ರಿಯೆ (ಆಪ್ಷನ್ ಎಂಟ್ರಿ) ಭಾನುವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು 5 ಲಕ್ಷ ಆಯ್ಕೆಗಳನ್ನು ದಾಖಲಿಸಿದ್ದಾರೆ. ಬೆಂಗಳೂರು: ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಹಾಗೂ ನೀಟ್ ಅಭ್ಯರ್ಥಿಗಳು ಆದ್ಯತೆ ಅನುಸಾರ ಕಾಲೇಜು, ಕೋರ್ಸುಗಳ ಆಯ್ಕೆ ದಾಖಲಿಸುವ ಪ್ರಕ್ರಿಯೆ (ಆಪ್ಷನ್ ಎಂಟ್ರಿ) ಭಾನುವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು 5 ಲಕ್ಷ ಆಯ್ಕೆಗಳನ್ನು ದಾಖಲಿಸಿದ್ದಾರೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರಿವು ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಿತ್ತು. ಆದರೆ, ಆರಂಭದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿತ್ತು. ಮೊದಲ 2 ಗಂಟೆಗಳ ಕಾಲ ಸರ್ವರ್ ಸಮಸ್ಯೆಯಿಂದ ಆಯ್ಕೆಗಳನ್ನು ದಾಖಲಿಸಲಾಗಲಿಲ್ಲ. ಬಳಿಕ ಸಂಬಂಧಿಸಿದ ಕಂಪ್ಯೂಟರ್ ಎಂಜಿನಿಯರ್ ಗಳು ಸಮಸ್ಯೆ ಪರಿಹರಿಸಿದ ನಂತರ ಅಭ್ಯರ್ಥಿಗಳು ಸರಾಗವಾಗಿ ತಮ್ಮ ಆದ್ಯತೆಯ ಕೋರ್ಸುಗಳನ್ನು ಆಯ್ಕೆ ಮಾಡಿದ್ದಾರೆಂದು ಪ್ರಾಧಿಕಾರಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

5 ಲಕ್ಷ ಆಪ್ಷನ್ ಎಂಟ್ರಿಗಳ ಪೈಕಿ 3 ಲಕ್ಷ ಎಂಟ್ರಿಗಳು ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಸಂಬಂಧಿಸಿವೆ. ವೈದ್ಯಕೀಯ ಕೋರ್ಸಿಗೆ 1.25 ಲಕ್ಷ ಆಯ್ಕೆಗಳು ದಾಖಲಾಗಿವೆ.

ಉಳಿದ 75 ಸಾವಿರ ಆಪ್ಷನ್ ಎಂಟ್ರಿಗಳು ಕೃಷಿ, ಪಶುವೈದ್ಯಕೀಯ ಸೇರಿದಂತೆ ಇನ್ನಿತರೆ ಕೋರ್ಸುಗಳಿಗೆ ಸಂಬಂಧಿಸಿದ್ದಾಗಿವೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ಎಲ್ಲಾ ಕೋರ್ಸ್ ಗಳಿಗೂ ಏಕಕಾಲದಲ್ಲಿ ಆದ್ಯತೆಯನುಸಾರ ಆಪ್ಷನ್ ಎಂಟ್ರಿ ಮಾಡಲು ಅವಕಾಶ ನೀಡಲಾಗಿದೆ. ಆಪ್ಷನ್ ಎಂಟ್ರಿಗೆ ಇದೇ ಆ.9ರವರೆಗೆ ಅವಕಾಶ ಇದ್ದು, 10ರಂದು ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ. ಅಣಕು ಫಲಿತಾಂಶ ಬಂದ ನಂತರ ಅಂದರೆ ಆ.11ರಿಂದ 14ರ ಬೆಳಿಗ್ಗೆ 11ರವರೆಗೂ ತಮ್ಮ ಆಪ್ಷನ್ ಗಳನ್ನು ಬದಲಿಸಲು ಅವಕಾಶ ಇರುತ್ತದೆ. ಆ.16ರಂದು ಸಂಜೆ 6 ಗಂಟೆಗೆ ಮೊದಲ ಸುತ್ತಿನ ನೈಜ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here