Home Uncategorized ಕೇಂದ್ರದ ಹೆಚ್ಚುವರಿ ಹಣದಿಂದಾಗಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ನೀಡಲು ಸಾಧ್ಯವಾಯಿತು: ಮಾಜಿ ಸಿಎಂ ಬೊಮ್ಮಾಯಿ

ಕೇಂದ್ರದ ಹೆಚ್ಚುವರಿ ಹಣದಿಂದಾಗಿ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳ ನೀಡಲು ಸಾಧ್ಯವಾಯಿತು: ಮಾಜಿ ಸಿಎಂ ಬೊಮ್ಮಾಯಿ

20
0

ಕೋವಿಡ್ ನಂತರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿಗಳ ಮೇಲೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಅದರ ಪರಿಣಾಮ ಹೆಚ್ಚುವರಿ ಬಜೆಟ್ ಮಂಡಿಸಲು ಸಾಧ್ಯವಾಯಿತು. ಇದರ ಪರಿಣಾಮದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ… ಬೆಂಗಳೂರು: ಕೋವಿಡ್ ನಂತರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಮತ್ತೆ ಹಳಿಗಳ ಮೇಲೆ ತರಲು ಸಾಕಷ್ಟು ಪ್ರಯತ್ನಗಳನ್ನು ಮಾಡಲಾಯಿತು. ಅದರ ಪರಿಣಾಮ ಹೆಚ್ಚುವರಿ ಬಜೆಟ್ ಮಂಡಿಸಲು ಸಾಧ್ಯವಾಯಿತು. ಇದರ ಪರಿಣಾಮದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗ್ಯಾರಂಟಿ ಯೋಜನೆಗಳಿಗೆ ದಾರಿಯಾಯಿತು. ಇಲ್ಲದಿದ್ದರೆ ಗ್ಯಾರಂಟಿ ಯೋಜನೆಗಳ ಜಾರಿಗೆ ಸಂಕಷ್ಟ ಎದುರಿಸಬೇಕಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ಸಿದ್ದರಾಮಯ್ಯ 14ನೇ ಬಜೆಟ್ ಮಂಡಿಸಿದ್ದರೂ ಅವರ ಪ್ರಬುದ್ಧತೆ ಈ ಬಜೆಟ್ ನಲ್ಲಿ ಕಂಡು ಬರಲಿಲ್ಲ. ಸತ್ಯವನ್ನು ತಪ್ಪಾಗಿ ನಿರೂಪಿಸಿದರು. ಬಜೆಟ್ ಮಂಡನೆ ವೇಳೆ ಹಿಂದಿನ ಸರ್ಕಾರ ಮತ್ತು ಕೇಂದ್ರವನ್ನು ದೂಷಿಸಿದರು. ಕೇಂದ್ರ ಸರಕಾರ ಜಿಎಸ್‌ಡಿಪಿಯನ್ನು 18,85,000 ರೂ.ಗಳಿಂದ 25 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದೆ. ಈ ಕಾರಣದಿಂದಲೇ ಸಿದ್ದರಾಮಯ್ಯ ಅವರು ಹಣಕಾಸಿನ ಶಿಸ್ತನ್ನು ಗಮನದಲ್ಲಿಟ್ಟುಕೊಂಡು ಸಾಲ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಧಿ ಹಂಚಿಕೆಯನ್ನು ಟೀಕಿಸಿದ್ದಾರೆ. ಆದರೆ, ನಮ್ಮ ಸರ್ಕಾರ ಎರಡು ಮಾರ್ಗಗಳ ಮೂಲಕ ಹಣವನ್ನು ಲಭ್ಯವಾಗುವಂತೆ ಮಾಡಲಾಗಿದೆ. ಏಕ ನೋಡಲ್ ಖಾತೆ ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ ಮೂಲಕ ಹಣ ಲಭ್ಯವಾಗುವಂತೆ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಧಾನ ಮಂತ್ರಿ ಗತಿ ಶಕ್ತಿ, ಪಿಎಲ್‌ಐ ಮತ್ತು ರಾಜ್ಯಗಳಿಗೆ ವಿಶೇಷ ನೆರವು ಮೂಲಕ ಕೇಂದ್ರವು ದೊಡ್ಡ ಮೊತ್ತವನ್ನು ರಾಜ್ಯದಲ್ಲಿ ಹೂಡಿಕೆ ಮಾಡುತ್ತದೆ. ಅಲ್ಲದೆ, ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಮತ್ತಿತರೆ ಕಾಮಗಾರಿಗಳಿಗೆ ಹಣ ನೀಡುತ್ತದೆ. ಕೇಂದ್ರದ ಸಹಾಯವಿಲ್ಲದೆ, ಈ ಬೆಳವಣಿಗೆ ಸಾಧಿಸಲು ಸಾಧ್ಯವಿಲ್ಲ ಎಂದರು.

“ರಾಜ್ಯ ಜಿಎಸ್‌ಡಿಪಿ ವರ್ಷದಿಂದ ವರ್ಷಕ್ಕೆ ಶೇ.11 ರಷ್ಟು ಬೆಳೆದಿದೆ. ಕಳೆದ ವರ್ಷ, ನಾವು ಶೇ.100ರಷ್ಟು ಬಂಡವಾಳ ವೆಚ್ಚ ಹರಿದುಬಂದಿದೆ, ಜನವರಿ 2023 ರ ವೇಳೆಗೆ ಈ ಶೇಕಡವಾರು 72ಕ್ಕಿಂತ ಹೆಚ್ಚಾಗಿದೆ. ಇದು ಕಳೆದ 10 ವರ್ಷಗಳಲ್ಲಿ ಅತ್ಯಧಿಕ ಬಂಡವಾಳವಾಗಿದೆ. ರಾಜ್ಯದ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ.17ರಷ್ಟು ಹೆಚ್ಚಳವಾಗಿದೆ.

ಇದು ಕೃಷಿ, ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಬೆಳವಣಿಗೆಗಳು ಕಂಡು ಬಂದಿದೆ. ವಿತ್ತೀಯ ಕೊರತೆಯನ್ನು ಶೇ.3 ಕ್ಕಿಂತ ಕಡಿಮೆ ಇರುವಂತೆ ನೋಡಿಕೊಳ್ಳಲಾಗಿದೆ. ಆದರೆ ಕಾಂಗ್ರೆಸ್ ತಪ್ಪು ಮಾಹಿತಿ ನೀಡುತ್ತಿದೆ. ಸಾಂಕ್ರಾಮಿಕ ರೋಗದ ಪರಿಣಾಮ ಆರ್ಥಿಕ ಸ್ಥಿತಿ ಚೇತರಿಕೆಗೆ ಸುಮಾರು ಮೂರು ವರ್ಷಗಳ ಕಾಲ ಬೇಕಾಯಿತು. ಇದನ್ನು ನೋಡುವಲ್ಲಿ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ.

ರಾಜ್ಯ ಸರ್ಕಾರ ದೂರದೃಷ್ಟಿಯನ್ನು ಕಳೆದುಕೊಂಡಿದ್ದು, ಕೇವಲ 5 ಗ್ಯಾರಂಟಿ ಯೋಜನೆಗಳನ್ನು ಮಾತ್ರ ಪೂರ್ಣಗೊಳಿಸಲು ಯತ್ನ ನಡೆಸುತ್ತಿದೆ. ಇದರಿಂದಾಗಿ ತ್ವರಿತ ಗತಿಯಲ್ಲಿ ಸಾಗುತ್ತಿದ್ದ ರಾಜ್ಯದ ಅಭಿವೃದ್ಧಿಗೆ ಹೊಡೆತ ಬಿದ್ದಿದೆ. ಶಿಕ್ಷಣ, ಆರೋಗ್ಯ, ಆರ್‌ಡಿಪಿಆರ್ ಮತ್ತು ಜಲಸಂಪನ್ಮೂಲಕ್ಕೆ ಮೀಸಲಿಡುವ ಪ್ರಮಾಣ ಕಡಿಮೆಯಾಗಿದೆ. ಪ್ರಾದೇಶಿಕ ಅಸಮತೋಲನದ ಸಮಸ್ಯೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here