Home ಕರ್ನಾಟಕ ಕೇಂದ್ರ ಸರಕಾರವು ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲಿದೆ: ಆಪ್ ಆರೋಪ

ಕೇಂದ್ರ ಸರಕಾರವು ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಲಿದೆ: ಆಪ್ ಆರೋಪ

37
0

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಭಾರತೀಯ ಜನತಾ ಪಕ್ಷವು ರಾಷ್ಟ್ರಪತಿ ಆಡಳಿತ ಹೇರಲು ಪ್ರಯತ್ನಿಸುತ್ತಿದೆ ಎಂದು ದಿಲ್ಲಿ ಸರಕಾರವು ಆರೋಪಿಸಿದೆ. ಅರವಿಂದ್ ಕೇಜ್ರಿವಾಲ್ ಅವರ ಸರಕಾರವನ್ನು ಅಸ್ಥಿರಗೊಳಿಸಲು ರಾಜಕೀಯ ಪಿತೂರಿಯೊಂದು ನಡೆಯುತ್ತಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ ಎಂದು ದಿಲ್ಲಿ ಸಚಿವೆ ಅತಿಶಿ ದೂರಿದ್ದಾರೆ.

ದಿಲ್ಲಿಯ ವಿವಿಧ ಇಲಾಖೆಗಳಲ್ಲಿ ಹಲವಾರು ತಿಂಗಳಿನಿಂದ ಹುದ್ದೆಗಳು ಖಾಲಿ ಉಳಿದಿದ್ದರೂ, ಹಿರಿಯ ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡುತ್ತಿಲ್ಲ ಎಂದೂ ಅತಿಶಿ ಆಪಾದಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅತಿಶಿ, “ದಿಲ್ಲಿಯಲ್ಲಿನ ಚುನಾಯಿತ ಸರಕಾರವನ್ನು ಉರುಳಿಸಲು ಅರವಿಂದ್ ಕೇಜ್ರಿವಾಲ್ ಅವರನ್ನು ಯಾವುದೇ ಸಾಕ್ಷ್ಯಾಧಾರಗಳಿಲ್ಲದ ಸುಳ್ಳು ಪ್ರಕರಣದಲ್ಲಿ ಬಂಧಿಸಲಾಗಿದೆ. ನಾವು ಹಿಂದಿನ ಕೆಲವು ಸಂಗತಿಗಳತ್ತ ನೋಡಿದಾಗ, ಯೋಜಿತ ಪಿತೂರಿಯೊಂದು ನಡೆಯುತ್ತಿರುವುದು ಕಂಡು ಬರುತ್ತಿದೆ” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

“ದಿಲ್ಲಿಗೆ ಯಾವ ಅಧಿಕಾರಿಗಳನ್ನೂ ನಿಯೋಜಿಸುತ್ತಿಲ್ಲ. ದಿಲ್ಲಿಗೆ ವರ್ಗಾವಣೆ ನಿಯೋಜನೆಯನ್ನೂ ಮಾಡುತ್ತಿಲ್ಲ. ಚುನಾವಣೆಗಳು ಪ್ರಕಟಗೊಂಡಿರುವುದರಿಂದ ಅಧಿಕಾರಿಗಳು ಸಭೆಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ್ದಾರೆ” ಎಂದು ಆಪ್ ನಾಯಕಿಯೂ ಆದ ಅತಿಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರ ಖಾಸಗಿ ಕಾರ್ಯದರ್ಶಿಯನ್ನು ವಜಾಗೊಳಿಸಿರುವುದೂ ಕೂಡಾ ಈ ಪಿತೂರಿಯ ಒಂದು ಭಾಗ ಎಂದು ಅವರು ಆರೋಪಿಸಿದ್ದಾರೆ.

ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಬಿಜೆಪಿ, “ಆಪ್ ಪ್ರತಿ ದಿನವೂ ಹೊಸ ಕತೆಗಳನ್ನು ಹುಟ್ಟು ಹಾಕುತ್ತಿದೆ” ಎಂದು ಪ.

LEAVE A REPLY

Please enter your comment!
Please enter your name here