ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಕೊಠಡಿಯ ಬಾಗಿಲುಗಳು ಕಪ್ಪು ಹಲಗೆಯಾಗಿ ಮಾರ್ಪಟ್ಟಿವೆ. ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಸಿರಾವರ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಕೊಠಡಿಯ ಬಾಗಿಲುಗಳು ಕಪ್ಪು ಹಲಗೆಯಾಗಿ ಮಾರ್ಪಟ್ಟಿವೆ.
ಹೊಸ ಕಟ್ಟಡ ನಿರ್ಮಾಣವಾಗಿದ್ದರೂ ಶಿಕ್ಷಣ ಇಲಾಖೆ ಎಲ್ಲ ಕೊಠಡಿಗಳನ್ನು ತರಗತಿಗಳಿಗೆ ಬಳಸಲು ಅನುಮತಿ ನೀಡದ ಕಾರಣ ಈ ಸಮಸ್ಯೆ ಸೃಷ್ಠಿಯಾಗಿದೆ. ಇದು ಜಿಲ್ಲಾಡಳಿತ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿಗೂ ಕಾರಣವಾಗಿದೆ.
ಶಾಲೆಯಲ್ಲಿ 793 ವಿದ್ಯಾರ್ಥಿಗಳಿದ್ದು, ಹಳೆಯ ಕಟ್ಟಡದಲ್ಲಿ ಎಲ್ಲರಿಗೂ ಕೂತು ಪಾಠ ಕೇಳಲು ಸಾಕಾಗುವಷ್ಟು ತರಗತಿ ಕೊಠಡಿಗಳಿಲ್ಲ. ಹೀಗಾಗಿ ಶಿಕ್ಷಕರು ಈಗ ಕೊಠಡಿಗಳ ಹೊರಗೆ ತರಗತಿಗಳನ್ನು ನಡೆಸುತ್ತಿದ್ದಾರೆ ಮತ್ತು ಕೆಲವರು ಬಾಗಿಲುಗಳನ್ನು ಕಪ್ಪು ಹಲಗೆಯಾಗಿ ಬಳಸುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ನೀಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು 18 ಕೊಠಡಿಗಳ ಶಾಲಾ ಕಟ್ಟಡವನ್ನು ಇತ್ತೀಚೆಗೆ ನಿರ್ಮಿಸಿದೆ ಎಂದು ಶಿಕ್ಷಕರೊಬ್ಬರು ಮಾಹಿತಿ ನೀಡಿದ್ದಾರೆ. ಇದುವರೆಗೂ10 ಕೊಠಡಿಗಳನ್ನು ಹಸ್ತಾಂತರಿಸಲಾಗಿದ್ದು, ಉಳಿದ ಕೊಠಡಿಗಳನ್ನು ಬಳಸಲು ಅನುಮತಿ ನೀಡಿಲ್ಲ.
ಸಾಮಾನ್ಯವಾಗಿ ಶಿಕ್ಷಕರು ಕಪ್ಪು ಹಲಗೆಗಳನ್ನು ಒಯ್ಯುತ್ತಾರೆ. ಇತ್ತೀಚೆಗೆ, ಶಿಕ್ಷಕರೊಬ್ಬರು ಬಾಗಿಲನ್ನು ಕಪ್ಪು ಹಲಗೆಯಾಗಿ ಬಳಸಿ 4 ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಕಲಿಸಿದ್ದಾರೆ. ಉಳಿದ ತರಗತಿ ಕೊಠಡಿಗಳನ್ನು ಬಳಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ ಅಲ್ಲದೆ, ಕೆಲವು ಕೊಠಡಿಗಳಲ್ಲಿ ಬಾಗಿಲು ಮತ್ತು ಕಿಟಕಿಗಳನ್ನು ಸರಿಪಡಿಸಬೇಕಾಗಿದೆ. ಅದು ಮುಗಿದ ನಂತರ, ಕೊಠಡಿಗಳನ್ನು ನಮಗೆ ಹಸ್ತಾಂತರಿಸಲಾಗುತ್ತದೆ ಎಂದು ಶಿಕ್ಷಕರುೊಬ್ಬರು ವಿವರಿಸಿದ್ದಾರೆ.
ಸರಕಾರಿ ಶಾಲೆಯ ದುಸ್ಥಿತಿ ನೋಡಿದರೆ ನಾಚಿಕೆಯಾಗುತ್ತಿದೆ ಎಂದು ಗ್ರಾಮದ ರಮೇಶ್ ಬಿ. ಬೇಸರ ವ್ಯಕ್ತ ಪಡಿಸಿದ್ದಾರೆ. ಅವರು ಬಾಗಿಲನ್ನು ಕಪ್ಪು ಹಲಗೆಯಾಗಿ ಬಳಸಿದ್ದು ಶಿಕ್ಷಕರ ತಪ್ಪು ಅಲ್ಲ. ಕನಿಷ್ಠ ಸಮಯ ವ್ಯರ್ಥ ಮಾಡುವ ಬದಲು ವಿದ್ಯಾರ್ಥಿಗಳಿಗೆ ಕಲಿಸಲು ಪ್ರಯತ್ನಿಸಿದರು. ಶಾಲೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿದೆ.
ಇದನ್ನೂ ಓದಿ: ಅಧಿಕಾರಿಗಳ ಮನೆಗಳೂ ಹೀಗೇ ಇದೆಯಾ?: ಶಾಲೆಗಳಲ್ಲಿನ ಶೌಚಾಲಯ ಪರಿಸ್ಥಿತಿ ಶೋಚನೀಯ, ಮೂಲಸೌಕರ್ಯಗಳ ಬಗ್ಗೆ ಹೈಕೋರ್ಟ್ ಗರಂ
ಸರಿಯಾದ ಶೌಚಾಲಯಗಳಿಲ್ಲ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಸುರಿದ ಮಳೆಯಿಂದ ಶಾಲಾ ಆವರಣ ಕೆರೆಯಂತಾಗಿತ್ತು. ಆದರೆ ಇದ್ಯಾವುದನ್ನು ಲೆಕ್ಕಿಸದೆ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುತ್ತಲೇ ಇದ್ದಾರೆ. ಜಿಲ್ಲಾಡಳಿತ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.