ಅರಣ್ಯ ಸಿಬ್ಬಂದಿಯೊಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಬುಧವಾರ ಕೊನೆಗೂ ಕೊಡಗಿನ ಮಡಿಕೇರಿ ತಾಲೂಕಿನ ಕೆದಕಲ್ ಸೀಮೆಯಲ್ಲಿ ಸೆರೆ ಹಿಡಿಯಲಾಗಿದೆ. ಮಡಿಕೇರಿ: ಅರಣ್ಯ ಸಿಬ್ಬಂದಿಯೊಬ್ಬರನ್ನು ಬಲಿ ಪಡೆದಿದ್ದ ಕಾಡಾನೆಯನ್ನು ಬುಧವಾರ ಕೊನೆಗೂ ಕೊಡಗಿನ ಮಡಿಕೇರಿ ತಾಲೂಕಿನ ಕೆದಕಲ್ ಸೀಮೆಯಲ್ಲಿ ಸೆರೆ ಹಿಡಿಯಲಾಗಿದೆ.
ಸೆರೆ ಸಿಕ್ಕ ಆನೆ ಮಡಿಕೇರಿ ತಾಲೂಕಿನಾದ್ಯಂತ ಇತ್ತೀಚೆಗೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದು, ಕುಶಾಲನಗರ ವ್ಯಾಪ್ತಿಯ ಅರಣ್ಯ ಇಲಾಖೆ ಅಧಿಕಾರಿಗಳ ಪ್ರಯತ್ನದಿಂದ ಇಂದು ಸೆರೆ ಸಿಕ್ಕಿದೆ.
ಇದನ್ನು ಓದಿ: ಹಾಸನ: ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಕಾಡಾನೆ ದಾಳಿ, ಅರವಳಿಕೆ ತಜ್ಞ ವೆಂಕಟೇಶ್ ಸಾವು
ಕಳೆದ ಸೋಮವಾರ ಇಬ್ಬರು ಬೈಕ್ ಸವಾರರ ಮೇಲೆ ದಾಳಿ ಮಾಡಿದ ಈ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಅರಣ್ಯ ಸಿಬ್ಬಂದಿ ಗಿರೀಶ್ ಎಂಬುವವರು ಮೃತಪಟ್ಟಿದ್ದರು.
15 ರಿಂದ 20 ವರ್ಷದೊಳಗಿನ ಗಂಡು ಆನೆಯನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ನಿನ್ನೆಯಿಂದ ಈ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದ್ದು, ಇಂದು ಕಾಡಾನೆ ಸೆರೆ ಸಿಕ್ಕಿದೆ. ಇದು ಆರ್‌ಆರ್‌ಟಿ ಸಿಬ್ಬಂದಿಯ ಜೀವ ಬಲಿ ತೆಗೆದುಕೊಂಡ ಕಾಡು ಆನೆಯೇ ಎಂದು ನಮಗೆ ಇನ್ನೂ ಖಚಿತವಾಗಿಲ್ಲ. ಆದರೆ, ಕೆದಕಲ್ ಮತ್ತು ಮಡಿಕೇರಿ ವ್ಯಾಪ್ತಿಯಲ್ಲಿ ವರದಿಯಾದ ದಾಳಿಗಳಲ್ಲಿ ಈ ಆನೆ ಭಾಗಿಯಾಗಿದೆ ಎಂದು ಕುಶಾಲನಗರ ಡಿಆರ್‌ಎಫ್‌ಒ ರಂಜನ್ ಅವರು ಹೇಳಿದ್ದಾರೆ.