Home Uncategorized ಕೊಡಗು: ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಲೈನ್ ಮ್ಯಾನ್ ದುರ್ಮರಣ

ಕೊಡಗು: ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಲೈನ್ ಮ್ಯಾನ್ ದುರ್ಮರಣ

20
0

ಮನೆಯೊಂದರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಸಿಬ್ಬಂದಿ ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ.  ಕೊಡಗು: ಮನೆಯೊಂದರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಕರೆಂಟ್ ಶಾಕ್ ಹೊಡೆದು ಚೆಸ್ಕಾಂ ಸಿಬ್ಬಂದಿ ಮೃತಪಟ್ಟಿರುವ ಘಟನೆ ವಿರಾಜಪೇಟೆಯಲ್ಲಿ ನಡೆದಿದೆ. 

ವಿರಾಜಪೇಟೆ ಹೊರವಲಯದ ಕುಟ್ಟಂದಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತ ಸಿಬ್ಬಂದಿಯನ್ನು ಬಾಗಲಕೋಟೆ ಜಿಲ್ಲೆಯ ಮಾರ್ನಾಲು ನಿವಾಸಿ 26 ವರ್ಷದ ಬಸವರಾಜ್ ತೆಗ್ಗಿ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಕಬ್ಬು ತುಂಬಿದ್ದ ಲಾರಿಗೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ, ಇಬ್ಬರು ಸಾವು 

ವಿದ್ಯುತ್ ಪ್ರವಹಿಸಿದ್ದರಿಂದ ಸ್ಥಳದಲ್ಲೇ ಬಸವರಾಜ್ ಕುಸಿದುಬಿದ್ದು ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

LEAVE A REPLY

Please enter your comment!
Please enter your name here