Home Uncategorized ಕೊಡಗು: ಕ್ಷುಲ್ಲಕ ಕಾರಣಕ್ಕೆ ಜಗಳ, ವಿರಾಜಪೇಟೆ ಬಳಿ ಕಾರು ಹರಿಸಿ ಮೀನು ವ್ಯಾಪಾರಿಯೊಬ್ಬನ ಕೊಲೆ!

ಕೊಡಗು: ಕ್ಷುಲ್ಲಕ ಕಾರಣಕ್ಕೆ ಜಗಳ, ವಿರಾಜಪೇಟೆ ಬಳಿ ಕಾರು ಹರಿಸಿ ಮೀನು ವ್ಯಾಪಾರಿಯೊಬ್ಬನ ಕೊಲೆ!

25
0

ಕೊಡಗು: ವಿನಾಕಾರಣದ ಒಂದು ಜಗಳದ ಹಿನ್ನೆಲೆಯಲ್ಲಿ ಮೀನು ವ್ಯಾಪಾರಿಯಾಗಿದ್ದ ತಾಸಿರ್ (Tasser) (23) ಮೇಲೆ ಕಾರು ಹರಿಸಿ ಕೊಲೆ ಮಾಡಿದ ಪ್ರಕರಣ ಕೊಡಗು ಜಿಲ್ಲೆ ವಿರಾಜಪೇಟೆ (Virajpet) ತಾಲ್ಲೂಕಿನ ಪಾಲಿಬೆಟ್ಟದಲ್ಲಿ ನಡೆದಿದೆ. ಕೊಲೆ ಮಾಡುವ ಉದ್ದೇಶದಿಂದಲೇ ತಾಸಿರ್ ಗೆ ಗುದ್ದಿ ಪರಾರಿಯಾಗಿದ್ದ ಆರೋಪಿ ನೌಶಾದ್ ನನ್ನು (Naushad) ಚೆನೈನಲ್ಲಿ ಬಂಧಿಸಲಾಗಿದೆ. ಕಾರು ಗುದ್ದಿದ ಬಳಿಕ ತೀವ್ರವಾಗಿ ಗಾಯಗೊಂಡಿದ್ದ ತಾಸಿರ್ ನನ್ನು ಮೈಸೂರಿನ ಖಾಸಗಿ ಅಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಅವನು ಮರಣವನ್ನಪ್ಪಿದ್ದಾನೆ. ಅವನಿಗೆ ಕಾರು ಗುದ್ದುವ ದೃಶ್ಯ ಸಿಸಿಟಿವಿ ಕೆಮೆರಾವೊಂದರಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here