ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಕೋಟ್ಯಂತರ ರು. ಹಣವನ್ನು ವಾಪಸ್ ತೆಗೆದುಕೊಳ್ಳಲು ನೀಡಿರುವ ಆದೇಶದಿಂದಾಗಿ ಕೊಡಗಿನಲ್ಲಿ ಆನೆಗಳ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳ ಯೋಜನೆಯನ್ನು ಹಠಾತ್ ನಿಲ್ಲಿಸಲು ಕಾರಣವಾಗಿದೆ. ಮಡಿಕೇರಿ: ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಕೋಟ್ಯಂತರ ರು. ಹಣವನ್ನು ವಾಪಸ್ ತೆಗೆದುಕೊಳ್ಳಲು ನೀಡಿರುವ ಆದೇಶದಿಂದಾಗಿ ಕೊಡಗಿನಲ್ಲಿ ಆನೆಗಳ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳ ಯೋಜನೆಯನ್ನು ಹಠಾತ್ ನಿಲ್ಲಿಸಲು ಕಾರಣವಾಗಿದೆ.
ರಾಜ್ಯದಲ್ಲಿ ಮಾನವ ಕಾಡಾನೆ ಸಂಘರ್ಷ ಹೆಚ್ಚಾಗಿರುವ ಪ್ರದೇಶಗಳಲ್ಲಿ ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ನಿಯಂತ್ರಿಸಲು ಬ್ಯಾರಿಕೇಡ್‌ಗಳನ್ನು ನಿರ್ಮಿಸಲು ಘೋಷಿಸಲಾಗಿತ್ತು. ಸರ್ಕಾರ ಅನುದಾನ ವಾಪಸ್ ಪಡೆದ ಹಿನ್ನೆಲೆಯಲ್ಲಿ, ಅಧಿಕಾರಿಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಕೊಡಗು ಜಿಲ್ಲೆ ಜಿಲ್ಲೆಯಾದ್ಯಂತ ಕಾಡು ಆನೆ ಮತ್ತು ಹುಲಿಗಳ ಹಾವಳಿಯಿಂದ ರಕ್ಷಿಸಿಕೊಳ್ಳಲು ಹಿಂದಿನ ಸರ್ಕಾರ ಬ್ಯಾರಿಕೇಡ್ ಯೋಜನೆ ಜಾರಿಗೆ ತಂದಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ತನ್ನ ಬಜೆಟ್ ನಲ್ಲಿ ಯೋಜನೆಗೆ ಮಂಜೂರಾಗಿದ್ದ ಹಣವನ್ನು ಈಗ ಹಿಂಪಡೆಯಲಾಗಿದೆ.
ಇದನ್ನೂ ಓದಿ: ಕೊಡಗು: ವನ್ಯಜೀವಿ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆಯಿಂದ ಆನೆ ಸಿಗ್ನಲ್ ಬೋರ್ಡ್ ಗಳ ಅಳವಡಿಕೆ
ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿರುವಂತೆ ಕುಶಾಲನಗರ ಅರಣ್ಯ ವ್ಯಾಪ್ತಿಯ ಅಟ್ಟೂರಿನ ಒಟ್ಟು 6.5 ಕಿ.ಮೀ ಅರಣ್ಯದ ಅಂಚಿನಲ್ಲಿ ಹೆಚ್ಚಿದ ಕಾಡಾನೆ ಚಲನವಲನವನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಆನೆಗಳ ಓಡಾಟದಿಂದ ಈ ಭಾಗದ ರೈತರು ಅಪಾರ ಪ್ರಮಾಣದ ಬೆಳೆ ನಷ್ಟ ಅನುಭವಿಸಿದ್ದು, ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದ್ದರು, ಇದರಿಂದ ರೈಲ್ವೇ ಬ್ಯಾರಿಕೇಡ್ ಯೋಜನೆ ಮಂಜೂರು ಮಾಡಲಾಗಿತ್ತು.
ಬ್ಯಾರಿಕೇಡ್ ಕಾಮಗಾರಿ ನಡೆಸಲು ಹಿಂದಿನ ರಾಜ್ಯ ಸರಕಾರದಿಂದ ಸುಮಾರು 10 ಕೋಟಿ ರೂ ಹಣ ನೀಡಿತ್ತು. ಆದರೆ, ಈಗ ಹೊಸ ಸರ್ಕಾರ ಹಣ ಹಿಂಪಡೆಯಲಾಗಿದೆ.
ಇದನ್ನೂ ಓದಿ: ಕಾಡಾನೆಗಳ ಓಡಾಟ ಹೆಚ್ಚಳ; ಸುಂಟಿಕೊಪ್ಪದಾದ್ಯಂತ ಬೆಳೆಗಾರರಿಗೆ ಬೆಳೆ ನಷ್ಟದೊಂದಿಗೆ ಸಂಕಷ್ಟ!
ರೈಲ್ವೆ ಬ್ಯಾರಿಕೇಡ್‌ಗಳನ್ನು ನೆಡಲು ಅರಣ್ಯದ ಅಂಚಿನಲ್ಲಿ ಹೊಂಡಗಳನ್ನು ಅಗೆಯಲಾಗಿದೆ. ಒಂದು ಕಿಲೋಮೀಟರ್‌ಗೆ ರೈಲ್ವೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು 1.5 ಕೋಟಿ ರೂ. ನಿಧಿಯ ಅಗತ್ಯವಿದ್ದು, ಅದೇ ರೀತಿ ಅತ್ತೂರಿನಿಂದ ಹಾರಂಗಿವರೆಗೆ 6.5 ಕಿ.ಮೀ.ವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲು ಹಣ ಮಂಜೂರಾಗಿತ್ತು. 448 ಕ್ಕೂ ಹೆಚ್ಚು ಕಂಬಗಳನ್ನು ನೆಡಲಾಗಿದೆ ಮತ್ತು 600 ಕ್ಕೂ ಹೆಚ್ಚು ಹೊಂಡಗಳನ್ನು ಅಗೆಯಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಯೋಜನೆ ಈಗ ದಿಢೀರ್ ಸ್ಥಗಿತಗೊಂಡಿದೆ.