Home Uncategorized ಕೊಣಿಲ ರಾಘವೇಂದ್ರ ಭಟ್‌ಗೆ ಡಾಕ್ಟರೇಟ್

ಕೊಣಿಲ ರಾಘವೇಂದ್ರ ಭಟ್‌ಗೆ ಡಾಕ್ಟರೇಟ್

17
0

ಮಂಗಳೂರು: ವಿಶ್ವ ಸಂಸ್ಥೆಯ ಯುನಿಸೆಫ್ ಉನ್ನತ ಅಧಿಕಾರಿಯಾಗಿರುವ ಕೊಣಿಲ ರಾಘವೇಂದ್ರ ಭಟ್ ಇವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡಾಕ್ಟರೇಟ್ ಪದವಿ ಲಭಿಸಿದೆ.

ಕೊಣಿಲ ರಾಘವೇಂದ್ರ ಭಟ್ ಅಭಿವೃದ್ಧಿ ಮತ್ತು ಮಕ್ಕಳ ಹಕ್ಕುಗಳು ಎಂಬ ವಿಷಯದ ಮೇಲೆ ಅಧ್ಯಯನ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ ಪದವಿಯನ್ನು ನೀಡಿದೆ.

ಹಂಪಿ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಎಚ್.ಡಿ. ಪ್ರಶಾಂತ್ ಇವರ ಮಾರ್ಗದರ್ಶಶನಲ್ಲಿ ಸಂಶೋಧನೆ ನಡೆಸಲಾಗಿತ್ತು.

ಇತ್ತಿಚೆಗೆ ನಡೆದ ಕನ್ನಡ ವಿಶ್ವವಿದ್ಯಾಲಯದ ನುಡಿಹಬ್ಬ -೩೨, ರ ಘಟಿಕೋತ್ಸವ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ , ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಶಿವಮೂರ್ತಿ , ಆಂಧ್ರ ಪ್ರದೇಶ ಕೇಂದ್ರೀಯ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೋ.ಎಸ್.ಎ.ಕೋರಿ ಹಾಗೂ ಇತರ ಗಣ್ಯರ ಸಮ್ಮುಖದಲ್ಲಿ ಕೊಣಿಲ ರಾಘವೇಂದ್ರ ಭಟ್ ಇವರಿಗೆ ಪಿಎಚ್.ಡಿ ಪದವಿ ಪ್ರಧಾನ ಮಾಡಲಾಯಿತು.

ರಾಘವೇಂದ್ರ ಭಟ್ ಇದೀಗ ಕರ್ನಾಟಕ ಸರಕಾರ ಮತ್ತು ಯುನಿಸೆಫ್ ಸಹಯೋಗದ ಮಕ್ಕಳ ಸಂರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕರಾಗಿ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಕ್ಕಳ ಹಕ್ಕು, ಮಕ್ಕಳ ಸಂರಕ್ಷಣೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

ಕೊಣಿಲ ರಾಘವೇಂದ್ರ ಭಟ್ ವರ್ಕಾಡಿ ದಿ. ಕೊಣಿಲ ರಾಮ್ ಭಟ್ ಹಾಗೂ ದಿ. ಪಾರ್ವತಿ ಅಮ್ಮ ದಂಪತಿಯ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕುರ್ನಾಡು ಮುಡಿಪಿನ ಭಾರತೀ ಶಾಲೆ ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಮುಡಿಪಿನ ಸರಕಾರಿ ಪದವಿಪೂರ್ವ ಕಾಲೇಜು, ಕಲಾ ವಿಭಾಗದ ಪದವಿಯನ್ನು ಮಂಗಳೂರಿನ ಕೆನರಾ ಕಾಲೇಜು, ಮಂಗಳೂರಿನ ಸ್ಕೂಲ್ ಆಫ್ ಸೊಶಿಯಲ್ ವರ್ಕ್, ರೋಶನಿ ನಿಲಯದ ಮೂಲಕ ಮಂಗಳೂರು ವಿಶ್ವವಿದ್ಯಾಲಯದಿಂದ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದರು.

LEAVE A REPLY

Please enter your comment!
Please enter your name here