ಕೋಲ್ಕತ್ತಾ: ಕೇಂದ್ರ ಸಚಿವ ಸುಕಾಂತ ಮಜುಂದಾರ್ ಕೋಲ್ಕತ್ತಾದಲ್ಲಿ ಇಂದು ಮಧ್ಯಾಹ್ನ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದಾಗ ಭೂಕಂಪ ಸಂಭವಿಸಿದೆ. ಈ ಕುರಿತ ವಿಡಿಯೋವನ್ನು
ಸುದ್ದಿ ಸಂಸ್ಥೆ ಐಎಎನ್ಎಸ್ ಹಂಚಿಕೊಂಡಿದೆ. ವಿಡಿಯೋದಲ್ಲಿ ವೇದಿಕೆಯಲ್ಲಿದ್ದ ಮಜುಂದಾರ್, ನಡುಗುತ್ತಿರುವಂತೆ ಕಾಣಿಸುತ್ತದೆ. ನಾನು ಭಾಷಣ ನಿಲ್ಲಿಸಲೇ ಎಂದು ಅವರು ಕೇಳುತ್ತಾರೆ. ಕಾರ್ಯಕ್ರಮ ಸ್ಥಳದಲ್ಲಿದ್ದ ಲೈಟ್ , ಕ್ಯಾಮರಾಗಳು ಕೂಡಾ ಅಲುಗಾಡುವುದು ಕಂಡುಬಂದಿದೆ.
ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆಯ ಭೂ ಕಂಪವಾಗಿದ್ದು, ಜನರು ಮನೆ ಮತ್ತು ಕಚೇರಿಗಳಿಂದ ಹೊರ ಬಂದಿದ್ದಾರೆ. ಮಧ್ಯಾಹ್ನ 1.22 ಕ್ಕೆ ಭೂಕಂಪನದ ಅನುಭವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Kolkata, West Bengal: An earthquake of magnitude 5.0 was felt in Kolkata.
Union MoS Sukanta Majumdar was addressing a gathering when an earthquake struck Kolkata. pic.twitter.com/I1OU6k5SCl
— IANS (@ians_india) February 27, 2026
ರಾಜ್ಯ ಸಚಿವಾಲಯದಲ್ಲಿ ಕಂಪನದ ಹಿನ್ನೆಲೆಯಲ್ಲಿ ನಬಣ್ಣ, ನೌಕರರು ಬೀದಿಗೆ ಬಂದಿದ್ದಾರೆ. ಸಾಲ್ಟ್ ಲೇಕ್ನಲ್ಲಿರುವ ನಗರದ ಐಟಿ ಹಬ್ ಮತ್ತು ಇತರ ಪ್ರದೇಶಗಳಲ್ಲಿನ ಬಹುಮಹಡಿ ವಸತಿ ಕಟ್ಟಡಗಳಲ್ಲಿ ಇದೇ ರೀತಿಯ ದೃಶ್ಯಗಳು ಕಂಡುಬಂದವು.
