Home Uncategorized ಕ್ರಿಪ್ಟೋ ಕರೆನ್ಸಿಗಳು ಅಪರಾಧ ಚಟುವಟಿಕೆಗಳಿಗೆ ಬಳಕೆ: ಭಾರೀ ಕುಸಿತ ಕಂಡ Dogecoin

ಕ್ರಿಪ್ಟೋ ಕರೆನ್ಸಿಗಳು ಅಪರಾಧ ಚಟುವಟಿಕೆಗಳಿಗೆ ಬಳಕೆ: ಭಾರೀ ಕುಸಿತ ಕಂಡ Dogecoin

32
0

ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋಕರೆನ್ಸಿ ಮಾರುಕಟ್ಟೆ ತೀವ್ರ ಕುಸಿತ ಕಂಡಿದೆ. ಅತ್ಯಂತ ಜನಪ್ರಿಯವಾಗಿದ್ದ ಬಿಟ್ ಕಾಯಿನ್ ಕೂಡ ಭಾರೀ ಕುಸಿತ ಕಂಡು 20 ಸಾವಿರ ಡಾಲರ್‌ಗೆ ಬಂದು ನಿಂತಿದೆ. ಈಗಾಗಲೇ ಭಾರೀ ಸಂಕಷ್ಟ ಎದುರಿಸುತ್ತಿರುವ ಕ್ರಿಪ್ಟೋ ಮಾರುಕಟ್ಟೆ ಮತ್ತೊಂದು ದೊಡ್ಡ ಹಿನ್ನಡೆ ಅನುಭವಿಸಿದೆ.

ಕ್ರಿಪ್ಟೋ ಕರೆನ್ಸಿಗಳು ಅಪರಾಧ ಚಟುವಟಿಕೆಗಳಿಗೆ ಬಳಕೆಯಾಗುತ್ತವೆ ಎಂಬ ವಾದ ಮೊದಲಿನಿಂದಲೂ ಇತ್ತು. ಆದರೀಗ ಈ ವಾದಕ್ಕೆ ಮತ್ತಷ್ಟು ಬಲ ಬಂದಿದೆ. ಅಪರಾಧ ಜಗತ್ತಿನಲ್ಲಿ ಡೋಜಿಕಾಯಿನ್‌ ( Dogecoin) ಕ್ರಿಪ್ಟೋಕರೆನ್ಸಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ಎಲಿಪ್ಟಿಕ್‌ ಕನೆಕ್ಟ್‌ (Elliptic Connect) ವರದಿ ತಿಳಿಸಿದೆ. ಭಯೋತ್ಪಾದನೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ವಂಚನೆಯಂತಹ ಅಪರಾಧಗಳ ವಹಿವಾಟಿಗೆ ಡೋಜಿಕಾಯಿನ್‌ ಬಳಸಲಾಗುತ್ತಿದೆ ಎಂದು ಹೇಳಲಾಗಿದೆ. ಕುತೂಹಲಕಾರಿ ಅಂಶವೆಂದರೆ, ಡೋಜಿಕಾಯಿನ್‌ ವಿಶ್ವ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ನೆಚ್ಚಿನ ಕ್ರಿಪ್ಟೋಕರೆನ್ಸಿಯಾಗಿತ್ತು.

ಅಪರಾಧ ಚಟುವಟಿಕೆಗಳಿಗೆ ಡೋಜಿಕಾಯಿನ್‌ ಬಳಕೆಯಾಗುತ್ತಿದೆ ಎಂದು ವರದಿಯಾದ ಬೆನ್ನಲ್ಲೇ ಇದರ ಮೌಲ್ಯದಲ್ಲಿ ಭಾರೀ ಕುಸಿತವಾಗಿದೆ. ಆದರೂ, Dogecoin ಪ್ರಸ್ತುತ ಟಾಪ್ 10 ಕ್ರಿಪ್ಟೋಕರೆನ್ಸಿಗಳಲ್ಲಿ ಒಂದಾಗಿದ್ದು, ಇದರ ಒಟ್ಟು ಮಾರ್ಕೆಟ್‌ ಕ್ಯಾಪ್ ಸುಮಾರು $8.62 ಬಿಲಿಯನ್ ತಲುಪಿದೆ. ಇದು ಸಾರ್ವಕಾಲಿಕ ಗರಿಷ್ಠದಿಂದ ಸುಮಾರು ಶೇ. 80ರಷ್ಟು ಕುಸಿದಿದೆ.

The post ಕ್ರಿಪ್ಟೋ ಕರೆನ್ಸಿಗಳು ಅಪರಾಧ ಚಟುವಟಿಕೆಗಳಿಗೆ ಬಳಕೆ: ಭಾರೀ ಕುಸಿತ ಕಂಡ Dogecoin appeared first on Ain Live News.

LEAVE A REPLY

Please enter your comment!
Please enter your name here