Home Uncategorized ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಬಳಸಿ ಬ್ಲ್ಯಾಕ್ ಮೇಲ್: ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ

ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಬಳಸಿ ಬ್ಲ್ಯಾಕ್ ಮೇಲ್: ಮನೆಗೆ ಕರೆಸಿ ಚಾಕುವಿನಿಂದ ಹಲ್ಲೆ

38
0

ತನ್ನ ಪತ್ನಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ತನ್ನ ಪತ್ನಿಯ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮುಂದಿಟ್ಟುಕೊಂಡು ಹಣ ನೀಡುವಂತೆ ಬ್ಲ್ಯಾಕ್ ಮೇಲೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಾಗಲೂರು ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಬಾಗಲೂರು ಸಮೀಪದ ಚೊಕ್ಕನಹಳ್ಳಿ ನಿವಾಸಿ ನಾಗರಾಜ್ (37) ಬಂಧಿತ ಆರೋಪಿ. ಘಟನೆಯಲ್ಲಿ ಕಮ್ಮನಹಳ್ಳಿ ನಿವಾಸಿ, ಆಟೋ ಚಾಲಕ ಆರೋಗ್ಯ ದಾಸ್ (27) ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವೆಲ್ಡಿಂಗ್ ಕೆಲಸ  ಮಾಡುತ್ತಿದ್ದ ನಾಗರಾಜ್ ಈ ಹಿಂದೆ ಕುಟುಂಬದೊಂದಿಗೆ ಕಮ್ಮನಹಳ್ಳಿಯಲ್ಲಿ ವಾಸವಾಗಿದ್ದರು. ಈ ವೇಳೆ ಪಕ್ಕದ ಮನೆಯ ನಿವಾಸಿಯಾಗಿದ್ದ ಆರೋಗ್ಯ ದಾಸ್ ಪರಿಚಯವಾಗಿತ್ತು. ಕೆಲ ದಿನಗಳ ಬಳಿಕ ಆರೋಗ್ಯ ದಾಸ್, ನಾಗರಾಜ್ ಅವರ ಪತ್ನಿಯ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ. ಆಕೆಯ ಜೊತೆಗೆ ಇದ್ದ ಕ್ಷಣಗಳನ್ನು ತನ್ನ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದುಕೊಂಡಿದ್ದ. ಇತ್ತೀಚೆಗೆ ಆ  ಮಹಿಳೆಗೆ ಕರೆ ಮಾಡಿ ತನ್ನಲ್ಲಿರುವ ವಿಡಿಯೋ ಹಾಗೂ ಫೋಟೋಗಳ ಬಗ್ಗೆ ತಿಳಿಸಿ, ಹಣ ನೀಡದಿದ್ದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆರೋಪಿಯ ಬ್ಲ್ಯಾಕ್ ಮೇಲ್ ನಿಂದ ಆತಂಕಗೊಂಡ ಮಹಿಳೆ. ವಿಚಾರವನ್ನು ಪತಿ ನಾಗರಾಜ್ ಗಮನಕ್ಕೆ ತಂದಿದ್ದರು. ಆಗ ಆಕ್ರೋಶಗೊಂಡ ನಾಗರಾಜ್, ಆರೋಗ್ಯ ದಾಸ್ ಗೆ ಬುದ್ದಿ ಕಲಿಸಲು ನಿರ್ಧರಿಸಿದ್ದ.

ಸೆ.30ರಂದು ಮಧ್ಯಾಹ್ನ ಪತ್ನಿಯಿಂದ ಆರೋಗ್ಯ ದಾಸ್’ಗೆ ಕರೆ ಮಾಡಿಸಿ ಮನೆಗೆ ಬರುವಂತೆ ಹೇಳಿಸಿದ್ದ. ಆದರಂತೆ ಆರೋಗ್ಯ ದಾಸ್, ಮಹಿಳೆ ಮನೆಗೆ ಬಂದಿದ್ದ. ಈ ವೇಳೆ ಪತಿ ನಾಗರಾಜ್ ನನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಕುಪಿತಗೊಂಡ ನಾಗರಾಜ್, ಗಿಡಕತ್ತರಿಸಲು ಇರಿಸಿದ್ದ ಚಾಕು ತೆಗೆದು ಆರೋಗ್ಯ ದಾಸ್’ನ ಎದೆ, ಕಿವಿ, ಕೈಗಗಳಿಗೆ ಚುಚ್ಚಿ ಹಲ್ಲೆ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿ ನಾಗರಾಜ್ ನನ್ನು ಬಂಧಿಸಲಾಗಿದೆ. ಸದ್ಯ ಆರೋಗ್ಯದಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here