Home Uncategorized ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಪತಿಗೆ ಜಾಮೀನು: ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ ನಟಿ!

ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಪತಿಗೆ ಜಾಮೀನು: ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ ನಟಿ!

56
0

ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಅವರ ಪತಿ, ನಿರ್ಮಾಪಕ ರವೀಂದರ್ ಚಂದ್ರಶೇಖರ್ ಕೊನೆಗೂ ಜೈಲಿನಿಂದ ಹೊರ ಬಂದಿದ್ದಾರೆ. ಮದ್ರಾಸ್ ಹೈಕೋರ್ಟ್ ಐದು ಕೋಟಿ ರೂಪಾಯಿ ಶ್ಯೂರಿಟಿಯೊಂದಿಗೆ ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿದೆ. ಪತಿಯು ಜೈಲಿನಲ್ಲಿದ್ದಾಗ ತನಗೆ ಮೋಸವಾಗಿದೆ, ರವೀಂದರ್ ತನಗೆ ಮೋಸ ಮಾಡಿದ್ದಾರೆ ಎಂದು ಬಡಬಡಿಸಿದ್ದ ಮಹಾಲಕ್ಷ್ಮಿ, ಪತಿಯು ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ್ದಾರೆ.

ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ ಅವರು ತಮ್ಮ ಪತಿ, ನಿರ್ಮಾಪಕ ರವೀಂದ್ರ ಬಗ್ಗೆ ಗುರುತರ ಆರೋಪ ಮಾಡಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿತ್ತು. ಹಣದ ವಂಚನೆ ಪ್ರಕರಣದಲ್ಲಿ ಜೈಲು (Jail) ಪಾಲಾಗಿರುವ ರವೀಂದ್ರ ಅವರಿಗೆ ಜಾಮೀನು ಸಿಗುವುದು ಕಷ್ಟವಾಗಿತ್ತು. ಹಾಗಂತ ಮಹಾಲಕ್ಷ್ಮಿ ಬೇಸರದಲ್ಲೂ ಇಲ್ಲ. ದಿನಕ್ಕೊಂದು ಫೋಟೋಶೂಟ್ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ, ಟ್ರೋಲ್ ಆಗುತ್ತಿದ್ದರು.

ಈ ನಡುವೆ ಮಹಾಲಕ್ಷ್ಮಿ ಅವರೇ ಆಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಮದುವೆ ಆಗುವಾಗ ತನ್ನ ಗಂಡ ಸಾಲ ಮಾಡಿರುವ ಮತ್ತು ಅವರಿಗೆ ಮೋಸ ಮಾಡಿರುವ ಯಾವುದೇ ವಿಚಾರವನ್ನು ನನ್ನ ಜೊತೆ ಹಂಚಿಕೊಂಡಿಲ್ಲ. ಅವರು ನನಗೆ ಮೋಸ ಮಾಡಿ ಮದುವೆ ಆಗಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾದ ಮಾತುಗಳು ಹರಿದಾಡಿದವು. ಈ ಮಾತುಗಳು ಸಖತ್ ಸುದ್ದಿ ಆಗಿದ್ದರೂ, ಮಹಾಲಕ್ಷ್ಮಿ ಮಾತ್ರ ಇದು ನಿಜನಾ ಅಥವಾ ಸುಳ್ಳಾ ಎಂದು ಸ್ಪಷ್ಟ ಪಡಿಸಲಿಲ್ಲ.

ಇತ್ತೀಚೆಗಷ್ಟೇ ರವೀಂದ್ರ (Ravindar Chandrasekaran), ಮಹಾಲಕ್ಷ್ಮಿ (Mahalakshmi) ಜೋಡಿಯು ಮೊದಲ ಮದುವೆ ವಾರ್ಷಿಕೋತ್ಸವ ಪೂರೈಸಿದ್ದರು. ಈ ಬೆನ್ನಲ್ಲೇ ವಂಚನೆ ಪ್ರಕರಣವೊಂದರಲ್ಲಿ ರವೀಂದ್ರ ಜೈಲು ಪಾಲಾದ್ರು. ಗಂಡ ಜೈಲು ಸೇರಿದ್ರೆ, ಹೆಂಡತಿ ಮಹಾಲಕ್ಷ್ಮಿ ಮಸ್ತ್ ಆಗಿ ಫೋಟೋಶೂಟ್ ಮಾಡಿಸಿದ್ದರು. ನಟಿಯ ನಡೆಗೆ ನೆಟ್ಟಿಗರು ಕಾಲೆಳೆದಿದ್ದರು.

The post ಖ್ಯಾತ ಕಿರುತೆರೆ ನಟಿ ಮಹಾಲಕ್ಷ್ಮಿ ಪತಿಗೆ ಜಾಮೀನು: ಜೈಲಿನಿಂದ ಆಚೆ ಬರುತ್ತಿದ್ದಂತೆ ಅಪ್ಪಿ ಮುದ್ದಾಡಿದ ನಟಿ! appeared first on Ain Live News.

LEAVE A REPLY

Please enter your comment!
Please enter your name here