Home Uncategorized ಗಗನಕ್ಕೇರಿದ ಬೆಲೆ: ಕೋಲಾರದಿಂದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ನಾಪತ್ತೆ!

ಗಗನಕ್ಕೇರಿದ ಬೆಲೆ: ಕೋಲಾರದಿಂದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ನಾಪತ್ತೆ!

23
0

ಬೆಲೆ ಕೈಗೆಟಕದಂತೆ ಗಗನಕ್ಕೇರಿ ಕೆಂಪು ರಾಣಿಯಂತೆ ಕಾಣುವ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಕೋಲಾರದಿಂದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂಪಾಯಿ ಮೌಲ್ಯದ 11 ಟನ್ ತರಕಾರಿ ನಾಪತ್ತೆಯಾಗಿದೆ. ಕೋಲಾರ: ಬೆಲೆ ಕೈಗೆಟಕದಂತೆ ಗಗನಕ್ಕೇರಿ ಕೆಂಪು ರಾಣಿಯಂತೆ ಕಾಣುವ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಕೋಲಾರದಿಂದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂಪಾಯಿ ಮೌಲ್ಯದ 11 ಟನ್ ತರಕಾರಿ ನಾಪತ್ತೆಯಾಗಿದೆ. ವ್ಯಾಪಾರಿ ಮುನಿರೆಡ್ಡಿ ನೀಡಿದ ದೂರಿನ ಮೇರೆಗೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕೋಲಾರ ಎಸ್ಪಿ ಎಂ ನಾರಾಯಣ್ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ವೆಂಕಟೇಶ್ವರ ಟ್ರೇಡರ್ಸ್‌ ಮುನಿರೆಡ್ಡಿ ಮತ್ತು ಎಜಿ ಟ್ರೇಡರ್ಸ್ ಅವರು ಜೈಪುರದ ಮೂವರು ವ್ಯಾಪಾರಿಗಳಿಗೆ ಟ್ರಕ್‌ನಲ್ಲಿ ತಲಾ 15 ಕೆಜಿಯಂತೆ 735 ಕ್ರೇಟ್‌ಗಳನ್ನು ಕಳುಹಿಸಿದ್ದಾರೆ. ಪ್ರತಿ ಕ್ರೇಟ್ ಟೊಮೆಟೊವನ್ನು 2,000 ದಿಂದ 2,150 ರೂಪಾಯಿಗೆ ಖರೀದಿಸಲಾಗಿದೆ. ಜುಲೈ 27 ರಂದು ಮಧ್ಯಾಹ್ನ ಕ್ರೇಟ್‌ಗಳನ್ನು ಲೋಡ್ ಮಾಡಿದ್ದೆ. 

ಚಾಲಕನ ಸಂಖ್ಯೆ, ವಾಹನ ನೋಂದಣಿ ಸಂಖ್ಯೆ ಮತ್ತು ಇತರ ವಿವರಗಳನ್ನು ಜೈಪುರ ವ್ಯಾಪಾರಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಜೈಪುರ ವ್ಯಾಪಾರಿಗಳು ನಿಯಮಿತವಾಗಿ ಸರಕುಗಳನ್ನು ಟ್ರ್ಯಾಕ್ ಮಾಡುತ್ತಿದ್ದರು. ಜುಲೈ 29 ರಂದು ರಾತ್ರಿ 11 ಗಂಟೆಗೆ ಟ್ರಕ್ ಜೈಪುರ ತಲುಪಬೇಕಿತ್ತು. ಆದರೆ ಶನಿವಾರ ತಡರಾತ್ರಿಯಿಂದ ಚಾಲಕನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಟ್ರಕ್‌ನಲ್ಲಿರುವ ಜಿಪಿಎಸ್ ಟ್ರ್ಯಾಕರ್ ಸಹ ಯಾವುದೇ ಚಲನೆಯನ್ನು ತೋರಿಸಲಿಲ್ಲ ಎನ್ನುತ್ತಾರೆ. 

ಇದನ್ನೂ ಓದಿ: ಕರ್ನಾಟಕ, ಆಂಧ್ರದಲ್ಲಿ ಮಳೆಯಿಂದ ಬೆಳೆಗೆ ಹಾನಿ; ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ.!

ಟೊಮ್ಯಾಟೊಗೆ ರಾತ್ರಿಯಿಡೀ ಕಾಳಜಿ: ಟ್ರಕ್ ಮಾಲೀಕರಿಗೆ ಮಾಹಿತಿಯನ್ನು ರವಾನಿಸಲಾಯಿತು. ಜೈಪುರದ ವ್ಯಾಪಾರಿಗಳು ಸಹ ಚಾಲಕನನ್ನು ಸಂಪರ್ಕಿಸಿ ವಾಹನದ ಚಲನವಲನವನ್ನು ಪತ್ತೆಹಚ್ಚಲು ಪ್ರಯತ್ನಿಸಿದರು, ಆದರೆ ಯಶಸ್ವಿಯಾಗಲಿಲ್ಲ. ವಾಹನದ ಮಾಲೀಕರು ಮತ್ತು ಕೋಲಾರದ ಇಬ್ಬರು ವ್ಯಾಪಾರಿಗಳ ಪ್ರತಿನಿಧಿಗಳು ವಾಹನವನ್ನು ಪತ್ತೆಹಚ್ಚಲು ಜೈಪುರಕ್ಕೆ ತೆರಳಿದ್ದಾರೆ.

ಇಂತಹ ಘಟನೆ ಇದೇ ಮೊದಲಲ್ಲ. ಈ ತಿಂಗಳ ಆರಂಭದಲ್ಲಿ ಬೆಂಗಳೂರಿನಿಂದ ಕೋಲಾರಕ್ಕೆ ಜೀಪಿನಲ್ಲಿ ಸಾಗಿಸುತ್ತಿದ್ದ 2 ಲಕ್ಷ ರೂಪಾಯಿ ಮೌಲ್ಯದ ಟೊಮೆಟೊ ಕಳ್ಳತನವಾಗಿತ್ತು. ಅಪಾರ ಪ್ರಮಾಣದ ಟೊಮೆಟೊ ಬೆಳೆದಿರುವ ಜಿಲ್ಲೆಯ ರೈತರು, ತರಕಾರಿ ತುಂಬಿದ ಪೆಟ್ಟಿಗೆಗಳನ್ನು ದುಷ್ಕರ್ಮಿಗಳು ಕದಿಯುವ ಭೀತಿ ಇರುವುದರಿಂದ ರಾತ್ರಿಯಿಡೀ ತಮ್ಮ ಉತ್ಪನ್ನವನ್ನು ಕಾವಲು ಕಾಯುತ್ತಿದ್ದಾರೆ. 

ತಮ್ಮ ಜಮೀನಿನ ಬಳಿ ಟೆಂಟ್ ಹಾಕಿಕೊಂಡು ಕಳೆದ ಕೆಲ ದಿನಗಳಿಂದ ಕಾವಲು ಕಾಯುತ್ತಿದ್ದಾರೆ. ಬೆಲೆ ಬಾಳುವ ಟೊಮೆಟೊ ರಕ್ಷಣೆಗೆ ಎಪಿಎಂಸಿ ಯಾರ್ಡ್ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಕೋಲಾರ ನಗರ ಇನ್ಸ್ ಪೆಕ್ಟರ್ ಹರೀಶ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here