Home Uncategorized ಗಣೇಶನ‌ ಡ್ಯಾನ್ಸ್ ವಿಚಾರಕ್ಕೆ ಬಿತ್ತು ಹೆಣ, ತಾಯಿ ಮಗನಿಗೆ ಚಾಕು ಇರಿತ

ಗಣೇಶನ‌ ಡ್ಯಾನ್ಸ್ ವಿಚಾರಕ್ಕೆ ಬಿತ್ತು ಹೆಣ, ತಾಯಿ ಮಗನಿಗೆ ಚಾಕು ಇರಿತ

14
0

ಬೆಂಗಳೂರು;-ಗಣೇಶ ವಿಸರ್ಜನೆ ಸಂಭ್ರಮದ ವೇಳೆ ಡ್ಯಾನ್ಸ್ ಮಾಡೋ ವಿಚಾರಕ್ಕೆ ಎರಡು ಗುಂಪುಗಳ ನಡಯವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಶ್ರೀನಿವಾಸ್ ಎಂಬುವವನು ಸಾವನ್ನಪ್ಪಿದ್ರೆ ರಂಜಿತ್ ಎನ್ನುವವನಿಗೂ ಗಂಭೀರ ಗಾಯವಾಗಿದೆ. ಗಲಾಟೆ ವೇಳೆ ಜಗಳ ಬಿಡಿಸಲು ಬಂದಿದ್ದ ಶ್ರೀನಿವಾಸ್ ತಾಯಿಗೂ ಕಿಡಿಗೇಡಿಗಳು ಚಾಕು ಇರಿದ್ದಾರೆ.

ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರಂಜಿತ್ ಹಾಗೂ ಶ್ರೀನಿವಾಸ್ ತಾಯುಗೆ ಚಿಕಿತ್ಸೆ ಕೊಡಿಸಲಾಗ್ತಿದೆ. ಹಿಂದಿನ ತಿಂಗಳು ನಡೆದ ಗಣೇಶ ವಿಸರ್ಜನಾ ಸಮಯದಲ್ಲಿ ಡ್ರಾನ್ಸ್ ವಿಚಾರವಾಗಿಯೂ ಗಲಾಟೆಯಾಗಿತ್ತು. ಶ್ರೀನಿವಾಸ್ ಕಡೆಯವರಿಗೆ ನೀವೂ ಡ್ಯಾನ್ಸ್ ಮಾಡಬೇಡಿ ಇಲ್ಲಿ ಅಂತಾ ಎದುರಾಳಿ ಗುಂಪು ವಾರ್ನ್ ಮಾಡಿದ್ರಂತೆ.ನಿನ್ನೆ ಇವರು ಗಣಪತಿ ಬಿಡುವಾಗ ಶ್ರೀನಿವಾಸ್ ಏರಿಯಾದಲ್ಲಿ ಡ್ಯಾನ್ಸ್ ಮಾಡಿದ್ರೂ. ಈ ವೇಳೆ ಈ ಗಣೇಶ ಬಲಿ ಕೇಳುತ್ತೆ ಅಂತಾ ಕೂಗಿದ್ದಾರೆ. ಆಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ‌.ಗಲಾಟೆಯಲ್ಲಿ ಲಾಂಗು ಮಚ್ಚು ಹಿಡಿದು ಹೊಡೆದಾಡಿಕೊಂಡಿದ್ದಾರೆ.

ಗಲಾಟೆ ಮಾಡಬೇಕು ಅಂತಾ ರೆಡಿಯಾಗಿಯೇ ಬಂದಿದ್ದ ಓರ್ವ ರೌಡಿಶೀಟರ್ ಇದ್ದ ಗುಂಪು
ಗಲಾಟೆ ಮಾಡಿದೆ. ಸದ್ಯ ಘಟನೆಯಲ್ಲಿ ಒರ್ವ ಸಾವನ್ನಪ್ಪಿದ್ರೆ ಇಬ್ಬರು ಆಸ್ಪತ್ರೆಪಾಲಾಗಿದ್ದಾರೆ.
ಆಡುಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಪೊಲೀಸ್ರು ಆರೋಪಿಗಳಿಗೆ ಬಲೆಬೀಸಿದ್ದಾರೆ.

The post ಗಣೇಶನ‌ ಡ್ಯಾನ್ಸ್ ವಿಚಾರಕ್ಕೆ ಬಿತ್ತು ಹೆಣ, ತಾಯಿ ಮಗನಿಗೆ ಚಾಕು ಇರಿತ appeared first on Ain Live News.

LEAVE A REPLY

Please enter your comment!
Please enter your name here