Home Uncategorized ಗದಗ: ಬೈಕ್ ಗಳ ನಡುವೆ ಡಿಕ್ಕಿ, ಕೆಳಗೆ ಬಿದ್ದ ಸವಾರರ ಮೇಲೆ ಲಾರಿ ಹರಿದು, ಇಬ್ಬರ...

ಗದಗ: ಬೈಕ್ ಗಳ ನಡುವೆ ಡಿಕ್ಕಿ, ಕೆಳಗೆ ಬಿದ್ದ ಸವಾರರ ಮೇಲೆ ಲಾರಿ ಹರಿದು, ಇಬ್ಬರ ದುರ್ಮರಣ!

50
0

ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಗದಗ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ನಿಯಂತ್ರಣ ತಪ್ಪಿ ಬೈಕ್ ನಿಂದ ಕೆಳಗೆ ಬಿದ್ದವರ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. 
 
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ.  ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ತಂಬ್ರಹಳ್ಳಿ ನಿವಾಸಿಗಳಾದ ಅಲ್ಲಾಸಾಬ್ ನಧಾಪ್, ರಂಜಾನ್ ಬೇಗಂ ಮೃತ ದುರ್ದೈವಿಗಳು.

ಇನ್ನು ಮತ್ತೊಂದು ಬೈಕ್ ನಲ್ಲಿದ್ದ ಲಲಿತಾ ಹಂಚಿನಾಳ, ಅಪ್ಪಣ್ಣ ಕವಲೂರು ಗಾಯಾಳುಗಳಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರು ಕೊಪ್ಪಳ ಜಾತ್ರೆ ಮುಗಿಸಿಕೊಂಡು ಗದಗ ತಾಲೂಕಿನ ಕಣಗಿನಹಾಳಕ್ಕೆ ತೆರಳುತ್ತಿದ್ದಾಗ ಬೈಕ್‌ ಗಳ ನಡುವೆ ಡಿಕ್ಕಿಯಾಗಿತ್ತು.

ಅಪಘಾತದ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here