Home Uncategorized ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ: ಸಿಎಂ ಬೊಮ್ಮಾಯಿ

ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ: ಸಿಎಂ ಬೊಮ್ಮಾಯಿ

22
0

ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.ಮಹಾದೇವಪುರದಲ್ಲಿನ ಐಟಿ , ಬಿಟಿ ಕಂಪನಿಗಳನ್ನು ನೋಡುತ್ತಿದ್ದರೆ ಗರುಡಾಚಾರ್ ಪಾಳ್ಯ ದೇಶದಲ್ಲಿ ಸಿಲಿಕಾನ್ ವ್ಯಾಲಿ ಅನ್ನಿಸುತ್ತದೆ ಎಂದು ಅವರು ತಿಳಿಸಿದರು. ಬೆಂಗಳೂರು: ಗರುಡಾಚಾರ್ ಪಾಳ್ಯ ದೇಶದ ಸಿಲಿಕಾನ್ ವ್ಯಾಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.

ಕಾರ್ಯಕ್ರಮವೊಂದರಲ್ಲಿ ಮಹಾದೇವಪುರ ಪ್ರದೇಶದ  ಗರುಡಾಚಾರ್ ಪಾಳ್ಯದಲ್ಲಿನ ಐಟಿ ಉದ್ಯಮ ಅಭಿವೃದ್ಧಿ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ, ಮಹಾದೇವಪುರದಲ್ಲಿನ ಐಟಿ , ಬಿಟಿ ಕಂಪನಿಗಳನ್ನು ನೋಡುತ್ತಿದ್ದರೆ ಗರುಡಾಚಾರ್ ಪಾಳ್ಯ ದೇಶದಲ್ಲಿ ಸಿಲಿಕಾನ್ ವ್ಯಾಲಿ ಅನ್ನಿಸುತ್ತದೆ ಎಂದು ಅವರು ಹೇಳಿದರು. 

ಇದನ್ನೂ ಓದಿ: 8 ಕನ್ನಡಿಗರಿಗೆ ಪದ್ಮ ಪ್ರಶಸ್ತಿಯು ಕರ್ನಾಟಕದಲ್ಲಿನ ಅಪಾರ ಪ್ರತಿಭೆಯನ್ನು ತೋರಿಸುತ್ತದೆ: ಬಸವರಾಜ ಬೊಮ್ಮಾಯಿ

ಮಹಾದೇವಪುರ ನಗರ ಮತ್ತು 110 ಹಳ್ಳಿಗಳನ್ನೊಳಗೊಂಡ  ಗ್ರಾಮಾಂತರ ಪ್ರದೇಶದಿಂದ ಕೂಡಿರುವ ಪ್ರದೇಶವಾಗಿದೆ. ಸಹಜವಾಗಿ ದೇವಾಲಯಗಳು ಮತ್ತು ಸಮುದಾಯ ಹಾಲ್ ಗಳ ನಿರ್ಮಾಣಕ್ಕೆ ಬೇಡಿಕೆಯಿದೆ. ಈ ಹಿಂದೆ ಇದು ಹಳ್ಳಿಯಾಗಿತ್ತು. ಇದೀಗ ನಗರದ ಕೇಂದ್ರ ಪ್ರದೇಶವಾಗಿದೆ. ಇದು ಗ್ರಾಮೀಣ ಪರಿಸರ ಮತ್ತು ಆಧುನಿಕತೆ ಎರಡನ್ನು ಒಳಗೊಂಡಿದೆ ಎಂದರು.

ಮನುಷ್ಯ ದೇವರಲ್ಲಿ ನಂಬಿಕೆ ಹೊಂದಬೇಕು. ಪ್ರತಿಯೊಂದು ಅಭಿವೃದ್ಧಿಗೂ ದೇವರ ಆಶೀರ್ವಾದ ಇರಬೇಕು. ಭಕ್ತಿಯಿಂದ ದೈವಬಲವನ್ನು ಪಡೆಯಲು ಸಾಧ್ಯ. ದೇವರ ದರ್ಶನ ಮತ್ತು ಆಶೀರ್ವಾದ ಪಡೆಯಲು ನಮ್ಮ ಪೂರ್ವಿಕರು ದೇವಾಲಯಗಳನ್ನು ಕಟ್ಟಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿದಾಗ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಅವರು ಹೇಳಿದರು.
 

LEAVE A REPLY

Please enter your comment!
Please enter your name here