Home Uncategorized ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ರಾಜೀನಾಮೆ: ವಿಧಾನಸಭೆಯಲ್ಲಿ 15ಕ್ಕೆ ಕುಸಿದ ಪಕ್ಷದ ಬಲ

ಗುಜರಾತ್ ಕಾಂಗ್ರೆಸ್ ಶಾಸಕ ಚಾವ್ಡಾ ರಾಜೀನಾಮೆ: ವಿಧಾನಸಭೆಯಲ್ಲಿ 15ಕ್ಕೆ ಕುಸಿದ ಪಕ್ಷದ ಬಲ

17
0

ಅಹ್ಮದಾಬಾದ್: ಲೋಕಸಭಾ ಚುನಾವಣೆಗಳಿಗೆ ಮುನ್ನ ಗುಜರಾತಿನಲ್ಲಿ ಕಾಂಗ್ರೆಸ್ ಇನ್ನೊಂದು ಹಿನ್ನಡೆಯನ್ನು ಅನುಭವಿಸಿದೆ. ಹಿರಿಯ ಕಾಂಗ್ರೆಸ್ ಶಾಸಕ ಸಿ.ಜೆ.ಚಾವ್ಡಾ ಶುಕ್ರವಾರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದರೊಂದಿಗೆ 182 ಸದಸ್ಯರ ಸದನದಲ್ಲಿ ಪಕ್ಷದ ಬಲ 15ಕ್ಕೆ ಕುಸಿದಿದೆ.

ಚಾವ್ಡಾ ಡಿಸೆಂಬರ್ 2022ರ ವಿಧಾನಸಭಾ ಚುನಾವಣೆಗಳಲ್ಲಿ ಮೆಹ್ಸಾನಾ ಜಿಲ್ಲೆಯ ವಿಜಾಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಮೂರು ಬಾರಿಯ ಶಾಸಕ ಚಾವ್ಡಾ ಶುಕ್ರವಾರ ಬೆಳಿಗ್ಗೆ ಗಾಂಧಿನಗರದಲ್ಲಿ ಸ್ಪೀಕರ್ ಶಂಕರ ಚೌಧರಿಯವರಿಗೆ ತನ್ನ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ಚಾವ್ಡಾ 2002ರಲ್ಲಿ ಗಾಂಧಿನಗರದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

LEAVE A REPLY

Please enter your comment!
Please enter your name here