Home Uncategorized ಗುಡ್ಡು ಮುಸ್ಲಿಂಗಾಗಿ ಅಲ್ಲ, ಸಿಎಂ ಯೋಗಿ ರ್ಯಾಲಿಗಳ ಮೇಲ್ವಿಚಾರಣೆಗೆ ಉ.ಪ್ರದೇಶ ಪೊಲೀಸರು ಕರ್ನಾಟಕದಲ್ಲಿದ್ದಾರೆ: ಅಧಿಕಾರಿಗಳ ಸ್ಪಷ್ಟನೆ

ಗುಡ್ಡು ಮುಸ್ಲಿಂಗಾಗಿ ಅಲ್ಲ, ಸಿಎಂ ಯೋಗಿ ರ್ಯಾಲಿಗಳ ಮೇಲ್ವಿಚಾರಣೆಗೆ ಉ.ಪ್ರದೇಶ ಪೊಲೀಸರು ಕರ್ನಾಟಕದಲ್ಲಿದ್ದಾರೆ: ಅಧಿಕಾರಿಗಳ ಸ್ಪಷ್ಟನೆ

13
0

ರಾಜ್ಯದಲ್ಲಿ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯ ಬಗ್ಗೆ ವದಂತಿಗಳು ಹಬ್ಬಿದ್ದು, ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರು: ರಾಜ್ಯದಲ್ಲಿ ಉತ್ತರಪ್ರದೇಶದ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯ ಬಗ್ಗೆ ವದಂತಿಗಳು ಹಬ್ಬಿದ್ದು, ಈ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಉಮೇಶ್ ಪಾಲ್ ಹತ್ಯೆ ನಡೆದಿತ್ತು. ಹತ್ಯೆ ಬಳಿಕ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಗುಡ್ಡು ಮುಸ್ಲಿಂದ ದಕ್ಷಿಣ ರಾಜ್ಯದಲ್ಲಿ ಆಶ್ರಯ ಪಡೆದುಕೊಂಡಿದ್ದು, ಆದನ ಬಂಧನಕ್ಕಾಗಿ ಪೊಲೀಸರು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆಂದು ಸುದ್ದಿಗಳು ಹರಡಿವೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಚುನಾವಣಾ ರ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ರ್ಯಾಲಿಗಳ ಸಿದ್ಧತೆಗಳ ಪರಿಶೀಲನೆಗೆ ಪೊಲೀಸರು ಕರ್ನಾಟಕಕ್ಕೆ ಭೇಟಿ ನೀಡಿದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಭದ್ರತೆಯನ್ನು ಹೆಚ್ಚಿಸಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಯೋಗಿ ಆದಿತ್ಯನಾಥ್ ಅವರ ರ್ಯಾಲಿಗಳನ್ನು ಯೋಜಿಸಲಾಗಿರುವ ಜಿಲ್ಲೆಗಳಲ್ಲಿ ಭದ್ರತೆಗಳನ್ನು ಪರಿಶೀಲಿಸಲು ರಾಜ್ಯಕ್ಕೆ ಬಂದಿದ್ದಾರೆಯೇ ಹೊರತು ಗುಡ್ಡು ಮುಸ್ಲಿಂ ಪತ್ತೆಗಾಗಿ ಅಲ್ಲ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here