ಧಾರವಾಡ;- ಗುತ್ತಿಗೆದಾರರಿಗೆ ಬಿಲ್ ಆಗದೆ ಇರೋ ವಿಚಾರವಾಗಿ ಗುತ್ತಿಗೆದಾರರ ಸಂಘದ ಅದ್ಯಕ್ಷ ಸುಭಾಷ್ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಆಮರಣ ಉಪವಾಸ ಸತ್ಯಾಗ್ರಹಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಆಮರಣ ಉಪವಾಸ ಸತ್ಯಾಗ್ರಹಕ್ಕೆ ಉತ್ತರ ಕರ್ನಾಟಕ ಗುತ್ತಿಗೆದಾರರು ಮುಂದಾಗಿದ್ದಾರೆ ಎಂದರು.
ಮೊದಲಿನ ಸರ್ಕಾರದಲ್ಲಿದ್ದ ನಮ್ಮ ಬಾಕಿ ಈಗ ಡಬಲ್ ಆಗಿದೆ. ಮೊದಲಿನ ಸರ್ಕಾರದಲ್ಲಿ 7 ಸಾವಿರ ಕೋಟಿ ರೂ. ಬಾಕಿ ಇತ್ತು. ಅದು ಈಗ 15 ಸಾವಿರ ಕೋಟಿಗೆ ಏರಿದೆ. ಕಾಮಗಾರಿಗಳು ಆದರೂ ಬಾಕಿ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸಾಲದ ಬಡ್ಡಿಯೂ ಏರುತ್ತಿದೆ. ಅನೇಕರಿಗೆ ಬ್ಯಾಂಕ್.ಗಳಿಂದ ನೋಟಿಸ್ ಬರುತ್ತಿವೆ. ಕೈಯಲ್ಲಿ ಹಣ ಇಲ್ಲದೇ ಕಾಮಗಾರಿ ಮಾಡಲು ಆಗುತ್ತಿಲ್ಲ. ಕಾಮಗಾರಿ ನಿಂತರೆ ಕ್ರಮ ತೆಗೆದುಕೊಳ್ಳುತ್ತೇವೆ ಅಂತಾರೆ. ಆದರೆ ಕಾಮಗಾರಿ ಮಾಡಬೇಕೇಂದ್ರೆ ಹಣವೇ ಇಲ್ಲ. ಹೀಗಾಗಿ ಈಗ ನಮಗೆ ಆಮರಣ ಉಪವಾಸವೊಂದೇ ಕೊನೆ ಅಸ್ತ್ರ ಎಂದರು.
ಮೊನ್ನೆ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಶೇ. 10ರಷ್ಟು ಮಾತ್ರ ಬಾಕಿ ಹಣ ನೀಡಿದ್ದಾರೆ. ಎಲ್ಲ ಹಣ ಗ್ಯಾರಂಟಿಗೆ ಹಾಕಿದ್ದಾರೆ. ಇದರಿಂದ ನಮಗೆ ಸಂಕಷ್ಟ ಬಂದಿದೆ. ಹೀಗಾಗಿ ನಾವು ಆಮರಣ ಉಪವಾಸಕ್ಕೆ ಕುಳಿತುಕೊಳ್ಳುತ್ತೇವೆ. ಹಣ ಬಿಡುಗಡೆ ಆಗೋವರೆಗೂ ಉಪವಾಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
The post ಗುತ್ತಿಗೆದಾರರ ಬಿಲ್ ಬಾಕಿ; ಉಪವಾಸ, ಸತ್ಯಾಗ್ರಹಕ್ಕೆ ಆಗ್ರಹ – ಸುಭಾಷ್ ಪಾಟೀಲ್ appeared first on Ain Live News.
