Home Uncategorized ಗೂಗಲ್ ಕ್ರೋಮ್‌ನಲ್ಲಿ ಜಾಹೀರಾತು ಗೌಪ್ಯತೆಯ ನಿಯಂತ್ರಣವನ್ನು ಕಾಪಾಡೋದು ಹೇಗೆ ಗೊತ್ತಾ?

ಗೂಗಲ್ ಕ್ರೋಮ್‌ನಲ್ಲಿ ಜಾಹೀರಾತು ಗೌಪ್ಯತೆಯ ನಿಯಂತ್ರಣವನ್ನು ಕಾಪಾಡೋದು ಹೇಗೆ ಗೊತ್ತಾ?

12
0

ಹೆಚ್ಚು ವ್ಯಾಪಕವಾಗಿ ಬೆಳಕೆಯಾಗುವ ವೆಬ್‌ ಬ್ರೌಸರ್‌ಗಳಲ್ಲಿ ಗೂಗಲ್ ಕ್ರೋಮ್ ಕೂಡಾ ಒಂದು. ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬ್ರೌಸರ್‌ ಅನ್ನು ಬಳಸುವಾಗ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಕ್ರೋಮ್ ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಹೀಗಾಗಿ ಹೊಸ ಫೀಚರ್‌ ಅನ್ನು ಕ್ರೋಮ್‌ನಲ್ಲಿ ಪರಿಚಯಿಸಲಾಗಿದೆ. ಈ ಹೊಸ ವೈಶಿಷ್ಟ್ಯದ ಪರಿಚಯದೊಂದಿಗೆ ಜಾಹೀರಾತುದಾರರು ಜಾಹೀರಾತುಗಳ ಮೂಲಕ ಹೇಗೆ ನಿಮ್ಮನ್ನು ಗುರಿಪಡಿಸುತ್ತಾರೆ ಎಂಬುದರ ಕುರಿತು ನೀವು ಈಗ ಹೆಚ್ಚಿನ ನಿಯಂತ್ರಣವನ್ನು ಹೊಂದಲಿದ್ದೀರಿ. ಕ್ರಮೇಣ ಈ ಫೀಚರ್‌ ಕಂಪ್ಯೂಟರ್ ಮತ್ತು ಆಂಡ್ರಾಯ್ಡ್‌ ಡಿವೈಜ್‌ ಎರಡರಲ್ಲೂ ಲಭ್ಯವಾಗಲಿದೆ. ಇದು ನಿಮ್ಮ ಆದ್ಯತೆಗೆ ಅನುಗುಣವಾಗಿ ವರ್ಗೀಕರಿಸಿ ಜಾಹೀರಾತನ್ನು ನೀಡುತ್ತದೆ

ಜಾಹೀರಾತು ಗೌಪ್ಯತೆ ಸೆಟ್ಟಿಂಗ್ಗಳನ್ನು ಪ್ರವೇಶಿಸುವುದು :

ನಿಮ್ಮ ಡಿವೈಜ್‌ನಲ್ಲಿ ಕ್ರೋಮ್ ಅಪ್ಲಿಕೇಷನ್‌ ಅನ್ನು ಗುರುತಿಸಿ ಮತ್ತು ಅದನ್ನು ತೆರೆಯಿರಿ.

 

ಕ್ರೋಮ್ ಇಂಟರ್‌ಫೇಸ್‌ನ ಮೇಲಿನ ಬಲ ಮೂಲೆಯಲ್ಲಿ ನಿಮಗೆ ಮೂರು ಲಂಬ ಚುಕ್ಕೆಗಳು ಕಾಣುತ್ತವೆ. ಮೆನು ತೆರೆಯಲು ಈ ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್‌ಗಳನ್ನು ಆಯ್ಕೆ ಮಾಡಿಕೊಳ್ಳಿ.

 

ಸೆಟ್ಟಿಂಗ್ ಮೆನುವಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ `ಪ್ರೈವೇಸಿ ಆಂಡ್‌ ಸೆಕ್ಯೂರಿಟಿ’ ಯನ್ನು ಟ್ಯಾಪ್ ಮಾಡಿ. ಈ ಆಯ್ಕೆಯು ನಿಮ್ಮ ಆನ್‌ಲೈನ್‌ ಗೌಪ್ಯತೆಯ ವಿವಿಧ ಅಂಶಗಳನ್ನು ನಿಯಂತ್ರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

 

`ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ವಿಭಾಗದಲ್ಲಿ ನಿಮಗೆ `ಆಡ್ ಪ್ರೈವೇಸಿ’ ಎಂಬ ಆಯ್ಕೆ ಕಾಣಿಸುತ್ತದೆ. ಜಾಹೀರಾತು ಗೌಪ್ಯತೆಯ ಸೆಟ್ಟಿಂಗ್‌ಗೆ ಅಕ್ಸೆಸ್ ಪಡೆಯಲು ಅದರ ಮೇಲೆ ಟ್ಯಾಪ್ ಮಾಡಿ.

ಜಾಹೀರಾತು ವೈಶಿಷ್ಟ್ಯಗಳ ನಿರ್ವಹಣೆ :
ಒಮ್ಮೆ ನೀವು ಆಡ್‌ ಪ್ರೈವೇಸಿ ಸೆಟ್ಟಿಂಗ್ ಅನ್ನು ಪ್ರವೇಶಿಸಿದ ಮೇಲೆ, ನಿಮ್ಮ ಆದ್ಯತೆಗಳ ಪ್ರಕಾರ ನಿರ್ದಿಷ್ಟ ಜಾಹೀರಾತು ವೈಶಿಷ್ಟ್ಯಗಳನ್ನು ನೀವು ನಿರ್ವಹಿಸಬಹುದು. ಅದಕ್ಕೆ ನೀವು ಹೀಗೆ ಮಾಡಬೇಕು.

`ಆಡ್ ಪ್ರೈವೇಸಿ’ ಅಥವಾ ಜಾಹೀರಾತು ಗೌಪ್ಯತೆಯ ವಿಭಾಗದಲ್ಲಿ ಆನ್ ಅಥವಾ ಆಫ್‌ ಮಾಡಬಹುದಾದ ಜಾಹೀರಾತು ವೈಶಿಷ್ಟ್ಯಗಳ ಪಟ್ಟಿ ನಿಮಗೆ ಕಾಣಸಿಗುತ್ತದೆ. ನಿಮ್ಮ ಜಾಹೀರಾತು-ಸಂಬಂಧಿತ ಮಾಹಿತಿಯನ್ನು ಕ್ರೋಮ್ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಈ ವೈಶಿಷ್ಟ್ಯಗಳು ನಿರ್ಧರಿಸುತ್ತವೆ. ಹೀಗಾಗಿ ಇದರ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಕಸ್ಟಮೈಸ್ ಮಾಡಲು ಬಯಸುವ ಜಾಹೀರಾತು ವೈಶಿಷ್ಟ್ಯವನ್ನು ಆರಿಸಿಕೊಳ್ಳಬಹುದು.

ನಿರ್ದಿಷ್ಟ ಜಾಹೀರಾತು ವಿಷಯಗಳನ್ನು ವೆಬ್‌ಸೈಟ್‌ಗಳೊಂದಿಗೆ ಹಂಚಿಕೊಳ್ಳದಂತೆ ನಿರ್ಬಂಧಿಸಲು ನೀವು ಹೀಗೆ ಮಾಡಬೇಕು.

 

ನಿಮ್ಮ ಡಿವೈಜ್‌ನಲ್ಲಿ ಕ್ರೋಮ್ ಅಪ್ಲಿಕೇಶನ್ ಅನ್ನು ತೆರೆಯಿರಿ.

 

ಮೆನುವನ್ನು ತೆರೆಯಲು ಕ್ರೋಮ್‌ನ ಬಲ ಮೂಲೆಯಲ್ಲಿ ಲಂಬವಾಗಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಬಳಿಕ `ಸೆಟ್ಟಿಂಗ್ಸ್‌’ ಅನ್ನು ಆಯ್ಕೆ ಮಾಡಿ.

 

ಸೆಟ್ಟಿಂಗ್ಸ್‌ ಮೆನುವಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು `ಪ್ರೈವೇಸಿ ಆಂಡ್‌ ಸೆಕ್ಯೂರಿಟಿ’ ಯನ್ನು ಟ್ಯಾಪ್ ಮಾಡಿ.

 

`ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ವಿಭಾಗದೊಳಗೆ ನಿಮಗೆ `ಆಡ್‌ ಪ್ರೈವೇಸಿ’ ಮತ್ತು `ಆಡ್ ಟಾಪಿಕ್ಸ್‌’ ಆಯ್ಕೆ ಕಾಣಿಸುತ್ತದೆ. ನಿಮ್ಮ ಜಾಹೀರಾತು ಆಸಕ್ತಿಗಳನ್ನು ನಿರ್ವಹಿಸಲು “ಜಾಹೀರಾತು ವಿಷಯಗಳು” ಅಥವಾ ಆಡ್‌ ಟಾಪಿಕ್ಸ್‌ ಮೇಲೆ ಟ್ಯಾಪ್ ಮಾಡಿ.

 

The post ಗೂಗಲ್ ಕ್ರೋಮ್‌ನಲ್ಲಿ ಜಾಹೀರಾತು ಗೌಪ್ಯತೆಯ ನಿಯಂತ್ರಣವನ್ನು ಕಾಪಾಡೋದು ಹೇಗೆ ಗೊತ್ತಾ? appeared first on Ain Live News.

LEAVE A REPLY

Please enter your comment!
Please enter your name here