Home Uncategorized ‘ಗೃಹಜ್ಯೋತಿ’ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್'ನಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ!

‘ಗೃಹಜ್ಯೋತಿ’ ಗ್ಯಾರಂಟಿ: ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್'ನಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆ!

34
0

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿದ್ದು, ಚುನಾವಣೆಯಲ್ಲಿ ಬಹುವಾಗಿ ಕಾಂಗ್ರೆಸ್ ನ ಗೆಲುವಿನ ಪತಾಕೆ‌ ಹಾರಿಸಲು ನೆರವಾಗಿದ್ದು ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ಘೋಷಣೆ ಮಾಡಿದ್ದು. ಕಾಂಗ್ರೆಸ್ ಪಕ್ಷ ನೀಡಿದ ಈ ಉಚಿತ ಭರವಸೆ ರಾಜ್ಯದ ಜನರ ಮನಮುಟ್ಟಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯುಂಟು ಮಾಡಿದೆ. ಬೆಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಲೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವನ್ನು ಧೂಳಿಪಟ ಮಾಡಿದ್ದು, ಚುನಾವಣೆಯಲ್ಲಿ ಬಹುವಾಗಿ ಕಾಂಗ್ರೆಸ್ ನ ಗೆಲುವಿನ ಪತಾಕೆ‌ ಹಾರಿಸಲು ನೆರವಾಗಿದ್ದು ಪ್ರತಿ ತಿಂಗಳು ಗೃಹ ಬಳಕೆಯ 200 ಯುನಿಟ್ ಘೋಷಣೆ ಮಾಡಿದ್ದು. ಕಾಂಗ್ರೆಸ್ ಪಕ್ಷ ನೀಡಿದ ಈ ಉಚಿತ ಭರವಸೆ ರಾಜ್ಯದ ಜನರ ಮನಮುಟ್ಟಿ ರಾಜ್ಯಾದ್ಯಂತ ಕಾಂಗ್ರೆಸ್ ಪರ ಅಲೆಯುಂಟು ಮಾಡಿದೆ.

ಆದರೆ, ಈ ಯೋಜನೆಗಳ ಜಾರಿಯಿಂದ ರಾಜ್ಯದ ಆರ್ಥಿಕತೆಯ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಅಧಿಕಾರಿಗಳು-ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈಗಾಗಲೇ ಐಪಿ ಸೆಟ್‌ಗಳಿಗೆ ಸಬ್ಸಿಡಿ ನೀಡುತ್ತಿದೆ ಮತ್ತು ಕುಟೀರ ಜ್ಯೋತಿ ಮತ್ತು ಭಾಗ್ಯಜ್ಯೋತಿಯಂತಹ ವಿವಿಧ ಯೋಜನೆಗಳೂ ಜಾರಿಯಲ್ಲಿವೆ. ಕಳೆದ ಬಜೆಟ್‌ನಲ್ಲಿ ಅಮೃತಜ್ಯೋತಿ ಯೋಜನೆ ಘೋಷಣೆ ಮಾಡಲಾಗಿತ್ತು. ಆದರೆ, ಆ ಯೋಜನೆ ಜಾರಿಯಾಗಲಿಲ್ಲ.

ಈ ಮಾದರಿಯು ಎಎಪಿ ಅಳವಡಿಸಿಕೊಂಡದ್ದಕ್ಕಿಂತ ಸ್ವಲ್ಪ ಭಿನ್ನವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಆದಾಯವನ್ನು ಲೆಕ್ಕಿಸದೆ ಎಲ್ಲಾ ಮನೆಗಳಿಗೆ ಉಚಿತ 200 ಯೂನಿಟ್ ವಿದ್ಯುತ್ ಘೋಷಿಸಿದೆ. ಇದರಿಂದ ಸರ್ಕಾರಕ್ಕೆ ಭಾರೀ ಹೊರೆಯಾಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

5 ವರ್ಷಗಳ ಕಾಲ ಯೋಜನೆ ಜಾರಿಯಲ್ಲಿರುವಂತೆ ಮಾಡುವುದು ಸವಾಲಾಗಿ ಪರಿಣಮಿಸಲಿದೆ. ಚುನಾವಣೆ ವೇಳೆ ಮಾಡಿದ ಘೋಷಣೆಗೆ ಪಕ್ಷ ಬದ್ಧವಾಗಿರಬೇಕು. ಅಧಿಕಾರಕ್ಕೆ ಬಂದ ನಂತರ ಘೋಷಣೆಗಳಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಷರತ್ತುಗಳನ್ನು ಹಾಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

“ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಪ್ರಕಾರ ವಿದ್ಯುತ್ ಪೂರೈಕೆಯ ಸರಾಸರಿ ವೆಚ್ಚ 9.12 ರೂ ಆಗಲಿದೆ. ಸರ್ಕಾರವು ಪ್ರತಿ ತಿಂಗಳು 3848 MU ವಿದ್ಯುತ್ ಅನ್ನು ಗೃಹಬಳಕೆದಾರರಿಗೆ ಉಚಿತವಾಗಿ ನೀಡಬೇಕಾಗುತ್ತದೆ, ಇದರಿಂದ ತಿಂಗಳಿಗೆ 3,509 ಕೋಟಿ ರೂ ಮತ್ತು ವಾರ್ಷಿಕವಾಗಿ 42,108 ಕೋಟಿ ರೂ ವೆಚ್ಚವಾಗಲಿದೆ.

ಸರ್ಕಾರ ಈಗಾಗಲೇ ಐಪಿ ಸೆಟ್‌ಗಳನ್ನು ಹೊರತುಪಡಿಸಿ ವಾರ್ಷಿಕ 14,508 ಕೋಟಿ ರೂ.ಗಳ ಸಬ್ಸಿಡಿ ಮೊತ್ತವನ್ನು ಪಾವತಿಸುತ್ತಿದೆ. ಸರ್ಕಾರವು ಈ ಸಬ್ಸಿಡಿಗಳು ಮತ್ತು ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ಹೊಸ ಯೋಜನೆಯ ನಿರ್ವಹಣೆಯು ಸವಾಲಾಗಿ ಪರಿಣಮಿಸಲಿದೆ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಎಂಜಿ ಪ್ರಭಾಕರ್ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here