ಲಕ್ಷಾಂತರ ಮಂದಿ ಅಸಂಘಟಿತ ಗೃಹ ಕಾರ್ಮಿಕರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಮನೆಗಳಲ್ಲಿ ನಡೆಯುವ ಅಚಾತುರ್ಯಗಳಿಗೆ ಬಲಿಯಾಗಿ, ಕಿರುಕುಳ ಅನುಭವಿಸಿ, ಆರೋಪವನ್ನು ಹೊತ್ತುಕೊಳ್ಳುವ ಮನೆಕೆಲಸದವರು ಜೀತದಾಳಾಗಿ ಬದುಕುತ್ತಿದ್ದಾರೆ. ಬೆಂಗಳೂರು: ಲಕ್ಷಾಂತರ ಮಂದಿ ಅಸಂಘಟಿತ ಗೃಹ ಕಾರ್ಮಿಕರು ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆ ಮಾಲೀಕರು ಹೇಳಿದ ಕೆಲಸಗಳನ್ನು ಮಾಡುತ್ತಾ ಮನೆಗಳಲ್ಲಿ ನಡೆಯುವ ಅಚಾತುರ್ಯಗಳಿಗೆ ಬಲಿಯಾಗಿ, ಕಿರುಕುಳ ಅನುಭವಿಸಿ, ಆರೋಪವನ್ನು ಹೊತ್ತುಕೊಳ್ಳುವ ಮನೆಕೆಲಸದವರು ಜೀತದಾಳಾಗಿ ಬದುಕುತ್ತಿದ್ದಾರೆ. ಪ್ರತೀ ನಿತ್ಯ ಅತ್ಯಾಚಾರ, ಹಲ್ಲೆ, ಜಾತಿ ತಾರತಮ್ಯ ಮತ್ತು ಕಳ್ಳತನದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಸ್ವಂತ ಹಕ್ಕುಗಳಿಲ್ಲದೆ ಗುಲಾಮರಂತೆ ನಡೆಸಿಕೊಳ್ಳಲಾಗುತ್ತಿದೆ.
ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಮಹಿಳೆಯರು ವಿಶ್ರಾಂತಿಗಳಿಲ್ಲದೆ ಮನೆಯಿಂದ ಮನೆಗಳಿಗೆ ತೆರಳಿ ಕೆಲಸ ಮಾಡುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಗೌರವ ಹಾಗೂ ಘನತೆಯ ಕೊರತೆಗಳು ಎದುರಾಗಿದೆ. ಹೀಗಾಗಿ ಗೃಹ ಕಾರ್ಮಿಕರ ಹಕ್ಕು ಹಾಗೂ ಗೌರವಕ್ಕೆ ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್ ಹುಟ್ಟಿಕೊಂಡಿದ್ದು, ಹೋರಾಟಗಳನ್ನು ನಡೆಸುತ್ತಿದೆ.
12 ವರ್ಷಗಳ ಹಿಂದೆಯೇ ಗೃಹ ಕಾರ್ಮಿಕರ ಹಕ್ಕುಗಳ ಯೂನಿಯನ್’ (ಡಿಡಬ್ಲ್ಯೂಆರ್‌ಯು) ಹುಟ್ಟಿಕೊಂಡಿದ್ದು, ಗೃಹ ಕಾರ್ಮಿಕರ ಬಗ್ಗೆ ಜನರ ಮನಸ್ಥಿತಿಯನ್ನು ಬದಲಾಯಿಸುವ ಗುರಿಯನ್ನು ಹೊಂದಿದೆ. ಗೃಹ ಕಾರ್ಮಿಕರು ತಮ್ಮ ಧ್ವನಿ ಎತ್ತಲು ಈ ಸಂಘಟನೆ ವೇದಿಕೆಯನ್ನು ನೀಡುತ್ತಿದೆ. ಕಾರ್ಮಿಕರ ಹಕ್ಕುಗಳಿಗೆ ಧ್ವನಿ ನೀಡುವಲ್ಲಿ ಈ ಸಂಘಟನೆ ಯಶಸ್ವಿಯಾಗಿದೆ. ಮತ್ತು ಅವರು ಎದುರಿಸುತ್ತಿರುವ ಅನ್ಯಾಯದ ವಿರುದ್ಧ ಹೋರಾಡಲು ಸಮುದಾಯವನ್ನು ಬಲಪಡಿಸುವ ಯತ್ನಗಳನ್ನು ಮಾಡುತ್ತಿದೆ.
ಸಂಘಟನೆ ಆರಂಭಕ್ಕೂ ಮುನ್ನ ಕಾರ್ಮಿಕರು ತಮ್ಮ ಮೇಲಾಗುತ್ತಿದ್ದ ದೌರ್ಜನ್ಯಗಳನ್ನು ಸಹಿಸಿಕೊಂಡು ಮೌನ ವಹಿಸುತ್ತಿದ್ದರು. ಇದೀಗ ಅದರ ವಿರುದ್ಧ ಧ್ವನಿ ಎತ್ತರು ಧೈರ್ಯ ತೋರುತ್ತಿದ್ದಾರೆ. ಅನ್ಯಾಯದ ವಿರುದ್ಧ ಮಾತನಾಡುತ್ತಿದ್ದಾರೆ. ಇವರನ್ನು ಮುಂಚೂಣಿ ಕಾರ್ಮಿಕರೆಂದು ಗುರುತಿಸಲಾಗಿಲ್ಲವಾದ್ದರಿಂದ, ಅವರನ್ನು ರಕ್ಷಿಸುವ ಯಾವುದೇ ಕಾನೂನು ಅಥವಾ ನಿಬಂಧನೆಗಳಿಲ್ಲ. ಇದೀಗ ನಮ್ಮ ಸಂಘಟನೆಯೇ ಕುಂದುಕೊರತೆ ನಿವಾರಣಾ ಕಾರ್ಯವಿಧಾನದೊಂದಿಗೆ ಸಮಸ್ಯೆಗಳ ಪರಿಹರಿಸುವ ಕೆಲಸ ಮಾಡುತ್ತಿದೆ. ಸಭೆಗಳು, ಶಿಬಿರಗಳು ಮತ್ತು ಪ್ರತಿಭಟನೆಗಳನ್ನು ನಡೆಸುತ್ತಿದೆ. ಇದರ ಪರಿಣಾಮ ಹಲವಾರು ಸಂಘಗಳು ಗೃಹ ಕಾರ್ಮಿಕರನ್ನು ಸಮಾನವಾಗಿ ಪರಿಗಣಿಸುವ ಪ್ರಯತ್ನ ಮಾಡುತ್ತಿದೆ ಎಂದು ಡಿಡಬ್ಲ್ಯೂಆರ್‌ಯು ಜಂಟಿ ಕಾರ್ಯದರ್ಶಿ ಗೀತಾ ಮೆನನ್ ಅವರು ಹೇಳಿದ್ದಾರೆ.
ಗೃಹ ಕಾರ್ಮಿಕರಾಗಿ ನಗರದಲ್ಲಿ ಕೆಲಸ ಮಾಡುತ್ತಿರುವ ಅಲಮೇಲು (43) ಎಂಬುವವರು ಮಾತನಾಡಿ, ನಮ್ಮ ಹಕ್ಕುಗಳಿಗಾಗಿ ಹೋರಾಡಲು ನಮಗೆ ವೇದಿಕೆಯನ್ನು ನೀಡಿದ ಡಿಡಬ್ಲ್ಯೂಆರ್‌ಯು ಬಗ್ಗೆ ನಾನು ತಿಳಿದುಕೊಂಡು 5 ವರ್ಷಗಳಾಗಿವೆ. ಇದಕ್ಕೂ ಮೊದಲು, ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕೆಂದು ನಮಗೆ ತಿಳಿದಿರಲಿಲ್ಲ. ವಿಶೇಷವಾಗಿ ಸಾಂಕ್ರಾಮಿಕ ರೋಗ ಸಮಯದಲ್ಲಿ, ಕೋವಿಡ್ ಸಮಯದಲ್ಲಿ ಅನೇಕರು ಕೆಲಸದಿಂದ ಹೊರಗುಳಿದಿದ್ದರು. ಈ ವೇಳೆ ಸಂಘಟನೆ ನಮಗೆ ಪಡಿತರ ಒದಗಿಸಿತು. ರಾಜ್ಯದಾದ್ಯಂತ ಸರ್ಕಾರ ನೀಡಿದ ರೂ.2,000 ಪ್ರೋತ್ಸಾಹ ಧನವನ್ನು ನಮಗೆ ತಲುಪಿಸುವ ಪ್ರಯತ್ನದಲ್ಲೂ ಯಶಸ್ವಿಯಾಯಿತು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ಡಿಡಬ್ಲ್ಯೂಆರ್‌ಯು ಸಾಮಾನ್ಯ ಸಭೆಯೊಂದನ್ನು ಆಯೋಜಿಸಿತ್ತು. ಈ ಸಭೆಯಲ್ಲಿ ಹಲವಾರು ಕಾರ್ಮಿಕರು ಪಾಲ್ಗೊಂಡಿದ್ದರು. ಸಭೆಯಲ್ಲಿ ಅಗತ್ಯವಿದ್ದ ಸಮಯದಲ್ಲಿ ಸರ್ಕಾರದಿಂದ ಯಾವುದೇ ಬೆಂಬಲ ಸಿಗಲಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.
ಗೃಹ ಕಾರ್ಮಿಕರ ಗುರುತಿಸಲು ಮತ್ತು ಅವರ ಮೂಲಭೂತ ಅಗತ್ಯಗಳ ಒದಗಿಸುವ ಉಪಕ್ರಮಗಳನ್ನು ಡಿಡಬ್ಲ್ಯೂಆರ್‌ಯು ತೆಗೆದುಕೊಂಡಿತು. ಜೊತೆಗೆ ನಮಗೆ ಆರ್ಥಿಕ ನೆರವು, ಮಕ್ಕಳಿಗೆ ವಿದ್ಯಾರ್ಥಿನಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಹಾಯ ಸೇರಿದಂತೆ ಹಲವು ನೆರವುಗಳನ್ನು ಒದಗಿಸಿತು ಎಂದು ಹೇಳಿದರು.
ಗೃಹ ಕಾರ್ಮಿಕರು ಇದೀಗ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ವೇತನದ ಬಗ್ಗೆ ಮಾತುಕತೆ ಮಾಡಲು ಸಮರ್ಥರಾಗಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಹಲವಾರು ಮಸೂದೆಗಳನ್ನು ಪ್ರಸ್ತಾಪಿಸಲಾಯಿತು. ಆದರೆ, ಕಾರ್ಮಿಕರ ಪ್ರತಿಭಟನೆಗಳ ಹೊರತಾಗಿಯೂ ಆಗ್ರಹಗಳ ಬಗ್ಗೆ ಸರ್ಕಾರ ಕಿವಿಕೊಡಲಿಲ್ಲ. ನಮ್ಮ ಕಾರ್ಮಿಕರು ದೇಶದ ಜಿಡಿಪಿಗೆ ಕೊಡುಗೆ ನೀಡಿದ್ದರೂ ಕೂಡ ಮಾನ್ಯತೆಗಾಗಿ ಇನ್ನು ಹೋರಾಡುತ್ತಿದ್ದಾರೆಂದು ಗೀತಾ ಮೆನನ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಸಂಘಟನೆಯು ಬೆಂಗಳೂರಿನಲ್ಲಿ ಮಾತ್ರವಲ್ಲದೆ ಬೆಳಗಾವಿ ಮತ್ತು ಮಂಗಳೂರಿನಲ್ಲಿಯೂ ತನ್ನ ಚಾಪನ್ನು ಮೂಡಿಸಿದೆ. ಗೃಹ ಕಾರ್ಮಿಕರ ರಾಷ್ಟ್ರೀಯ ಒಕ್ಕೂಟ ಮತ್ತು ಹಲವಾರು ಇತರ ಗುಂಪುಗಳೊಂದಿಗೆ ಸೇರಿಕೊಂಡು ಕಾರ್ಮಿಕರ ಗೌರವ ಹಾಗೂ ಘನತೆಗಾಗಿ ಹೋರಾಟ ಮಾಡುತ್ತಿದೆ.