ಗೃಹಲಕ್ಷ್ಮೀ ಯೋಜನೆ ಕುರಿತು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ. ಮೈಸೂರು : ಗೃಹಲಕ್ಷ್ಮೀ ಯೋಜನೆ ಕುರಿತು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ವಿರುದ್ಧ ಕಾಂಗ್ರೆಸ್ ಟೀಕಾ ಪ್ರಹಾರ ನಡೆಸಿದೆ. ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆ ಜಗಳ ಹಚ್ಚುವಂತಿದೆ. ಮುಸ್ಲಿಂರ ಮನೆಯಲ್ಲಿ ಎರಡು ಹೆಂಡ್ತಿ ಮೂರು ಹೆಂಡ್ತಿ ಇದ್ದಾರೆ. ಅವರಲ್ಲಿ ಯಾರು ಯಜಮಾನಿ ಆಗುತ್ತಾರೆ? ಅವರ ಮನೆಯೊಳಗೆ ಬೆಂಕಿ ಹಾಕುತ್ತಿದ್ದಿರಿ. ಕುಟುಂಬ ಒಡೆಯುವ ಕೆಲಸ ಆಗುತ್ತಿದೆ ಎಂದು ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದರು.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಅತ್ತೆ ಸೊಸೆ ಜಗಳ ಎಂಬ ವಿಚಾರವನ್ನು ಮುನ್ನೆಲೆಗೆ ತಂದು ಬಿಜೆಪಿ ರಾಜ್ಯದ ಮಹಿಳಾ ಸಮುದಾಯವನ್ನು ಅವಮಾನಿಸುತ್ತಿದೆ. ಮಹಿಳೆಯರನ್ನು ಜಗಳ ಮಾಡುವವರು ಎಂಬಂತೆ ಬಿಂಬಿಸುತ್ತಿರುವ ರಾಜ್ಯ ಬಿಜೆಪಿ ಸ್ತ್ರೀ ಗೌರವವನ್ನು ಕಳೆಯುವ ಮೂಲಭೂತವಾದವನ್ನು ಸಮಾಜದಲ್ಲಿ ಸ್ಥಾಪಿಸುತ್ತಿದೆ. ಸಂಸದ ಪ್ರತಾಪ್ ಸಿಂಹ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದೆ.
“ಅತ್ತೆ ಸೊಸೆ ಜಗಳ” ಎಂಬ ವಿಚಾರವನ್ನು ಮುನ್ನೆಲೆಗೆ ತಂದು ರಾಜ್ಯದ ಮಹಿಳಾ ಸಮುದಾಯವನ್ನು ಅವಮಾನಿಸುತ್ತಿದೆ ಬಿಜೆಪಿ.
ಮಹಿಳೆಯರನ್ನು ಜಗಳ ಮಾಡುವವರು ಎಂಬಂತೆ ಬಿಂಬಿಸುತ್ತಿರುವ @BJP4Karnataka ಸ್ತ್ರೀ ಗೌರವವನ್ನು ಕಳೆಯುವ ಮೂಲಭೂತವಾದವನ್ನು ಸಮಾಜದಲ್ಲಿ ಸ್ಥಾಪಿಸುತ್ತಿದೆ.@mepratap ರಾಜ್ಯದ ಮಹಿಳೆಯರ ಕ್ಷಮೆ ಕೇಳಬೇಕು. pic.twitter.com/QhypHxJs2y
— Karnataka Congress (@INCKarnataka) June 3, 2023
ಜನಧನ್ ಖಾತೆಗೆ ಮೋದಿಯವರ 15 ಲಕ್ಷ ಬರಲಿಲ್ಲವೇಕೆ? ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದವರು ಈಗ ಕಾಂಗ್ರೆಸ್ ಸರ್ಕಾರಕ್ಕೆ ರೂ. 2000 ಹಾಕಿ ಎನ್ನುತ್ತಿರುವುದು ಹಾಸ್ಯಾಸ್ಪದ ಅಲ್ಲವೇ? ಎಂದು ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದೆ.
ಉಚಿತ ಕೊಟ್ಟರೆ ಜನ ಸೋಂಬೇರಿಗಳಾಗುತ್ತಾರೆ” “ಅತ್ತೆ, ಸೊಸೆಯ ಕೌಟುಂಬಿಕ ಜಗಳವಾಗುತ್ತದೆ” ಇದು ಬಿಜೆಪಿಗರು ಜನರನ್ನು ಅವಮಾನಿಸಿ ಹೇಳುತ್ತಿರುವ ಹೇಳುತ್ತಿರುವ ಮಾತು. ರಾಜ್ಯದ ಜನರ ಬಗ್ಗೆ ಬಿಜೆಪಿ ಅದೆಷ್ಟು ಕೀಳು ಮನೋಭಾವ ಹೊಂದಿದೆ? ಮತ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಜನರನ್ನು ಈ ಪರಿ ಅವಮಾನಿಸುವುದು ಸರಿಯೇ? ಎಂದು ಪ್ರಶ್ನಿಸಿದೆ.
“ಉಚಿತ ಕೊಟ್ಟರೆ ಜನ ಸೋಂಬೇರಿಗಳಾಗುತ್ತಾರೆ”
“ಅತ್ತೆ, ಸೊಸೆಯ ಕೌಟುಂಬಿಕ ಜಗಳವಾಗುತ್ತದೆ”
ಇದು ಬಿಜೆಪಿಗರು ಜನರನ್ನು ಅವಮಾನಿಸಿ ಹೇಳುತ್ತಿರುವ ಹೇಳುತ್ತಿರುವ ಮಾತು.
ರಾಜ್ಯದ ಜನರ ಬಗ್ಗೆ @BJP4Karnataka ಅದೆಷ್ಟು ಕೀಳು ಮನೋಭಾವ ಹೊಂದಿದೆ?
ಮತ ಹಾಕಿಲ್ಲ ಎಂಬ ಒಂದೇ ಕಾರಣಕ್ಕೆ ಜನರನ್ನು ಈ ಪರಿ ಅವಮಾನಿಸುವುದು ಸರಿಯೇ?
— Karnataka Congress (@INCKarnataka) June 3, 2023
