Home Uncategorized ಚಾಮರಾಜನಗರ: ಶಾಲಾ ಮಕ್ಕಳಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ!

ಚಾಮರಾಜನಗರ: ಶಾಲಾ ಮಕ್ಕಳಲ್ಲಿ ಭಯ ಹುಟ್ಟಿಸಿದ್ದ ಚಿರತೆ ಕೊನೆಗೂ ಸೆರೆ!

25
0

ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಶಾಲಾ‌ ಮಕ್ಕಳ ಮೇಲೆ ದಾಳಿ ಮಾಡಿ, ಭೀತಿ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಶಾಲಾ‌ ಮಕ್ಕಳ ಮೇಲೆ ದಾಳಿ ಮಾಡಿ, ಭೀತಿ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸೆರೆ ಹಿಡಿದಿದೆ.

ಗ್ರಾಮದಲ್ಲಿ ಚಿರತೆ ದಾಳಿ ಹಿನ್ನಲೆ ಮಕ್ಕಳು ಶಾಲೆಗೆ ಹೋಗಲು ಭಯ ಪಡುವಂತಹ ವಾತಾವರಣ ಸೃಷ್ಠಿಯಾಗಿತ್ತು. ಮೈಸೂರಿನಿಂದ ಆಗಮಿಸಿದ್ದ ಟಾಸ್ಕ್​ಫೋರ್ಸ್​ ಮಲ್ಲಿಗೆಹಳ್ಳಿ ಸುತ್ತಮುತ್ತ 60 ಸಿಸಿಕ್ಯಾಮರಾ, 2 ದೊಡ್ಡ ಬೋನ್​ ಸೇರಿದಂತೆ 9 ಬೋನ್​ಗಳನ್ನು ಸಿಬ್ಬಂದಿ ಅಳವಡಿಸಿದ್ದರು.

ಅರಣ್ಯ ಇಲಾಖೆಯ 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಂಬಿಂಗ್​ ಕಾರ್ಯಾಚರಣೆ ಕೂಡ ಮಾಡಲಾಗಿತ್ತು. ಸದ್ಯ ಚಿರತೆ ಬೋನಿಗೆ ಬಿದ್ದಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಜೂನ್‌ನಲ್ಲಿ ಕಗ್ಗಲಿಗುಂಡಿ ಗ್ರಾಮದ ಚಿರತೆ ಮೂವರ ಮೇಲೆ ದಾಳಿ ಮಾಡಿತ್ತು, ಅದರಲ್ಲಿ ಗಾಯಗೊಂಡಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಳು. ಬಳಿಕ ಚಿರತೆ ದಾಳಿ ಭಯದಿಂದ ಮಕ್ಕಳು‌ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದರು. ಅಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಶಾಲೆ ಮುಂದೆ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿಭದ್ರತೆಯನ್ನೂ ಕೂಡ ನೀಡಿತ್ತು. ಇದೀಗ ಕೊನೆಗೂ ಚಿರತೆಯನ್ನು ಸೆರೆ ಹಿಡಿಯಲಾಗಿದ್ದು, ಬನ್ನೇರುಘಟ್ಟ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here