Home Uncategorized ‘’ ಚಾರ್ಟಡ್ ಅಕೌಂಟೆಂಟ್’ಗಳ 55ನೇ ಪ್ರಾದೇಶಿಕ ಸಮ್ಮೇಳನ’’: ಸಿದ್ದರಾಮಯ್ಯ ಉದ್ಘಾಟನೆ

‘’ ಚಾರ್ಟಡ್ ಅಕೌಂಟೆಂಟ್’ಗಳ 55ನೇ ಪ್ರಾದೇಶಿಕ ಸಮ್ಮೇಳನ’’: ಸಿದ್ದರಾಮಯ್ಯ ಉದ್ಘಾಟನೆ

30
0

ಭಾರತೀಯ ಚಾರ್ಟಡ್ ಅಕೌಂಟೆಂಟ್ಸ್ ಸಂಸ್ಥೆಯ (ಐಸಿಎಐ) ದಕ್ಷಿಣ ಭಾರತ ಪ್ರಾಂತೀಯ ಪರಿಷತ್ತಿನ (ಎಸ್‌ಐಆರ್‌ಸಿ) ವತಿಯಿಂದ ಬಳ್ಳಾರಿ ಶಾಖೆಯ ಆಶ್ರಯದಲ್ಲಿ 2023ರ ಅಕ್ಟೋಬರ್ 12 ಮತ್ತು 13ರಂದು ಎರಡು ದಿನಗಳ 55ನೇ ದಕ್ಷಿಣ ಭಾರತ ಮಟ್ಟದ ಚಾರ್ಟಡ್ ಅಕೌಂಟೆಂಟ್‌ಗಳ ಸಮಾವೇಶ- “ಜ್ಞಾನ ಸಂಪನ್ನ ಅರಿವಿನಿಂದ ವಿಕಾಸದೆಡೆಗೆ” – ಹೊಸಪೇಟೆಯಲ್ಲಿ ಏರ್ಪಡಿಸಲಾಗಿದೆ ಎಂದು ಎಸ್‌ಐಆರ್‌ಸಿ ಅಧ್ಯಕ್ಷರಾದ ಸಿಎ ಪನ್ನರಾಜ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಸಮ್ಮೇಳನವನ್ನು ಅಕ್ಟೋಬರ್ 12 ರಂದ ಉದ್ಘಾಟಿಸಲಿದ್ದಾರೆ. ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್, ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ.ಪಾಟೀಲ್, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ, ಕಾರ್ಮಿಕ ಸಚಿವರಾದ ಸಂತೋಷ ಲಾಡ್ ಭಾಗಿಯಾಗಲಿದ್ದಾರೆ.

Home remedies: ಚಳಿಗಾಲದಲ್ಲಿ ಕಿವಿ ನೋವು ನಿವಾರಿಸಲು ಇಲ್ಲಿದೆ ಮನೆಮದ್ದು!

ಐಸಿಎಐ ಅಧ್ಯಕ್ಷರಾದ ಸಿಎ ಅನಿಕೇತ್ ಎಸ್. ತಲಾಟಿ ಮತ್ತು ಉಪಾಧ್ಯಕ್ಷರಾದ ಸಿಎ ರಂಜಿತ್ ಅಗರವಾಲ್ ಅವರೂ ಪಾಲ್ಗೊಳ್ಳುವರು. ಸಂಸ್ಥೆಯ ಏಳು ದಶಕಗಳ ಇತಿಹಾಸದಲ್ಲಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದಾಚೆಗೆ ಗ್ರಾಮೀಣ ಪ್ರದೇಶವೊಂದರಲ್ಲಿ ಈ ಸಮ್ಮೇಳನ ನಡೆಯುತ್ತಿದೆ. ಈ ಮೂಲಕ ಹಂಪಿಯ ಇತಿಹಾಸ, ಐತಿಹಾಸಿಕ ಸ್ಥಳಗಳನ್ನು ಪ್ರತಿನಿಧಿಗಳಿಗೆ ಪರಿಚಯಿಸುವ ಉದ್ದೇಶವನ್ನೂ ಸಹ ಸಂಸ್ಥ ಹೊಂದಿದೆ. ಸಮ್ಮೇಳನದ ಅವಧಿಯಲ್ಲಿ ಆರೋಗ್ಯ ಗೋಷ್ಠಿ ಮತ್ತು ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ.

The post ‘’ ಚಾರ್ಟಡ್ ಅಕೌಂಟೆಂಟ್’ಗಳ 55ನೇ ಪ್ರಾದೇಶಿಕ ಸಮ್ಮೇಳನ’’: ಸಿದ್ದರಾಮಯ್ಯ ಉದ್ಘಾಟನೆ appeared first on Ain Live News.

LEAVE A REPLY

Please enter your comment!
Please enter your name here