ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಮಳೆಯ ವೈಫಲ್ಯದಿಂದ ಬೆಳೆ ಹಾನಿ ಉಂಟಾಗಿದ್ದಕ್ಕೆ ಬೇಸತ್ತು 55 ವರ್ಷದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಡೂರು ತಾಲೂಕಿನ ಲಿಂಗದಹಳ್ಳಿ ನಿವಾಸಿ ಕೃಷ್ಣಾನಾಯ್ಕ್ ಎಂಬುವವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಮಳೆಯ ವೈಫಲ್ಯದಿಂದ ಬೆಳೆ ಹಾನಿ ಉಂಟಾಗಿದ್ದಕ್ಕೆ ಬೇಸತ್ತು 55 ವರ್ಷದ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಡೂರು ತಾಲೂಕಿನ ಲಿಂಗದಹಳ್ಳಿ ನಿವಾಸಿ ಕೃಷ್ಣಾನಾಯ್ಕ್ ಎಂಬುವವರು ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3 ಲಕ್ಷ ಸಾಲ ಮಾಡಿ ರಾಗಿ, ಜೋಳದ ಬೆಳೆಗಳನ್ನು ಬೆಳೆದಿದ್ದರು. ಆದರೆ, ಮಳೆಯ ಅಭಾವದಿಂದ ಬೆಳೆಗಳು ನಾಶವಾಗಿದ್ದು, ಇದರಿಂದ ನೊಂದ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡೂರು ತಾಲೂಕಿನಲ್ಲಿಯೇ ಕಳೆದ 40 ದಿನಗಳಲ್ಲಿ ರೈತರ ಐದನೇ ಆತ್ಮಹತ್ಯೆ ಪ್ರಕರಣ ಇದಾಗಿದೆ.
ಈ ಸಂಬಂಧ ಸಖರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕನ್ನುಬರಪೀಡಿತ ಎಂದು ಘೋಷಿಸಲಾಗಿದೆ. ರಾಜ್ಯದಲ್ಲಿ ಆತ್ಮಹತ್ಯೆಗಳ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೈತರಿಗಾಗಿ ಸಹಾಯವಾಣಿಯನ್ನು ತೆರೆದಿದ್ದಾರೆ.
ಇದನ್ನೂ ಓದಿ: ಟೊಮೊಟೊ ಬೆಳೆದು ನಷ್ಟ: ಸಾಲಬಾಧೆಯಿಂದ ಪಾವಗಡದಲ್ಲಿ ದಂಪತಿ ಆತ್ಮಹತ್ಯೆ
ಕರ್ನಾಟಕದಲ್ಲಿ ಕಳೆದ 18 ತಿಂಗಳಲ್ಲಿ ಬೆಳೆ ನಷ್ಟದಿಂದ ಒಟ್ಟು 1,219 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ 236 ತಾಲೂಕುಗಳ ಪೈಕಿ 194 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, 4,860 ಕೋಟಿ ರೂ. ಗಳ ಪರಿಹಾರ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ.
ಸುಮಾರು 42 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಒಟ್ಟಾರೆ ರಾಜ್ಯದಲ್ಲಿ 30,000 ಕೋಟಿ ರೂ. ಮೌಲ್ಯದ ಬೆಲೆ ಹಾನಿ ಸಂಭವಿಸಿದೆ. ಸದ್ಯ ಕೇಂದ್ರ ಅಧ್ಯಯನ ತಂಡ ರಾಜ್ಯದ 11 ಜಿಲ್ಲೆಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ.