ಕರ್ನಾಟಕದ ಮೀಸಲು ಅರಣ್ಯ ಪ್ರದೇಶದಲ್ಲಿ 50 ಖಾಲಿ ಕ್ಯಾಟ್ರಿಡ್ಜ್ ಪತ್ತೆಯಾಗಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಚಿಕ್ಕಮಗಳೂರು: ಕರ್ನಾಟಕದ ಮೀಸಲು ಅರಣ್ಯ ಪ್ರದೇಶದಲ್ಲಿ 50 ಖಾಲಿ ಕ್ಯಾಟ್ರಿಡ್ಜ್ ಪತ್ತೆಯಾಗಿದ್ದು, ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು–ತತ್ಕೊಳ ಮೀಸಲು ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಬಂದೂಕಿನ ಖಾಲಿ ಕ್ಯಾಟ್ರಿಡ್ಜ್ ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬಿಸಿಲ ದಗೆಗೆ ಪ್ರಾಣಿಗಳು ಕಂಗಾಲು: ಮೈಸೂರು ಮೃಗಾಲಯದಲ್ಲಿ ‘ಏರ್ ಕೂಲರ್’ಗಳ ಅಳವಡಿಕೆ
ಪೊಲೀಸ್ ಮೂಲಗಳ ಪ್ರಕಾರ ಸಾರಗೋಡು–ತತ್ಕೊಳ ಮೀಸಲು ಅರಣ್ಯ ಪ್ರದೇಶದ ಕನ್ನಗದ್ದೆ ಸಂಪರ್ಕ ರಸ್ತೆ ಬದಿಯಲ್ಲಿ ಈ ಕ್ಯಾರ್ಟಿಡ್ಜ್ ಗಳು ಪತ್ತೆಯಾಗಿವೆ. ವಿಚಾರ ತಿಳಿದಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲಿಸಿ ಕ್ಯಾಟ್ರಿಡ್ಜ್ ಗಳನ್ನು ವಶಕ್ಕೆ ಪಡೆದಿದ್ದಾರೆ.
This is from #Chikkamagaluru, #Karnataka.
More than 60 empty cartridges fired in the reserve forest were found on the connecting road from #Vager to #Kannagadde in the #Saragodu – #Tathkola reserve forest.#Mudigere #ForestDeaprtment #ReserveForest #FiringCartridges pic.twitter.com/b6L0zoPcU8
— Hate Detector (@HateDetectors) March 8, 2023
ಅಂತೆಯೇ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ರಸ್ತೆ ಮಾರ್ಗವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ಇಟ್ಟಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಇ.ಕ್ರಾಂತಿ ಅವರು, ‘ರಸ್ತೆ ಬದಿ 50ಕ್ಕೂ ಹೆಚ್ಚು ಖಾಲಿ ಕ್ಯಾಟ್ರಿಜ್‌ಗಳು ಸಿಕ್ಕಿವೆ. ಈ ಬಗ್ಗೆ ಪೋಲಿಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.