Home Uncategorized ಚಿತ್ರದುರ್ಗ: ಮದುವೆ ಊಟ ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ

ಚಿತ್ರದುರ್ಗ: ಮದುವೆ ಊಟ ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥ

27
0

ಚಿತ್ರದುರ್ಗ: ಮದುವೆಯಲ್ಲಿ ಊಟ (Wedding Food) ಸೇವಿಸಿ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಗ್ರಾಮದಲ್ಲಿ ನಡೆದಿದೆ. ಜನರು ಕಲ್ಯಾಣ ಮಂಟಪದಲ್ಲಿ ಮದುವೆ ಊಟ ಸೇವನೆ ಬಳಿಕ‌ ಅಸ್ವಸ್ಥಗೊಂಡಿದ್ದಾರೆ. ಫುಡ್ ಪಾಯ್ಸನ್​ನಿಂದ 20ಕ್ಕೂ ಹೆಚ್ಚು ಜನರಿಗೆ ವಾಂತಿ ಶುರುವಾಗಿದೆ. ಅಸ್ವಸ್ಥರಿಗೆ ಭರಮಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮಕ್ಕಳು ಸೇರಿ 15 ಜನರು ಅಸ್ವಸ್ಥ

ಮಂಡ್ಯ: ಕ್ರಿಮಿನಾಶಕ ಮಿಶ್ರಿತ ನೀರು ಕುಡಿದು ಮಕ್ಕಳು ಸೇರಿ 15 ಜನರು ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ವಾಂತಿ ಭೇದಿಯಿಂದ ಬಳಲುತ್ತಿರುವ 15 ಜನರನ್ನು ಮಿಮ್ಸ್​ ಆಸ್ಪತ್ರಗೆ ದಾಖಲಿಸಲಾಗಿದೆ. ಇನ್ನು ಅಸ್ವಸ್ಥಗೊಂಡ 15 ಜನರು ಬಳ್ಳಾರಿ ಮೂಲದವರು ಎಂದು ತಿಳಿದು ಬಂದಿದೆ.

ಹೊಸಕೊಪ್ಪಲು ಗ್ರಾಮಕ್ಕೆ ಕಬ್ಬು ಕಟಾವಿಗೆಂದು ಬಳ್ಳಾರಿಯಿಂದ 30 ಜನರು ಬಂದಿದ್ದರು. ಇಂದು ಮಧ್ಯಾಹ್ನ (ನ. 28) ಊಟದ ನಂತರ, ಕಬ್ಬು ಕಟಾವು ಮಾಡುತ್ತಿದ್ದ ಸಮೀಪದ ಜಮೀನಿನಲ್ಲಿ ಕ್ರಿಮಿನಾಶಕ ಸಿಂಪಡಿಸಿದ ಡ್ರಮ್​​ನಲ್ಲಿದ್ದ ನೀರು ಕುಡಿದಿದ್ದಾರೆ. ಇದರಿಂದ  ಮಕ್ಕಳು ಸೇರಿ 15ಮಂದಿ ವಾಂತಿ ಭೇದಿಯಿಂದ ಬಳಲಿದ್ದಾರೆ. ಕೂಡಲೇ ಅವರನ್ನು ಮಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು  ಇಲ್ಲಿ ಕ್ಲಿಕ್  ಮಾಡಿ

LEAVE A REPLY

Please enter your comment!
Please enter your name here