Home ಕರ್ನಾಟಕ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ: ಇನ್ನಷ್ಟು ಮಾಹಿತಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ

ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ: ಇನ್ನಷ್ಟು ಮಾಹಿತಿ ಬಿಡುಗಡೆ ಮಾಡಿದ ಚುನಾವಣಾ ಆಯೋಗ

32
0

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಕುರಿತು ರಾಜಕೀಯ ಪಕ್ಷಗಳಿಂದ ಪಡೆದ ಅಂಕಿಅಂಶಗಳನ್ನು ಚುನಾವಣಾ ಆಯೋಗ ಇಂದು ಬಿಡುಗಡೆ ಮಾಡಿದ್ದು, ಅದನ್ನು ಮುಚ್ಚಿದ ಕವರ್‌ಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದೆ.

ಈ ವಿವರಗಳು ಎಪ್ರಿಲ್ 12, 2019 ರ ಹಿಂದಿನ ಅವಧಿಗೆ ಸಂಬಂಧಿಸಿದ್ದು ಎಂದು ನಂಬಲಾಗಿದೆ. ಈ ದಿನಾಂಕದ ನಂತರದ ಚುನಾವಣಾ ಬಾಂಡ್ ವಿವರಗಳನ್ನು ಚುನಾವಣಾ ಆಯೋಗ ಗುರುವಾರ ಸಾರ್ವಜನಿಕಗೊಳಿಸಿತ್ತು.

“… ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಸೀಲ್ಡ್ ಕವರ್‌ನಲ್ಲಿ ಡಿಜಿಟೈಸ್ ಮಾಡಿದ ದಾಖಲೆಯೊಂದಿಗೆ ಭೌತಿಕ ಪ್ರತಿಗಳನ್ನು ಹಿಂದಿರುಗಿಸಿದೆ. ಭಾರತದ ಚುನಾವಣಾ ಆಯೋಗವು ಇಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಿಂದ

ಡಿಜಿಟೈಸ್ ರೂಪದಲ್ಲಿ ಚುನಾವಣಾ ಬಾಂಡ್‌ಗಳ ಕುರಿತು ಸ್ವೀಕರಿಸಿದ ಡೇಟಾವನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ” ಎಂದು ಚುನಾವಣಾ ಆಯೋಗವ ಹೇಳಿಕೆಯಲ್ಲಿ ತಿಳಿಸಿದೆ

LEAVE A REPLY

Please enter your comment!
Please enter your name here