ಹೊಸದಿಲ್ಲಿ: ಎಲೆಕ್ಟೋರಲ್ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದ ಮೂರು ದಿನಗಳ ಹಿಂದೆ ತಲಾ ರೂ 1 ಕೋಟಿ ಮೌಲ್ಯದ 10,000 ಚುನಾವಣಾ ಬಾಂಡ್‌ಗಳ ಮುದ್ರಣಕ್ಕೆ ಕೇಂದ್ರ ವಿತ್ತ ಸಚಿವಾಲಯವು ಸೆಕ್ಯುರಿಟಿ ಪ್ರಿಂಟಿಂಗ್ ಎಂಡ್ ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾಗೆ (ಎಸ್‌ಪಿಎಂಸಿಐಎಲ್) ಅಂತಿಮ ಅನುಮೋದನೆ ನೀಡಿತ್ತು ಎಂದು indianexpress.com ವರದಿ ಮಾಡಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿದ 15 ದಿನಗಳ ನಂತರ, ಫೆಬ್ರವರಿ 28ರಂದು ವಿತ್ತ ಸಚಿವಾಲಯವು ಬಾಂಡ್‌ಗಳ ಮುದ್ರಣವನ್ನು ತಕ್ಷಣ ತಡೆಹಿಡಿಯುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚಿಸಿತ್ತು.
ವಿತ್ತ ಸಚಿವಾಲಯ ಹಾಗೂ ಎಸ್‌ಬಿಐ ನಡುವೆ ನಡೆದ ಇಮೇಲ್ ವಿನಿಮಯ ಕುರಿತು ಮಾಹಿತಿ ಹಕ್ಕು ಕಾಯಿದೆಯಡಿ ʼಇಂಡಿಯನ್ ಎಕ್ಸ್‌ಪ್ರೆಸ್ʼ ಕೋರಿದ ಮಾಹಿತಿಯಿಂದ ಈ ವಿವರಗಳು ಹೊರಬಿದ್ದಿವೆ.
ಕೇಂದ್ರ ಸರ್ಕಾರದ ಸೂಚನೆ ದೊರೆಯುವ ಮುಂಚೆ ಎಸ್‌ಪಿಎಂಸಿಐಎಲ್ 8,350 ಬಾಂಡ್‌ಗಳನ್ನು ಮುದ್ರಿಸಿ ಎಸ್‌ಬಿಐಗೆ ನೀಡಿತ್ತು.
ವಿತ್ತ ಸಚಿವಾಲಯವು 10,000 ಎಲೆಕ್ಟೋರಲ್ ಬಾಂಡ್‌ಗಳ 400 ಪುಸ್ತಿಕೆಗಳ ಮುದ್ರಣಕ್ಕೆ ಫೆಬ್ರವರಿ 12 ರಂದು ಅಂತಿಮ ಅನುಮೋದನೆ ನೀಡಿತ್ತು.