ಬೆಂಗಳೂರು: ಭಾರತ್ ಜೋಡೊ ಯಾತ್ರೆ ಕರ್ನಾಟಕ ದಾಟುತ್ತಿದ್ದಂತೆ, ರಾಜ್ಯದಲ್ಲಿ ಕೈ ನಾಯಕರು ಬಸ್ ಯಾತ್ರೆ ಮಾಡಲು ಮುಂದಾಗಿದ್ದಾರೆ. ಈ ಯಾತ್ರೆಗೆ ಹೈ ಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ಒಗ್ಗಟ್ಟಿನ ಮಂತ್ರದೊಂದಿಗೆ ಯಾತ್ರೆ ಮಾಡಲು ಸೂಚಿಸಿದೆ. ಬಸ್ ಯಾತ್ರೆ ಬಗ್ಗೆ ಇಂದು (ಡಿ.13) ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮಾತನಾಡಿ ಜನವರಿ 9ರಿಂದ ಜಿಲ್ಲಾ ಕೇಂದ್ರಗಳಲ್ಲಿ ಬಸ್ ಯಾತ್ರೆ (Bus yatre) ಮಾಡುತ್ತೇವೆ. ಬಸ್ ಯಾತ್ರೆ ಬಳಿಕ ಉತ್ತರ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿಕೆಶಿ ಪ್ರವಾಸ ಮಾಡುತ್ತಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ. ಮೊದಲು 9ನೇ ತಾರೀಖಿನಿಂದ ಎಲ್ಲರೂ ಒಗ್ಗಟ್ಟಾಗಿ ಜಿಲ್ಲಾ ಕೇಂದ್ರಗಳಿಗೆ ಹೋಗುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಟೀಮ್ ದಕ್ಷಿಣ ಕರ್ನಾಟಕ ಪ್ರವಾಸ ಮಾಡುತ್ತೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಇದನ್ನೂ ಓದಿ: ಸಿದ್ದು-ಡಿಕೆಶಿ ಪ್ರತ್ಯೇಕ ಬಸ್ ಯಾತ್ರಗೆ ಬ್ರೇಕ್, ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್
ಎರಡು ತಂಡಗಳಲ್ಲಿಒಟ್ಟಿಗೆ ಬಸ್ ಯಾತ್ರೆ ಮಾಡುತ್ತೇವೆ
ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ನಾವೆಲ್ಲರೂ ಒಟ್ಟಿಗೆ ಬಸ್ ಯಾತ್ರೆ ಮಾಡುತ್ತೇವೆ. ನಾವೆಲ್ಲರೂ ಒಟ್ಟಿಗೆ ಬಸ್ ಯಾತ್ರೆಯಲ್ಲಿ ಭಾಗಿಯಾಗುತ್ತೇವೆ. ಇದಾದ ಬಳಿಕ ನಾವು ಎರಡು ತಂಡಗಳನ್ನು ಮಾಡುತ್ತೇವೆ. ಮೊದಲ ಹಂತದ ಯಾತ್ರೆ ಬಳಿಕ, ವಿಧಾನಸಭಾ ಕ್ಷೇತ್ರದ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ. ಎರಡು ತಂಡಗಳಲ್ಲಿ, ಒಂದು ತಂಡ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಹೋಗುತ್ತೆ. ಇನ್ನೊಂದು ತಂಡ ನನ್ನ (ಸಿದ್ದರಾಮಯ್ಯ) ಅಧ್ಯಕ್ಷತೆಯಲ್ಲಿ ಇರುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಒಕ್ಕಲಿಗರನ್ನು ಸೆಳೆಯಲು ಕಾಂಗ್ರೆಸ್ ತಂತ್ರಗಾರಿಕೆ; ಡಿ 15ರಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ
ನಮ್ಮಿಬ್ಬರ ತಂಡದಲ್ಲಿ ಸಹ ಬೇರೆ ಬೇರೆ ನಾಯಕರು ಇರುತ್ತಾರೆ. ನಾವಿಬ್ಬರೂ ರಾಜ್ಯದ ಮೂಲೆ ಮೂಲೆಗು ಹೋಗುತ್ತೇವೆ. ಮೊದಲ ಹಂತದಲ್ಲಿ ದಕ್ಷಿಣ ಭಾಗವನ್ನು ಕವರ್ ಮಾಡುತ್ತೇವೆ. ನಂತರ ಉಳಿದ ಬಾಗ ಕವರ್ ಮಾಡುತ್ತೇವೆ. ನಾವು ಕ್ಲಾಸ್ ಸಮಾವೇಶ ಮಾಡುತ್ತೇವೆ, ಕ್ಯಾಸ್ಟ್ ಸಮಾವೇಶ ಮಾಡಲ್ಲಾ. ಬಿಜೆಪಿಯವರು SC-ST ಸಮಾವೇಶ ಮಾಡಿದರೇ ಅದು ಜಾತಿ ಅಲ್ವಾ? ಎಂದು ಪ್ರಶ್ನಿಸಿದರು.