Home Uncategorized ಜಪಾನ್‌ ನಲ್ಲಿ ಒಂದೇ ದಿನ 155 ಬಾರಿ ಭೂಕಂಪನ: ಮೃತರ ಸಂಖ್ಯೆ 24ಕ್ಕೆ ಏರಿಕೆ

ಜಪಾನ್‌ ನಲ್ಲಿ ಒಂದೇ ದಿನ 155 ಬಾರಿ ಭೂಕಂಪನ: ಮೃತರ ಸಂಖ್ಯೆ 24ಕ್ಕೆ ಏರಿಕೆ

20
0

ಟೋಕಿಯೊ: ಹೊಸ ವರ್ಷದಂದು ಅಪ್ಪಳಿಸಿರುವ ಭಾರಿ ಭೂಕಂಪದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಸರಣಿ ಕುಸಿತ ಸಂಭವಿಸುತ್ತಿದೆ. ಭೂಕಂಪನ ನಂತರದಲ್ಲಿ ಅವಶೇಷಗಳಡಿ ಸಿಲುಕಿರುವ ವ್ಯಕ್ತಿಗಳನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಹೊನ್ಷು ದ್ವೀಪದಲ್ಲಿರುವ ಇಶಿಕಾವಾ ಮೇಲೆ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಒಂದು ಮೀಟರ್ ಗಿಂತಲೂ ಎತ್ತರದ ಸುನಾಮಿ ಅಲೆಯನ್ನು ಸೃಷ್ಟಿಸಿದೆ. ಈ ಭೂಕಂಪದ ತೀವ್ರತೆಗೆ ಕಟ್ಟಡಗಳು ನೆಲಕ್ಕುರುಳಿದೆ.

ಬೆಳಕು ಹರಿಯುತ್ತಿದ್ದಂತೆಯೆ ನೋಟೊ ಪೆನಿನ್ಸುಲಾದಲ್ಲಿನ ಹಾನಿಯ ಪ್ರಮಾಣ ಅಂದಾಜಿಗೆ ಬರುತ್ತಿದ್ದು, ಕಟ್ಟಡಗಳು ಈಗಲೂ ನಡುಗುತ್ತಿವೆ. ಮನೆಗಳು ನೆಲಸಮವಾಗಿದ್ದರೆ, ಮೀನುಗಾರಿಕೆ ದೋಣಿಗಳು ಮುಳುಗಿ ಹೋಗಿವೆ ಇಲ್ಲವೆ ದಡದಿಂದ ಕೊಚ್ಚಿ ಹೋಗಿವೆ.

“ಇದು ಅಂತಹ ಬಲಿಷ್ಠ ಹೊಡೆತ” ಎಂದು ಶಿಕಾ ನಗರದಲ್ಲಿ ನೀರಿಗಾಗಿ ನೂರಾರು ಜನರ ಮಧ್ಯೆ ಸರತಿಯಲ್ಲಿ ನಿಂತಿದ್ದ 73 ವರ್ಷದ ತ್ಸುಗುಮಸ ಮಿಹಾರಾ AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here