Home Uncategorized ಜಲಾಶಯಗಳು ಇನ್ನೂ ತುಂಬಿಲ್ಲ: ಬೇಕಾಬಿಟ್ಟಿ ಬಳಸಬೇಡಿ, ವಿವೇಚನೆಯಿಂದ ನೀರು ಉಪಯೋಗಿಸಿ: ತಜ್ಞರ ಸಲಹೆ

ಜಲಾಶಯಗಳು ಇನ್ನೂ ತುಂಬಿಲ್ಲ: ಬೇಕಾಬಿಟ್ಟಿ ಬಳಸಬೇಡಿ, ವಿವೇಚನೆಯಿಂದ ನೀರು ಉಪಯೋಗಿಸಿ: ತಜ್ಞರ ಸಲಹೆ

16
0

ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ, ಆದರೂ ಜಲಾಶಯಗಳು ತುಂಬುವಷ್ಟು ಪ್ರಮಾಣದಲ್ಲಿ ಮಳೆಸುರಿದಿಲ್ಲ ಎಂದು ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದಾರೆ. ಬೆಂಗಳೂರು: ಜುಲೈ ತಿಂಗಳಿನಲ್ಲಿ ರಾಜ್ಯದಲ್ಲಿ ಉತ್ತಮ ಮುಂಗಾರು ಮಳೆಯಾಗಿದೆ, ಆದರೂ ಜಲಾಶಯಗಳು ತುಂಬುವಷ್ಟು ಪ್ರಮಾಣದಲ್ಲಿ ಮಳೆಸುರಿದಿಲ್ಲ ಎಂದು ತಜ್ಞರು ಮತ್ತು ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಜಲಾಶಯಗಳು ಶೇ. 67 ರಷ್ಟು ತುಂಬಿವೆ. ಒಳಹರಿವು ಕಡಿಮೆ ಇರುವ ಕಾರಣ  ನೀರನ್ನು ವಿವೇಚನೆಯಿಂದ ಬಳಸಬೇಕು ಎಂದು ಅಧಿಕಾರಿಗಳು ಮತ್ತು ತಜ್ಞರು ಸರ್ಕಾರಕ್ಕೆ ಸೂಚಿಸಿದ್ದಾರೆ.

ಜಲಾನಯನ ಪ್ರದೇಶಗಳಲ್ಲಿ ಮಳೆಯಿಲ್ಲದೆ, ನೈಋತ್ಯ ಮಾನ್ಸೂನ್ ದುರ್ಬಲವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವುದರಿಂದ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಉತ್ತಮವಾಗಿರುವಂತೆ ತೋರುತ್ತಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ:  ಜುಲೈನಲ್ಲಿ ಮುಂಗಾರು ಆರ್ಭಟ: ರಾಜ್ಯದಲ್ಲಿ ಶೇ.3ರಷ್ಟು ಹೆಚ್ಚುವರಿ ಮಳೆ!

ನೀರನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಸಂಬಂಧಪಟ್ಟ ಎಲ್ಲ ಪಾಲುದಾರರಿಗೆ ನಿರ್ದೇಶನಗಳನ್ನು ನೀಡಬೇಕೆಂದು ನಾವು ಜಲಸಂಪನ್ಮೂಲ ಇಲಾಖೆ ಮತ್ತು ರಾಜ್ಯ ಸರ್ಕಾರಕ್ಕೆ ವಿನಂತಿಸುತ್ತಿದ್ದೇವೆ ಎಂದಿದ್ದಾರೆ.

ಯಾವುದೇ ಕೊರತೆಯಾಗದಂತೆ ನೀರಿನ ಪರ್ಯಾಯ ಮೂಲಗಳನ್ನು ಸಹ  ಹುಡುಕಬೇಕಾಗಿದೆ. ಆದೇಶಗಳ ಹೊರತಾಗಿಯೂ ಅಂತರ್ಜಲ ಮಟ್ಟವನ್ನು ಮರುಪೂರಣಗೊಳಿಸುವುದು ಮತ್ತು ಮಳೆನೀರು ಕೊಯ್ಲುಗಳನ್ನು ಹೆಚ್ಚೆಚ್ಚು ಕೈಗೊಳ್ಳದಿರುವುದು ಅತ್ಯಂತ ದುರದೃಷ್ಟಕರ ಎಂದು ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ:  ರಾಜ್ಯದಲ್ಲಿ ಮಳೆ ಹಾನಿ, ಪರಿಹಾರದ ಬಗ್ಗೆ ಸಿದ್ದು ಸರ್ಕಾರ ನಿರ್ಲಕ್ಷ್ಯ: ಬಸವರಾಜ ಬೊಮ್ಮಾಯಿ ವಾಗ್ದಾಳಿ

ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿದೆ ಎಂದು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಳಹರಿವು ಈಗ 35-40 ಟಿಎಂಸಿಯಿಂದ 17 ಟಿಎಂಸಿಗೆ ಇಳಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here