ಜಾಗತಿಕ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಅವುಗಳಿಗೆ ಪರಿಹಾರ, ಮಾರ್ಗೋಪಾಯ ಕಂಡುಕೊಳ್ಳಲು ಜಿ-20 ಶೃಂಗಸಭೆ ಪ್ರಮುಖ ವೇದಿಕೆಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ,ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ಬೆಂಗಳೂರು: ಜಾಗತಿಕ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಅವುಗಳಿಗೆ ಪರಿಹಾರ, ಮಾರ್ಗೋಪಾಯ ಕಂಡುಕೊಳ್ಳಲು ಜಿ-20 ಶೃಂಗಸಭೆ ಪ್ರಮುಖ ವೇದಿಕೆಯಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ,ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ 2ನೇ ಜಿ-20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಉಪ ಗವರ್ನರ್ ಗಳ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಭಾರತ ಹೊಂದಿರುವ ಪರಿಣತಿ ಪ್ರದರ್ಶಿಸಲು ಮತ್ತು ಸದಸ್ಯ ರಾಷ್ಟ್ರಗಳ ಸಮಸ್ಯೆ ಆಲಿಸಲು ಮತ್ತು ಜಾಗತಿಕ ಒಳಿತಿಗಾಗಿ ಸತ್ಕಾರ್ಯ ಮುನ್ನಡೆಸಲು ಭಾರತಕ್ಕೆ ಸಿಕ್ಕಿರುವ ಜಿ-20 ಅಧ್ಯಕ್ಷ ಸ್ಥಾನವು ಅತಿದೊಡ್ಡ ಗೌರವವಾಗಿದೆ ಎಂದರು.
ಇದನ್ನೂ ಓದಿ: ಕಳೆದ ಒಂದೂವರೆ ವರ್ಷಗಳಲ್ಲಿ 450ಕ್ಕೂ ಹೆಚ್ಚು ಕೋಚ್ ಗಳ ನೇಮಕ- ಅನುರಾಗ್ ಸಿಂಗ್ ಠಾಕೂರ್
Union Minister @ianuragthakur delivers the opening remarks at the start of the #G20 2nd Finance and Central Bank Deputies (FCBD) meeting in #Bengaluru. pic.twitter.com/wqE2mvICCr
— Office of Mr. Anurag Thakur (@Anurag_Office) February 22, 2023
‘ಒಂದೇ ಭೂಮಿ, ಒಂದೇ ಕುಟುಂಬ, ಒಂದೇ ಭವಿಷ್ಯ’ ಎಂಬ ಶೃಂಗಸಭೆಯ ಘೋಷವಾಕ್ಯವು ಜಾಗತಿಕ ಅರ್ಥ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು ಮತ್ತು ಕಳವಳಕಾರಿ ಅನೇಕ ವಿಷಯಗಳ ವಿರುದ್ಧ ಭಾರತವು ಸಹಭಾಗಿತ್ವದ ಪ್ರಯತ್ನಗಳಲ್ಲಿ ವಹಿಸುವ ಮಹತ್ವದ ಪಾತ್ರವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು.
ಭಾರತದ ಅಧ್ಯಕ್ಷತೆಯಲ್ಲಿ ಫೆಬ್ರವರಿ 24 ಮತ್ತು 25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳ ಶೃಂಗಸಭೆಗೆ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್ ಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ ಒಟ್ಟು 72 ನಿಯೋಗಗಳು ಭಾಗವಹಿಸುವ ನಿರೀಕ್ಷೆಯಿದೆ.