Home Uncategorized ಜಾತಿಗಣತಿ ವರದಿ ನೀಡಲು ಸಮಯಾವಕಾಶ ಕೇಳಿದರೆ ಅವಕಾಶ ಕೊಡುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಜಾತಿಗಣತಿ ವರದಿ ನೀಡಲು ಸಮಯಾವಕಾಶ ಕೇಳಿದರೆ ಅವಕಾಶ ಕೊಡುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

7
0

ಮೈಸೂರು: ಜಾತಿಗಣತಿ ವರದಿ ನೀಡಲು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ಸಮಯಾವಕಾಶ ಕೇಳಿದರೆ ನಾನು ಅವರಿಗೆ ಸಮಯಾವಕಾಶ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಗರದ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾತಿಗಣತಿ ವರದಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಲಾವಕಾಶ ನೀಡಿಲ್ಲ ಎಂಬ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ವರದಿ ನೀಡಲು ಆಯೋಗದ ಅಧ್ಯಕ್ಷರು ಸಮಯಾವಕಾಶವನ್ನೇ ಕೇಳಿಲ್ಲ, ಕೇಳಿದ್ದರೆ ನಾನು ಅವಕಾಶ ಕೊಡುತ್ತೇನೆ ಎಂದು ಹೇಳಿದರು.

ಜಾತಿಗಣತಿ ವರದಿ ಇನ್ನೂ ಸರ್ಕಾರದ ಕೈ ಸೇರಿಲ್ಲ. ಆಗಲೇ ಅದು ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ. ಆ ವರದಿಯನ್ನು ಯಾರೂ ನೋಡಿಲ್ಲ, ವರದಿ ಕೈ ಸೇರುವುಸಕ್ಕೂ ಮೊದಲು ಆ ಅವರದಿ ಅವೈಜ್ಞಾನಿಕ ಎಂದರೆ ಹೇಗೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ರಾಮಮಂದಿರ ಉದ್ಘಾಟನೆಯಿಂದ ಬಿಜೆಪಿಯವರಿಗೆ ಮತ ಬರುತ್ತದೆ ಎಂಬುದು ತಪ್ಪು ಕಲ್ಪನೆ. ರಾಮಮಂದಿರ ಉದ್ಘಾಟನೆಯೇ ಅವರಿಗೆ ತಿರುಗುಬಾಣವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ನಮ್ಮದು ಜಾತ್ಯಾತೀತ ರಾಷ್ಟ್ರ, ಇಲ್ಲಿ ಒಂದು ಜಾತಿ ಧರ್ಮ ಮಾತ್ರ ಇಲ್ಲ, ಎಲ್ಲಾ ಧರ್ಮದವರು ಇದ್ದಾರೆ. ರಾಮನ ಬಗ್ಗೆ ಎಲ್ಲರಿಗೂ ಗೌರವ ಇದೆ.‌ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಉದ್ದೇಶ ಬಿಜೆಪಿಯವರದು. ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here