Home ಕರ್ನಾಟಕ ಜಿಎಸ್‌ಟಿ ಬೆಳವಣಿಗೆ ದರದ ಕುರಿತು ಮೋಹನ್‌ದಾಸ್ ಪೈ ಸಂದೇಹಕ್ಕೆ ಉತ್ತರಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ...

ಜಿಎಸ್‌ಟಿ ಬೆಳವಣಿಗೆ ದರದ ಕುರಿತು ಮೋಹನ್‌ದಾಸ್ ಪೈ ಸಂದೇಹಕ್ಕೆ ಉತ್ತರಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌ಕೆ ಅತೀಕ್

34
0

ಬೆಂಗಳೂರು: ಎಪ್ರಿಲ್ 2024 ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯ ಸಂಗ್ರಹವು ಅಭೂತಪೂರ್ವ ಗರಿಷ್ಠ ಮಟ್ಟವನ್ನು ತಲುಪಿದ್ದು, 2.10 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಹಣಕಾಸು ಸಚಿವಾಲಯ ತನ್ನ ಇತ್ತೀಚಿನ ಹೇಳಿಕೆಯಲ್ಲಿ ತಿಳಿಸಿದೆ.

ಜಿಎಸ್‌ಟಿ ಸಂಗ್ರಹವು ಮೊದಲ ಬಾರಿಗೆ ರೂ. 2 ಲಕ್ಷ ಕೋಟಿಗಳ ಮೈಲಿಗಲ್ಲನ್ನು ದಾಟಿದೆ. ಒಟ್ಟು ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ 12.4% ಬೆಳವಣಿಗೆಯಾಗಿದ್ದು, ಮರುಪಾವತಿಯ ನಂತರ ನಿವ್ವಳ ಆದಾಯವು ರೂ. 1.92 ಲಕ್ಷ ಕೋಟಿಯಲ್ಲಿದೆ. ಇದು ವರ್ಷದಿಂದ ವರ್ಷಕ್ಕೆ 17.1% ಬೆಳವಣಿಗೆಯನ್ನು ತೋರಿಸುತ್ತದೆ.

ಜಿಎಸ್‌ಟಿ ಬೆಳವಣಿಗೆ ದರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆ ಶುರುವಾಗಿದ್ದು, ಕರ್ನಾಟಕದಲ್ಲಿ ಜಿಎಸ್‌ಟಿಯ ಬೆಳವಣಿಗೆಯ ದರದಲ್ಲಿ ನಿಧಾನಗತಿಯ ಬಗ್ಗೆ ಭಾರತೀಯ ಉದ್ಯಮಿ ಟಿವಿ ಮೋಹನ್‌ದಾಸ್ ಪೈ ಕಳವಳ ವ್ಯಕ್ತಪಡಿಸಿದ್ದಾರೆ

ಕರ್ನಾಟಕದ ಜಿಎಸ್‌ಟಿ ದರದ ಬೆಳವಣಿಗೆಯು ಕುಂಠಿತವಾಗಿದೆ. ಕರ್ನಾಟಕ ಸರ್ಕಾರ ಈ ಬಗ್ಗೆ ಪರಿಶೀಲಿಸುವಂತೆ ಮೋಹನ್‌ದಾಸ್ ಪೈ ಅವರು ಟ್ವೀಟ್‌ ಮಾಡಿದ್ದಾರೆ.

ಪೈ ಅವರ ಟ್ವೀಟ್‌ ಗೆ ಪ್ರತಿಕ್ರಿಯಿಸಿದ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು, ಪೈ ಅವರ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ. ಪೈ ಅವರು ಉಲ್ಲೇಖಿಸಿದ ಅಂಕಿಅಂಶಗಳು ಎಪ್ರಿಲ್ 2023 ಕ್ಕೆ ಹೋಲಿಸಿದರೆ 2024 ರ ಎಪ್ರಿಲ್ ತಿಂಗಳಿಗೆ ಮಾತ್ರ ಸಂಬಂಧಿಸಿದೆ ಎಂದು ಅತೀಕ್‌ ಗಮನ ಸೆಳೆದಿದ್ದಾರೆ.

ಮತ್ತಷ್ಟು ಡೇಟಾವನ್ನು ಒದಗಿಸಿದ ಅತೀಕ್‌, 2023-24 ರ ಆರ್ಥಿಕ ವರ್ಷದಲ್ಲಿ ಕರ್ನಾಟಕದ GST ಸಂಗ್ರಹದ ಬೆಳವಣಿಗೆ ದರದ ತುಲನಾತ್ಮಕ ವಿಶ್ಲೇಷಣೆಯನ್ನು ಪ್ರಸ್ತುತಪಡಿಸಿದ್ದಾರೆ. ಅತೀಕ್ ಪ್ರಕಾರ, ಕರ್ನಾಟಕ GST ಸಂಗ್ರಹಣೆಯಲ್ಲಿ 18% ಬೆಳವಣಿಗೆ ದರವನ್ನು ಕಂಡಿದೆ, ಇದು ರಾಷ್ಟ್ರೀಯ ಸರಾಸರಿ 12% ಅನ್ನು ಮೀರಿಸಿದೆ. ಅವರು ಕರ್ನಾಟಕದ ಬೆಳವಣಿಗೆಯನ್ನು ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳೊಂದಿಗೆ ಹೋಲಿಸಿದ ಅತೀಕ್‌, ಕರ್ನಾಟಕದ ಜಿಎಸ್‌ ಟಿ ಬೆಳವಣಿಗೆ ನಿಧಾನಗತಿಯಲ್ಲಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಮಹಾರಾಷ್ಟ್ರ ಹಾಗೂ ಗುಜರಾತ್‌ ನ ಬೆಳವಣಿಗೆ ದರಗಳು ಕ್ರಮವಾಗಿ 18% ಮತ್ತು 10% ರಷ್ಟು ದಾಖಲಾಗಿವೆ.

ಹಿಂದಿನ ಹಣಕಾಸು ವರ್ಷದ ಸಂದರ್ಭದಲ್ಲಿ, 2021-22ರ ಕೋವಿಡ್ ಪೀಡಿತ ವರ್ಷದಲ್ಲಿ ಅಸಾಧಾರಣವಾದ ಬೆಳವಣಿಗೆಯಿಂದಾಗಿ ಜಿಎಸ್‌ಟಿ ಬೆಳವಣಿಗೆ ದರಗಳು ಎಲ್ಲಾ ರಾಜ್ಯಗಳಲ್ಲಿ ಕಡಿಮೆಯಾಗಿ ಕಂಡುಬರುತ್ತವೆ ಎಂದು ಅತೀಕ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here