Home Uncategorized ಜಿ.ಪಂ-ತಾ.ಪಂ ಚುನಾವಣೆ: ಸುಗ್ರೀವಾಜ್ಞೆ ಬದಲಿ ವಿಧೇಯಕ ಮಂಡನೆ

ಜಿ.ಪಂ-ತಾ.ಪಂ ಚುನಾವಣೆ: ಸುಗ್ರೀವಾಜ್ಞೆ ಬದಲಿ ವಿಧೇಯಕ ಮಂಡನೆ

24
0

ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.5: ಹೈಕೋರ್ಟ್ ರಿಟ್ ಅರ್ಜಿ ಸಂಖ್ಯೆ 20426/2021ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ, ಶಿವಮೊಗ್ಗ ಮತ್ತು ಶಿಕಾರಿಪುರ ತಾಲೂಕುಗಳನ್ನು ಹೊರತುಪಡಿಸಿ ತಾ.ಪಂ ಮತ್ತು ಜಿ.ಪಂ.ಗಳಿಗೆ ಅವುಗಳ ಜನಸಂಖ್ಯೆಯ ಅನುಪಾತದಲ್ಲಿ ಚುನಾವಣೆಗಾಗಿ ಜನಸಂಖ್ಯೆಯ ಮಿತಿಯನ್ನು ನಿಗದಿಪಡಿಸಿ, ಕಾಲಮಿತಿಯೊಳಗೆ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಯನ್ನು ನಡೆಸಲು ನಿರ್ದೇಶಿಸಿರುವುದನ್ನು ಪಾಲಿಸಲು ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ 1993 ಅನ್ನು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಸರಕಾರ ಪರಿಗಣಿಸಿದೆ.

ಈ ವಿಷಯವು ತುರ್ತು ಸ್ವರೂಪದ್ದಾಗಿರುವ್ಯದರಿಂದ ಮತ್ತು ರಾಜ್ಯ ವಿಧಾನಮಂಡಲದ ಉಭೈ ಸದನಗಳು ಅಧಿವೇಶನದಲ್ಲಿ ಇಲ್ಲದೆ ಇದಿದ್ದರಿಂದ ಈ ಮೇಲಿನ ಉದ್ದೇಶವನ್ನು ಸಾಧಿಸಲು ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್(ತಿದ್ದುಪಡಿ) ಅಧ್ಯಾದೇಶ,2023 ಅನ್ನು ಹೊರಡಿಸಲಾಗಿತ್ತು. ಈಗ ಮಂಡಿಸಿರುವ ಈ ವಿಧೇಯಕವು ಆ ಅಧ್ಯಾದೇಶಕ್ಕೆ ಬದಲಿ ವಿಧೇಯಕವಾಗಿದೆ.

LEAVE A REPLY

Please enter your comment!
Please enter your name here