Home Uncategorized ಜೀವಕ್ಕೆ ಕುತ್ತು ತಂದ ಸರಗಳ್ಳತನ: ಸರ್ಜರಿಗೆ ಒಳಗಾದ ಮಹಿಳೆ, ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು

ಜೀವಕ್ಕೆ ಕುತ್ತು ತಂದ ಸರಗಳ್ಳತನ: ಸರ್ಜರಿಗೆ ಒಳಗಾದ ಮಹಿಳೆ, ಆರೋಪಿಗಳ ಹುಡುಕಾಟದಲ್ಲಿ ಪೊಲೀಸರು

26
0

ಅಲ್ಲಲ್ಲಿ ಮಹಿಳೆಯರ ಕುತ್ತಿಗೆಯಿಂದ ಚೈನುಗಳ್ಳರು ಚೈನು ಕದಿಯುವ ಬಗ್ಗೆ ಕೇಳುತ್ತಿರುತ್ತೇವೆ. ಇದರಿಂದ ಮಹಿಳೆಯರ ಜೀವಕ್ಕೆ ಆಪತ್ತು ಉಂಟಾಗುತ್ತಿದೆ. ಬೆಂಗಳೂರು: ಅಲ್ಲಲ್ಲಿ ಮಹಿಳೆಯರ ಕುತ್ತಿಗೆಯಿಂದ ಚೈನುಗಳ್ಳರು ಚೈನು ಕದಿಯುವ ಬಗ್ಗೆ ಕೇಳುತ್ತಿರುತ್ತೇವೆ. ಇದರಿಂದ ಮಹಿಳೆಯರ ಜೀವಕ್ಕೆ ಆಪತ್ತು ಉಂಟಾಗುತ್ತಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ 55ರ ಹರೆಯದ ಮಹಿಳೆಯೊಬ್ಬರ ಕುತ್ತಿಗೆಯಿಂದ ಚೈನುಗಳ್ಳರು ಪ್ರಯತ್ನಿಸಿದಾಗ ಪತಿಯೊಂದಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕೆಳಗೆ ಬಿದ್ದು ಜೀವಕ್ಕೆ ಕುತ್ತು ಬಂದಿತ್ತು. ಸಂತ್ರಸ್ತೆ ಮಲಾರ್ ಎಂಬುವವರು ರಸ್ತೆಯಲ್ಲಿ ಬಿದ್ದಾಗ ಮುಖಕ್ಕೆ ತೀವ್ರ ಗಾಯಗಳಾಗಿದ್ದು, ಕೈ ಮುರಿದು ಕೆಲವು ಹಲ್ಲುಗಳನ್ನು ಕಳೆದುಕೊಂಡಿದ್ದಾರೆ. ಅವರ 58 ವರ್ಷದ ಉದ್ಯಮಿ ಪತಿ ಜಿಎಂ ವೇಲುಮಣಿ ಅವರಿಗೆ ಸಹ ಸಣ್ಣಪುಟ್ಟ ಏಟುಗಳು ಆಗಿವೆ.

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹತ್ತಿರವೊಂದರ ಶೋರೂಂ ಬಳಿ ಬಾಣಸವಾಡಿ ಮುಖ್ಯರಸ್ತೆಯ ಸರ್ವೀಸ್ ರಸ್ತೆಯಲ್ಲಿ ರಾತ್ರಿ 8.50 ರಿಂದ 8.55 ರ ನಡುವೆ ಕಳೆದ ಭಾನುವಾರ ಈ ಘಟನೆ ನಡೆದಿದೆ. ಕಳೆದ ತಿಂಗಳು ನಿಧನರಾದ ವೇಲುಮಣೈ ಅವರ ತಾಯಿಯ ಕ್ರಿಯಾವಿಧಿ ಮುಗಿಸಿಕೊಂಡು ಎಚ್‌ಎಸ್‌ಆರ್ ಲೇಔಟ್‌ನಿಂದ ಹೊರಮಾವು ರಾಜಣ್ಣ ಲೇಔಟ್‌ನಲ್ಲಿ ಮನೆಗೆ ಮರಳುತ್ತಿದ್ದರು.

ಮಾಲಾರ್ ಅವರು ಚಿನ್ನದ ಲೇಪಿತ ಸರ ಧರಿಸಿಕೊಂಡಿದ್ದರಿಂದ ಚೈನು ಕಳೆದುಕೊಂಡಿದ್ದು ನಮಗೆ ಬೇಸರವಲ್ಲ, ಅದಕ್ಕಿಂತ ಹೆಚ್ಚು ಮಾಲಾರ್ ಬಿದ್ದು ಗಾಯವಾಗಿದ್ದು ನಮಗೆ ತೀವ್ರ ಆತಂಕವನ್ನುಂಟುಮಾಡಿದೆ ಎನ್ನುತ್ತಾರೆ. 

ಬಾಣಸವಾಡಿ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದರಿಂದ ಸರ್ವಿಸ್ ರಸ್ತೆಯಲ್ಲಿ ಸಾಗಿದೆವು. ನಮ್ಮನ್ನು ಹಿಂಬಾಲಿಸುತ್ತಿದ್ದ ಆರೋಪಿಗಳು ಎಡಬದಿಯಿಂದ ಬಂದು ನನ್ನ ಪತ್ನಿಯ ಸರ ಕಿತ್ತುಕೊಳ್ಳಲು ಯತ್ನಿಸಿದರು ಎಂದು ಸರಗಳ್ಳರು ಚಿನ್ನ ಕದ್ದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ: ಇದರಿಂದ ನಾವಿಬ್ಬರೂ ರಸ್ತೆಗೆ ಬಿದ್ದೆವು. ಅದೃಷ್ಟವಶಾತ್, ನಮ್ಮ ಹಿಂದೆ ಯಾವುದೇ ವಾಹನಗಳು ಇರಲಿಲ್ಲ, ಇದ್ದಿದ್ದರೆ ನಮಗೆ ಪ್ರಾಣಾಪಯವಾಗುತ್ತಿತ್ತು. ನಾವು ಕೆಲವು ನಿಮಿಷಗಳ ಕಾಲ ಫುಟ್‌ಪಾತ್‌ನಲ್ಲಿ ಕುಳಿತುಕೊಂಡೆವು. ಕಾರಿನಲ್ಲಿ ದಂಪತಿ ಬಂದವರು ನನ್ನಾಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ಸಹಾಯ ಮಾಡಿದರು ಎಂದು ವೇಲುಮಣಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಖಾಸಗಿ ಆಸ್ಪತ್ರೆಯಲ್ಲಿ ಮಲಾರ್ ಮುಖದ ಮೇಲೆ ಹಲವು ಬಾರಿ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು.

ಸೋಮವಾರ ಬೆಳಗ್ಗೆ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಮಂಗಳವಾರ ಆಸ್ಪತ್ರೆಯಲ್ಲಿ ಮಲಾರ್ ಹೇಳಿಕೆಯನ್ನು ಪೊಲೀಸರು ಪಡೆದರು. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು, ಟ್ರಾಫಿಕ್ ಸಿಗ್ನಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ. “ನಾವು ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ ಎಂದರು. 

ಕತ್ತಲಾಗಿದ್ದರಿಂದ ಆರೋಪಿಗಳು ಪರಾರಿಯಾದ ದ್ವಿಚಕ್ರ ವಾಹನವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಸಂತ್ರಸ್ತರಿಗೆ ಸಹ ಬೈಕ್ ಅಥವಾ ಅದರ ನೋಂದಣಿ ಸಂಖ್ಯೆ ನೋಡಲು ಸಾಧ್ಯವಾಗಲಿಲ್ಲ. ಆರೋಪಿಗಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದರು.

LEAVE A REPLY

Please enter your comment!
Please enter your name here