ಬೆಂಗಳೂರು:
ಕರ್ತವ್ಯಕ್ಕೆ ಚಕ್ಕರ್ ಹಾಕಿ ಖಾಸಗಿಯಾಗಿ ಜೂಜಾಡುತ್ತಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಮಲ್ಲೇಶ್, ಲೋಕೇಶ್, ಗವಿಸಿದ್ಧಪ್ಪ, ಗೋವಿಂದ ಹಾಗೂ ಸತೀಶ್ ಸೇರಿ ಒಟ್ಟು 9 ಜನರ ವಿರುದ್ಧ ದೂರು ದಾಖಲಾಗಿದೆ.
ಆರೋಪಿಗಳಿಂದ 27,000 ನಗದು ಸೇರಿ ಕೃತ್ಯಕ್ಕೆ ಬಳಸಲು ಇಟ್ಟುಕೊಂಡಿದ್ದ 25,540 ನಗದು ಹಾಗೂ 52 ಇಸ್ಪೀಟು ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅ.20ರಂದು ರಾತ್ರಿ 12-45ಗಂಟೆಗೆ ದಕ್ಷಿಣ ವಲಯ ಡಿಸಿಪಿ ಹರೀಶ್ ಪಾಂಡೆ ನೇತೃತ್ವದ ತಂಡ ಜೆಪಿ ನಗರ 6ನೇ ಹಂತದ ಖಾಸಗಿ ಹೋಟೆಲ್ ಯೊಂದರಲ್ಲಿ ಜೂಜಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿತ್ತು.
ಘಟನೆಗೆ ಸಂಬಂಧಿಸಿದಂತೆ ಪುಟ್ಟೇನಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.