Home ಕರ್ನಾಟಕ ಜೂನ್ 26ರಿಂದ ಹೊಸ ದೂರಸಂಪರ್ಕ ಕಾಯ್ದೆ ಆಂಶಿಕ ಜಾರಿ

ಜೂನ್ 26ರಿಂದ ಹೊಸ ದೂರಸಂಪರ್ಕ ಕಾಯ್ದೆ ಆಂಶಿಕ ಜಾರಿ

16
0

ಹೊಸದಿಲ್ಲಿ: ದೂರಸಂಪರ್ಕ ಕಾಯ್ದೆ-2023ರ ಅಡಿಯಲ್ಲಿ ನಿರ್ಮಿಸಿದ ಕೆಲ ನಿಯಮಾವಳಿಗಳನ್ನು ಜೂನ್ 26ರಿಂದ ಜಾರಿಗೆ ತರಲಾಗುತ್ತದೆ. ಈ ಸಂಬಂಧ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಭಾರತೀಯ ಟೆಲಿಗ್ರಾಫ್ ಕಾಯ್ದೆ-1885, ವೈರ್‍ಲೆಸ್ ಟೆಲಿಗ್ರಫಿ ಕಾಯ್ದೆ-1993 ಮತ್ತು ಟೆಲಿಗ್ರಾಫ್ ವೈರ್ಸ್ (ಕಾನೂನುಬಾಹಿರ ಸ್ವಾಧೀನ) ಕಾಯ್ದೆ-1950ರ ಆಧಾರದಲ್ಲಿ ರಚಿಸಿದ್ದ ದೂರಸಂಪರ್ಕ ವಲಯದ ನಿಬಂಧನಾ ಚೌಕಟ್ಟಿನ ಬದಲು ಹೊಸ ನಿಯಮಾವಳಿ ಜಾರಿಗೆ ಬರಲಿದೆ.

ದೂರಸಂಪರ್ಕ ಕಾಯ್ದೆ-2023ರ ಸೆಕ್ಷನ್ 1,2, 10ರಿಂದ 30, 42ರಿಂದ 44, 46, 47, 50 ರಿಂದ 58, 61 ಮತ್ತು 62 ಜೂನ್ 26ರಂದು ಜಾರಿಗೆ ಬರಲಿದೆ ಎಂದು ಅಧಿಸೂಚನೆ ಹೇಳಿದೆ.

ಈ ನಿಯಮಾವಳಿಗಳ ಅಡಿಯಲ್ಲಿ ಸರ್ಕಾರ ಯಾವುದೇ ಅಥವಾ ಎಲ್ಲ ದೂರಸಂಪರ್ಕ ಸೇವೆಗಳು ಅಥವಾ ನೆಟ್‍ವರ್ಕ್‍ಗಳನ್ನು ಹಾಗೂ ಪೈಲಟ್ ಪ್ರಾಜೆಕ್ಟ್‍ಗಳನ್ನು ರಾಷ್ಟ್ರೀಯ ಭದ್ರತೆ, ವಿದೇಶಗಳ ಜತೆಗಿನ ಸ್ನೇಹಸಂಬಂಧ ಅಥವಾ ಯುದ್ಧ ಕಾಲದಲ್ಲಿ ನಿಯಂತ್ರಿಸುವ ಅಥವಾ ನಿರ್ವಹಣೆಯನ್ನು ಸ್ವಾಧೀನಪಡಿಸಿಕೊಳ್ಳಬಹುದಾಗಿದೆ.

LEAVE A REPLY

Please enter your comment!
Please enter your name here