Home Uncategorized ಜೂ. 15ಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ

ಜೂ. 15ಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ ಸಾಧ್ಯತೆ

26
0

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶವು ಜೂನ್ 15 ರಂದು ಪ್ರಕಟವಾಗುವ ಸಾಧ್ಯತೆಯಿದೆ. ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶವು ಜೂನ್ 15 ರಂದು ಪ್ರಕಟವಾಗುವ ಸಾಧ್ಯತೆಯಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ, ಜೂನ್ 12 ಮತ್ತು ಜೂನ್ 14 ರ ನಡುವೆ ಪ್ರಾಧಿಕಾರ ಫಲಿತಾಂಶ ಪ್ರಕಟಿಸಲು ಯೋಜಿಸಿತ್ತು. ಆದರೆ, ಯಾವುದೇ ನಿರ್ದಿಷ್ಟ ದಿನಾಂಕ ಹೇಳಿರಲಿಲ್ಲ.  ಆದಾಗ್ಯೂ, ಜೂನ್ 14 ಸಂಜೆಯೊಳಗೆ ಫಲಿತಾಂಶ ಪ್ರಕಟಿಸಲು ಸಿದ್ಧವಾಗಲಿದೆ ಎಂದು ಅವರು ಹೇಳಿದರು.

ಫಲಿತಾಂಶ ಸಿದ್ಧವಾಗಿದ್ದರೂ ಜೂನ್ 15 ರ ಬೆಳಿಗ್ಗೆಯವರೆಗೆ ಫಲಿತಾಂಶ ಪ್ರಕಟಿಸುವುದನ್ನು ಪ್ರಾಧಿಕಾರ ತಡೆಹಿಡಿಯುತ್ತದೆ ಎಂದು ಅವರು ಹೇಳಿದರು. ಸಂಜೆ ಫಲಿತಾಂಶ ಪ್ರಕಟಿಸಿದರೆ, ಅಭ್ಯರ್ಥಿಗಳು ರಿಸಲ್ಟ್ ಪಡೆಯಲು ಕಷ್ಟಪಡುತ್ತಾರೆ. ಯಾವುದೇ ಸರ್ವರ್ ಸಮಸ್ಯೆಗಳನ್ನು ಸರಿಪಡಿಸಲು ಸಹ ಕಷ್ಟವಾಗುತ್ತದೆ. ಈ ಕಾರಣದಿಂದಾಗಿ, ನಾವು ಜೂನ್ 15 ರ ಬೆಳಿಗ್ಗೆ ಫಲಿತಾಂಶಗಳನ್ನು ಪ್ರಕಟಿಸುತ್ತೇವೆ ಎಂದು ಅವರು ತಿಳಿಸಿದರು. 

ಅಭ್ಯರ್ಥಿಗಳು ಫಲಿತಾಂಶ ಪಡೆಯಲು ಸಾಕಷ್ಟು ಸಮಯವಿರುತ್ತದೆ ಮತ್ತು ಯಾವುದೇ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಮೇ 20 ಮತ್ತು 21 ರಂದು ನಡೆದಿದ ಕೆಸಿಇಟಿಯಲ್ಲಿ ಸುಮಾರು 2.60 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.
 

LEAVE A REPLY

Please enter your comment!
Please enter your name here