ಮಂಗಳೂರು, ಎ.12: ಜೋಕಟ್ಟೆಯ ಮುಹಿಯುದ್ದೀನ್ ಹೊಸ ಜುಮಾ ಮಸೀದಿಯ ವಾರ್ಷಿಕ ಮಹಾಸಭೆಯು ಗುರುವಾರ ನಡೆಯಿತು.
2024-25ನೆ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಹಾಜಿ ಬಿ.ಎಂ ಶರೀಫ್ ವೈಟ್ ಸ್ಟೋನ್ ಪುನರಾಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಹಾಜಿ ಬಿಎಸ್ ಶರೀಫ್, ಪ್ರಧಾನ ಕಾರ್ಯದರ್ಶಿಯಾಗಿ ಎಚ್ಎಂ ಬಾವ, ಜೊತೆ ಕಾರ್ಯದರ್ಶಿಯಾಗಿ ಹಾಜಿ ಜೆ. ಅಬ್ದುಲ್ ಖಾದರ್ ಮತ್ತು ಸಿರಾಜ್ ಮನೆಗಾರ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಮುಜೀಬುರ್ರಹ್ಮಾನ್, ಲೆಕ್ಕಪರಿಶೋಧಕರಾಗಿ ಹಾಜಿ ಟಿ. ಅಬೂಬಕ್ಕರ್, ಕೋಶಾಧಿಕಾರಿಯಾಗಿ ಹಾಜಿ ಎಂಎಸ್. ಶರೀಫ್ ಆಯ್ಕೆಗೊಂಡರು.
ಮದ್ರಸ ಉಸ್ತುವಾರಿಗಳಾಗಿ ಗೋವಾ ಖಾದರ್ ಮತ್ತು ಅಶ್ರಫ್ ಕರಾವಳಿ ಆಯ್ಕೆಗೊಂಡರು.