Home Uncategorized ಜೋರಾಯ್ತು ನಂದಿನಿ-ಅಮುಲ್ ಜಟಾಪಟಿ: 'ನಂದಿನಿ ಉಳಿಸಿ-ಅಮುಲ್ ತಿರಸ್ಕರಿಸಿ' ಅಭಿಯಾನ

ಜೋರಾಯ್ತು ನಂದಿನಿ-ಅಮುಲ್ ಜಟಾಪಟಿ: 'ನಂದಿನಿ ಉಳಿಸಿ-ಅಮುಲ್ ತಿರಸ್ಕರಿಸಿ' ಅಭಿಯಾನ

30
0

ನಂದಿನಿ ಬ್ರ್ಯಾಂಡ್ ನ್ನು ಹಿಮ್ಮೆಟ್ಟಿ ಗುಜರಾತ್ ಮೂಲದ ಅಮುಲ್ ಬ್ರ್ಯಾಂಡ್ ನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ವಿಷಯ ರಾಜಕೀಯ ತಿರುವು ಪಡೆದುಕೊಂಡು ಜೋರಾಗಿದೆ. ಡೈರಿ ಬ್ರ್ಯಾಂಡ್ ನಂದಿನಿಯನ್ನು ಹೊರಹಾಕಲು ಆಡಳಿತಾರೂಢ ಬಿಜೆಪಿ ಸಂಚು ಹೂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಬೆಂಗಳೂರು: ನಂದಿನಿ ಬ್ರ್ಯಾಂಡ್ ನ್ನು ಹಿಮ್ಮೆಟ್ಟಿ ಗುಜರಾತ್ ಮೂಲದ ಅಮುಲ್ ಬ್ರ್ಯಾಂಡ್ ನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ವಿಷಯ ರಾಜಕೀಯ ತಿರುವು ಪಡೆದುಕೊಂಡು ಜೋರಾಗಿದೆ. ಡೈರಿ ಬ್ರ್ಯಾಂಡ್ ನಂದಿನಿಯನ್ನು ಹೊರಹಾಕಲು ಆಡಳಿತಾರೂಢ ಬಿಜೆಪಿ ಸಂಚು ಹೂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.

Beware of @PMOIndia @narendramodi, @HMOIndia @AmitShah & their double engine govt!!

They will sell all the assets belonging to Kannadigas. After destroying our banks, they are now determined to destroy Nandini KMF – a brand built by our farmers.#SaveNandini pic.twitter.com/TtaffDnDMo
— Siddaramaiah (@siddaramaiah) April 7, 2023

ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ, ಮಾಧ್ಯಮಗಳಲ್ಲಿ ನಂದಿನಿ ಉಳಿಸಿ ಅಭಿಯಾನ ಜೋರು ಸದ್ದು ಮಾಡುತ್ತಿದೆ.ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ಅಮುಲ್ ತರುತ್ತಿದೆ. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದರೆ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದು ಅಮುಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಕನ್ನಡದಲ್ಲಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಗಳನ್ನು ತೆರೆದಿರುವ ಅಮುಲ್ ಲೀಟರ್ ಗೆ ನಿಗದಿಪಡಿಸಿರುವ ದರವನ್ನು ಸ್ಪಷ್ಟಪಡಿಸಿಲ್ಲ. 

ಕಾಯುವಿಕೆ ಇನ್ನೇನು ಮುಗಿದೇ ಹೋಯಿತು. ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ.

ಕ್ವಿಕ್ ಕಾಮರ್ಸ್ ವೇದಿಕೆಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಹೊಸ ತಾಜಾತನವು ನಿಮಗಾಗಿ ಕಾಯುತ್ತಿದೆ!#amul #amulindia #tasteofindia #tasteofkarnataka #tasteofhome #amulkannada pic.twitter.com/hk0rmMKSmW
— Amul Kannada (@amulkannada) April 6, 2023

ಸೇವ್‌ ನಂದಿನಿ, ಬಾಯ್ಕಾಟ್‌ ಅಮುಲ್‌: ಸದ್ಯ ಸರಕಾರ ಚುನಾವಣೆಯಲ್ಲಿ ಬ್ಯುಸಿಯಾಗಿರುವುದರಿಂದ ಅದು ಕೆಎಂಎಫ್‌ ಉಳಿಸಲು ಏನೂ ಮಾಡುವುದಿಲ್ಲ, ನಮ್ಮ ಕೆಎಂಎಫ್‌, ನಮ್ಮ ನಂದಿನಿಯನ್ನು ನಾವೇ ಉಳಿಸಿಕೊಳ್ಳೋಣ, ಜನರೇ ಮನಸ್ಸು ಮಾಡಿ ಅಮುಲ್‌ ಉತ್ಪನ್ನಗಳನ್ನು ತಿರಸ್ಕರಿಸೋಣ,” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕರೆ ನೀಡಲಾಗುತ್ತಿದೆ. ಬಾಯ್ಕಾಟ್ ಅಮುಲ್, ಸೇವ್ ನಂದಿನಿ ಕೆಎಂಎಫ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭವಾಗಿದೆ. 

ಸ್ವಾಭಿಮಾನಿ ಕನ್ನಡಿಗರೇ ನಂದಿನಿಯನ್ನು ಅಮುಲ್ ನಿಂದ ಉಳಿಸುವ ಮೊದಲು ಮಾಡಬೇಕಾಗಿರೋದು
ಇದನ್ನು ಸಮರ್ಥನೆ ಮಾಡುತ್ತಾ
ಕನ್ನಡನೆಲದ ಕನ್ನಡಿಗರ ಅಸ್ಮಿತೆ ಬಲಿಕೊಡಲು ನಿಂತಿರೋ ನಮ್ಮದೇ ನಾಡಿನ ಒಂದಷ್ಟು ಗುಲಾಮಗಿರಿಯ ಕೋಡಂಗಿಗಳನ್ನು ನಾವು ತಿರಸ್ಕಾರ ಮಾಡಿ ಕರ್ನಾಟಕ ಉಳಿಸಿಕೊಳ್ಳಬೇಕಿದೆ.
ಇವರಿಗೆ ಏನಾಗ್ತಿದೆ ಅನ್ನೋ ಅರಿವೇ ಇಲ್ಲ#SaveNandini pic.twitter.com/2mpiaqjyDx
— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) April 8, 2023

ಅಲಿಖಿತ ಸಹಕಾರಿ ನಿಯಮವನ್ನು ಉಲ್ಲಂಘಿಸಿ ರಾಜ್ಯದಲ್ಲಿ ಹಾಲು ಹಾಗೂ ಮೊಸರು ಮಾರಾಟ ಮಾಡುವ ಅಮುಲ್‌ ಕ್ರಮಕ್ಕೆ ಸಹಕಾರಿ ವಲಯ ಮಾತ್ರವಲ್ಲದೆ, ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ರಾಜಕೀಯ ನಾಯಕರೂ ತೀವ್ರ ವಿರೋಧ ವ್ಯಕ್ತಪಡಿಸಿ ಖಂಡಿಸಿದ್ದಾರೆ.

“ಒಂದು ವೇಳೆ ಅಮುಲ್‌ಗೆ ಸ್ಥಳೀಯ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ನೀಡಿದರೆ ಕನ್ನಡಿಗರ ಅಸ್ಮಿತೆಗೂ ಧಕ್ಕೆಯಾಗಲಿದೆ. ರಾಜ್ಯದ ಸಹಕಾರಿ ವಲಯ ಇಷ್ಟು ವರ್ಷಗಳಿಂದ ಗಳಿಸಿರುವ ಕೀರ್ತಿ ಮಣ್ಣು ಪಾಲಾಗಲಿದೆ,” ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.ಕೃತಕ ಅಭಾವ ಸೃಷ್ಟಿಸಿ ಅಮುಲ್ ಗೆ ವೇದಿಕೆ ಸಜ್ಜು ಮಾಡಿ ಕೊಡುತ್ತಿರುವ ಗುಜ್ಜುಗಳ ಹುನ್ನಾರ ಅರಿಯಿರಿ.#ನಂದಿನಿಉಳಿಸಿ #SaveNandini pic.twitter.com/c7CxOaPXte— Che_ಕೃಷ್ಣ

LEAVE A REPLY

Please enter your comment!
Please enter your name here