Home Uncategorized ಟಿಕೆಟ್ ರಹಿತ ಪ್ರಯಾಣ -ದಂಡಾಸ್ತ್ರಕ್ಕೆ ಮುಂದಾದ BMTC, ಪ್ರಯಾಣಿಕರಿಂದ ವಸೂಲಿಯಾದ ದಂಡವೆಷ್ಟು ಗೊತ್ತಾ!?

ಟಿಕೆಟ್ ರಹಿತ ಪ್ರಯಾಣ -ದಂಡಾಸ್ತ್ರಕ್ಕೆ ಮುಂದಾದ BMTC, ಪ್ರಯಾಣಿಕರಿಂದ ವಸೂಲಿಯಾದ ದಂಡವೆಷ್ಟು ಗೊತ್ತಾ!?

20
0

ಬೆಂಗಳೂರು;- ಟಿಕೆಟ್ ರಹಿತ ಪ್ರಯಾಣ ಹಿನ್ನೆಲೆ ಪ್ರಯಾಣಿಕರಿಂದ ಇದುವರೆಗೂ 6 ಲಕ್ಷ ರೂ. ದಂಡವನ್ನು BMTC ವಸೂಲಿ ಮಾಡಿದೆ.

ಹಾಗೆಯೇ ಸಂಸ್ಥೆಯ ನಿರ್ವಾಹಕರ ವಿರುದ್ಧ 906 ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ BMTC ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಅಲ್ಲದೆ, ಮಹಿಳಾ ಪ್ರಯಾಣಿಕರಿಗೆಂದೇ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿಸಿರುವ 387 ಪುರುಷ ಪ್ರಯಾಣಿಕರಿಂದ ಒಟ್ಟು 38,700ರೂ. ದಂಡ ವಿಧಿಸಲಾಗಿರುತ್ತದೆ. ಒಟ್ಟಾರೆಯಾಗಿ ಸೆಪ್ಟೆಂಬರ್-ತಿಂಗಳಲ್ಲಿ 3414 ಪ್ರಯಾಣಿಕರಿಂದ ಒಟ್ಟು 6,49,580 ರೂ.ದಂಡವನ್ನು ವಸೂಲಿ ಮಾಡಲಾಗಿದೆ.

ಪ್ರಯಾಣಿಕರು ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಅಧಿಕೃತ ಟಿಕೆಟ್, ದಿನದ ಪಾಸು, ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಬೇಕು. ಇದರಿಂದ ದಂಡ ಕಟ್ಟುವುದನ್ನು ತಡೆಯಬಹುದು ಎಂದು BMTC ತಿಳಿಸಿದೆ.

The post ಟಿಕೆಟ್ ರಹಿತ ಪ್ರಯಾಣ -ದಂಡಾಸ್ತ್ರಕ್ಕೆ ಮುಂದಾದ BMTC, ಪ್ರಯಾಣಿಕರಿಂದ ವಸೂಲಿಯಾದ ದಂಡವೆಷ್ಟು ಗೊತ್ತಾ!? appeared first on Ain Live News.

LEAVE A REPLY

Please enter your comment!
Please enter your name here