Home ಕರ್ನಾಟಕ ಟೀಕೆಗಳ ನಂತರ ʼಪ್ಯೂರ್‌ ವೆಜ್‌ ಮೋಡ್‌ʼ ಸಿಬ್ಬಂದಿಯ ಹಸಿರು ಸಮವಸ್ತ್ರ ಕೈಬಿಟ್ಟ ಝೊಮ್ಯಾಟೋ

ಟೀಕೆಗಳ ನಂತರ ʼಪ್ಯೂರ್‌ ವೆಜ್‌ ಮೋಡ್‌ʼ ಸಿಬ್ಬಂದಿಯ ಹಸಿರು ಸಮವಸ್ತ್ರ ಕೈಬಿಟ್ಟ ಝೊಮ್ಯಾಟೋ

28
0

ಹೊಸದಿಲ್ಲಿ: ಶುದ್ಧ ಸಸ್ಯಾಹಾರಿ ಮೋಡ್‌ (ಪ್ಯೂರ್‌ ವೆಜ್‌ ಮೋಡ್)‌ ಸೇವೆಯನ್ನು ಜನಪ್ರಿಯ ಫುಡ್‌ ಡೆಲಿವರಿ ಪ್ಲ್ಯಾಟ್‌ಫಾರ್ಮ್‌ ಝೊಮ್ಯಾಟೋ ಪರಿಚಯಿಸಿದ ಬೆನ್ನಲ್ಲೇ ಟೀಕೆಗಳ ಹಿನ್ನೆಲೆಯಲ್ಲಿ ಈ ಮೋಡ್‌ನ ಸಿಬ್ಬಂದಿಗೆ ಸೂಚಿಸಲಾಗಿದ್ದ ಹಸಿರು ಸಮವಸ್ತ್ರವನ್ನು ವಾಪಸ್‌ ಪಡೆದುಕೊಂಡಿದೆ ಎಂದು ಝೊಮ್ಯಾಟೋ ಸಿಇಒ ದೀಪೀಂದರ್‌ ಗೋಯೆಲ್‌ ತಿಳಿಸಿದ್ದಾರೆ.

“ಸಸ್ಯಾಹಾರಿಗಳಿಗಾಗಿ ನಾವು ತಂಡವನ್ನು ಹೊಂದುವುದನ್ನು ಮುಂದುವರಿಸಲಿದ್ದೇವೆ ಆದರೆ ಅದರ ಭಾಗವಾಗಿ ನಮ್ಮ ಸಸ್ಯಾಹಾರ ಆಹಾರ ಒದಗಿಸುವ ಸಿಬ್ಬಂದಿಯ ಸಮವಸ್ತ್ರವನ್ನು ಕೆಂಪು ಬದಲು ಹಸಿರು ಬಣ್ಣ ಬಳಸುವುದನ್ನು ನಿಲ್ಲಿಸುತ್ತೇವೆ. ನಮ್ಮ ಎಲ್ಲಾ ಫುಡ್‌ ಡೆಲಿವರಿ ಎಕ್ಸಿಕ್ಯೂಟಿವ್‌ಗಳು ಎಂದಿನಂತೆ ಕೆಂಪು ಬಣ್ಣದ ಉಡುಪು ಧರಿಸಲಿದ್ದಾರೆ. ಅಂದರೆ ಸಸ್ಯಾಹಾರಿ ಆರ್ಡರ್‌ ನಿರ್ವಹಿಸುವ ಸಿಬ್ಬಂದಿಯನ್ನು ಇತರರಿಗೆ ಗುರುತಿಸಲಾಗದು ಆದರೆ ಸಸ್ಯಾಹಾರಿ ತಿನಿಸು ಆರ್ಡರ್‌ ಮಾಡಿದವರು ಆ್ಯಪ್‌ʼನಲ್ಲಿ ಅದನ್ನು ನೋಡಬಹುದು,” ಎಂದು ಇಂದು ಗೋಯೆಲ್‌ ಟ್ವೀಟ್‌ ಮಾಡಿದ್ದಾರೆ.

“ಎಲ್ಲರೂ ಕೆಂಪು ಬಣ್ಣದ ಸಮವಸ್ತ್ರ ಧರಿಸುವುದರಿಂದ ಯಾವುದೇ ವಿಶೇಷ ದಿನಗಳಲ್ಲಿ ಮಾಂಸಾಹಾರಿ ಆಹಾರ ಡೆಲಿವರಿ ಮಾಡುವವರನ್ನು ಯಾರಾದರೂ ನಿರ್ಬಂಧಿಸುವುದರಿಂದ ತಡೆಯಬಹುದು. ನಮ್ಮ ಸವಾರರ ಸುರಕ್ಷತೆ ನಮಗೆ ಮುಖ್ಯವಾಗಿದೆ,” ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here