ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಅದರಿಂದ ಲಕ್ಷಗಟ್ಟಲೆ ಹಣ ಗಳಿಸಿದವರು, ಟೊಮ್ಯಾಟೊ ಕಳವಿನ ಸುದ್ದಿಯನ್ನು ಕೇಳುತ್ತಿದ್ದೇವೆ. ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಈಗ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಪತ್ತೆಯಾಗಿದೆ. ಕೋಲಾರ: ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಅದರಿಂದ ಲಕ್ಷಗಟ್ಟಲೆ ಹಣ ಗಳಿಸಿದವರು, ಟೊಮ್ಯಾಟೊ ಕಳವಿನ ಸುದ್ದಿಯನ್ನು ಕೇಳುತ್ತಿದ್ದೇವೆ. ಕೋಲಾರದ ಎಪಿಎಂಸಿಯಿಂದ ಸುಮಾರು 21 ಲಕ್ಷ ರೂ. ಮೌಲ್ಯದ ಟೊಮ್ಯಾಟೊ ಹೊತ್ತು ನಾಪತ್ತೆಯಾಗಿದ್ದ ಲಾರಿ ಈಗ ಗುಜರಾತ್ ರಾಜ್ಯದ ಅಹಮದಾಬಾದ್ ನಲ್ಲಿ ಪತ್ತೆಯಾಗಿದೆ.
ಮೊನ್ನೆ ಜುಲೈ 27 ರಂದು ಮಧ್ಯಾಹ್ನ ಕೋಲಾರದಿಂದ ಜೈಪುರಕ್ಕೆ ಸಾಗಿಸುತ್ತಿದ್ದ 21 ಲಕ್ಷ ರೂಪಾಯಿ ಮೌಲ್ಯದ 11 ಟನ್ ಟೊಮ್ಯಾಟೊ ನಿಗದಿತ ಸಮಯಕ್ಕೆ ತಲುಪಬೇಕಾದ ಸ್ಥಳಕ್ಕೆ ತಲುಪಿರಲಿಲ್ಲ.ಇದರಿಂದ ವ್ಯಾಪಾರಿ ಮುನಿರೆಡ್ಡಿ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದನ್ನೂ ಓದಿ: ಕೋಲಾರದಿಂದ ರಾಜಸ್ಥಾನಕ್ಕೆ ಹೊರಟ್ಟಿದ್ದ ಟೊಮೆಟೊ ತುಂಬಿದ ಲಾರಿ ನಾಪತ್ತೆ! ದೂರು ದಾಖಲು
ಜುಲೈ 29 ರಂದು ರಾತ್ರಿ 11 ಗಂಟೆಗೆ ಟ್ರಕ್ ಜೈಪುರ ತಲುಪಬೇಕಿತ್ತು. ಆದರೆ ಶನಿವಾರ ತಡರಾತ್ರಿಯಿಂದ ಚಾಲಕನನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಟ್ರಕ್‌ನಲ್ಲಿರುವ ಜಿಪಿಎಸ್ ಟ್ರ್ಯಾಕರ್ ಸಹ ಯಾವುದೇ ಚಲನೆಯನ್ನು ತೋರಿಸುತ್ತಿರಲಿಲ್ಲ.
ಇದನ್ನೂ ಓದಿ: ಕರ್ನಾಟಕ, ಆಂಧ್ರದಲ್ಲಿ ಮಳೆಯಿಂದ ಬೆಳೆಗೆ ಹಾನಿ; ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಕೆಜಿಗೆ 200 ರೂ.!
ಇದೀಗ ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಹೋಗಿ ಬೇಕಿದ್ದ ಲಾರಿ ಗುಜರಾತ್ನ ಅಹಮದಾಬಾದ್ನಲ್ಲಿ ಸಿಕ್ಕಿದ್ದು, ಲಾರಿ ಚಾಲಕ ಟೊಮೆಟೊವನ್ನು ಅರ್ಧ ಬೆಲೆಗೆ ಮಾರಾಟ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಚಾಲಕ ಅನ್ವರ್ ಲಾರಿಯಲ್ಲಿ ಅಳವಡಿಸಿದ್ದ ಜಿಪಿಎಸ್ ಕಿತ್ತೆಸೆದು ಅಹಮದಾಬಾದ್ಗೆ ಚಲಾಯಿಸಿಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿ ಟೊಮೆಟೊವನ್ನು ಅರ್ಧ ದರಕ್ಕೆ ಮಾರಾಟ ಮಾಡಿ ಇದೀಗ ತಲೆಮರಿಸಿಕೊಂಡಿದ್ದಾನೆ.
ಮೆಹತ್ ಟ್ರಾನ್ಸ್ ಪೋರ್ಟ್ ಮಾಲೀಕ ಸಾಧಿಕ್, ಕಳೆದ ರಾತ್ರಿಯೇ ಅಹಮದಾಬಾದ್ನತ್ತ ಹೊರಟ್ಟಿದ್ದು, ಲಾರಿ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇನ್ನು ಟೊಮೆಟೊ ಮಾರಾಟದಿಂದ ಬಂದ ಹಣದೊಂದಿಗೆ ನಾಪತ್ತೆಯಾಗಿರುವ ಚಾಲಕ ಅನ್ವರ್ ವಿರುದ್ದ ಅಹಮದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮಾಲೀಕ ಸಾಧಿಕ್ ನಿರ್ಧರಿಸಿದ್ದಾರೆ.