Home Uncategorized ಡಿಸಿಎಂ ಡಿಕೆಶಿಗೆ ಒಲಿದ ಅದೃಷ್ಟದ ಮನೆ ಕುಮಾರಕೃಪಾ; ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ 

ಡಿಸಿಎಂ ಡಿಕೆಶಿಗೆ ಒಲಿದ ಅದೃಷ್ಟದ ಮನೆ ಕುಮಾರಕೃಪಾ; ಕಾವೇರಿ ನಿವಾಸಕ್ಕೆ ಸಿಎಂ ಶಿಫ್ಟ್ 

20
0

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ವಾಸವಿದ್ದ ಅದೃಷ್ಟದ ಮನೆ, ಕುಮಾರಕೃಪ ಸರ್ಕಾರಿ ಬಂಗಲೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಯಕೆಯಂತೆ ಅವರಿಗೆ ಬಿಟ್ಟುಕೊಟ್ಟಿದ್ದಾರೆ. ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ವಾಸವಿದ್ದ ಅದೃಷ್ಟದ ಮನೆ, ಕುಮಾರಕೃಪ ಸರ್ಕಾರಿ ಬಂಗಲೆಯನ್ನು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಬಯಕೆಯಂತೆ ಅವರಿಗೆ ಬಿಟ್ಟುಕೊಟ್ಟಿದ್ದಾರೆ.

ಡಿಕೆ ಶಿವಕುಮಾರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ತಮ್ಮ ಅದೃಷ್ಟದ ಕುಮಾರಕೃಪ ಪೂರ್ವದ ನಂ.1 ವಸತಿಗೃಹಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ರಾಜ್ಯ ಸರ್ಕಾರ ಈಗ ಕುಮಾರಕೃಪ ವಸತಿಗೃಹವನ್ನು ಡಿಕೆ ಶಿವಕುಮಾರ್ ಅವರಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.

ಇದನ್ನು ಓದಿ: ಎರಡು ವರ್ಷಗಳ ಬಳಿಕ ಡಿಕೆ ಶಿವಕುಮಾರ್ ಮುಂದಿನ 8 ವರ್ಷ ರಾಜ್ಯದ ಸಿಎಂ: ಜ್ಯೋತಿಷಿ ಭವಿಷ್ಯ

ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನಿವಾಸಕ್ಕೆ ಶಿಫ್ಟ್ ಆದ ನಂತರ ಡಿಕೆ ಶಿವಕುಮಾರ್ ಅವರು ಕುಮಾರಕೃಪದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಉಳಿದಂತೆ ಇತರ ನೂತನ ಸಚಿವರಿಗೂ ಮನೆಗೆ ಹಂಚಿಕೆ ಮಾಡಲಾಗಿದ್ದು, ಮಾಜಿ ಸಿಎಂ ಬೊಮ್ಮಾಯಿ ಅವರಿದ್ದ ರೇಸ್ ಕೋರ್ಸ್ ರಸ್ತೆಯ ನಂ.1, ರೇಸ್ ವ್ಯೂ ಕಾಟೇಜ್ ಅನ್ನು ಎಂ.ಬಿ ಪಾಟೀಲ್‌ ಅವರಿಗೆ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿದ್ದ  ನಂ.4, ರೇಸ್ ವ್ಯೂ ಕಾಟೇಜ್ ಅನ್ನು ಪ್ರಿಯಾಂಕ್ ಖರ್ಗೆ ಅವರಿಗೆ, ಕೆ.ಜೆ ಜಾರ್ಜ್ ಅವರಿಗೆ ನಂ.2, ರೇಸ್ ವ್ಯೂ ಕಾಟೇಜ್ ಮತ್ತು ಜಿ. ಪರಮೇಶ್ವರ್ ಅವರಿಗೆ ಸದಾಶಿವನಗರದ ನಂ.94/ಎ ಮನೆಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದೆ.

LEAVE A REPLY

Please enter your comment!
Please enter your name here